2007ರ ಟಿ20 ವಿಶ್ವಕಪ್ ಹೀರೋ ಆರ್​.ಪಿ ಸಿಂಗ್ ತಂದೆ ಕೊರೊನಾ ಸೋಂಕಿಗೆ ಬಲಿ

ಮೇ 12 ರಂದು ಮಾಜಿ ಕ್ರಿಕೆಟಿಗ ರುದ್ರಪ್ರತಾಪ್ ಸಿಂಗ್ ಅವರ ತಂದೆ ಕೂಡ ಕೊರೊನಾ ವೈರಸ್‌ನಿಂದ ಮೃತಪಟ್ಟರು. ಆರ್.ಪಿ.ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು.

2007ರ ಟಿ20 ವಿಶ್ವಕಪ್ ಹೀರೋ ಆರ್​.ಪಿ ಸಿಂಗ್ ತಂದೆ ಕೊರೊನಾ ಸೋಂಕಿಗೆ ಬಲಿ
ಆರ್.ಪಿ ಸಿಂಗ್
Follow us
ಪೃಥ್ವಿಶಂಕರ
|

Updated on: May 12, 2021 | 3:43 PM

ಭಾರತದಲ್ಲಿ ಕೊರೊನಾ ವೈರಸ್‌ನಿಂದ ಪ್ರತಿದಿನ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4205 ಜನರು ಸಾವನ್ನಪ್ಪಿದ್ದಾರೆ. ಈ ಅನುಕ್ರಮವು ನಿರಂತರವಾಗಿ ಮುಂದುವರಿಯುತ್ತಿದೆ. ಮೇ 12 ರಂದು ಮಾಜಿ ಕ್ರಿಕೆಟಿಗ ರುದ್ರಪ್ರತಾಪ್ ಸಿಂಗ್ ಅವರ ತಂದೆ ಕೂಡ ಕೊರೊನಾ ವೈರಸ್‌ನಿಂದ ಮೃತಪಟ್ಟರು. ಆರ್.ಪಿ.ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೇ 12 ರಂದು ಅವರು ಕೊನೆಯುಸಿರೆಳೆದಿದ್ದಾರೆ. ಆರ್.ಪಿ ಸಿಂಗ್ ಅವರು ತಮ್ಮ ತಂದೆಯ ಅನಾರೋಗ್ಯದಿಂದಾಗಿ ಐಪಿಎಲ್ 2021 ಅನ್ನು ಮಧ್ಯದಲ್ಲಿ ತೊರೆದಿದ್ದರು. ಅವರು ಈ ಪಂದ್ಯಾವಳಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನ ತಂದೆ ಶಿವ ಪ್ರಸಾದ್ ಸಿಂಗ್ ನಿಧನರಾದರು ಎಂದು ನಾನು ತೀವ್ರ ದುಃಖದಿಂದ ಹೇಳಬೇಕಾಗಿದೆ. ಕೊರೊನಾದಿಂದಾಗಿ ಅವರು ಮೇ 12 ರಂದು ಸ್ವರ್ಗಸ್ಥರಾಗಿದ್ದಾರೆ ಎಂದು ಆರ್.ಪಿ.ಸಿಂಗ್, ತಮ್ಮ ತಂದೆಯ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ.

82 ಐಪಿಎಲ್ ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ ಆರ್​.ಪಿ ಸಿಂಗ್ ಅವರು 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು, ಆದರೆ ಅದರ ನಂತರವೂ ಅವರು ಅನೇಕ ಮಾಧ್ಯಮ ಬದ್ಧತೆಗಳನ್ನು ಮುಂದುವರೆಸಿದರು. 2007 ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ಆರ್‌ಪಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ, ಮಹೇಂದ್ರ ಸಿಂಗ್ ಧೋನಿ ಅವರ ವಿಶೇಷ ಸ್ನೇಹಿತ ಆರ್.ಪಿ.ಸಿಂಗ್ ಐಪಿಎಲ್‌ನಲ್ಲಿ ಕಾಮೆಂಟೆಟರ್​ ತಂಡದ ಭಾಗವಾಗಿದ್ದರು ಮತ್ತು ಇತರ ವ್ಯಾಖ್ಯಾನಕಾರರೊಂದಿಗೆ ಬಯೋ ಸೆಕ್ಯೂರ್ ಬಬಲ್‌ನಲ್ಲಿ ನೆಲೆಸಿದ್ದರು. ಆರ್​ಪಿ ಸಿಂಗ್ 2005 ರಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು ಮತ್ತು ಅವರು 2011 ರವರೆಗೆ ತಂಡದ ಭಾಗವಾಗಿದ್ದರು. ಭಾರತಕ್ಕಾಗಿ 14 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್, 58 ಏಕದಿನ ಪಂದ್ಯಗಳಲ್ಲಿ 69 ಮತ್ತು 10 ಟಿ 20 ಪಂದ್ಯಗಳಲ್ಲಿ 15 ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಅವರು 82 ಐಪಿಎಲ್ ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ.

ಪಿಯೂಷ್ ಚಾವ್ಲಾ ಕೂಡ ತಂದೆಯನ್ನು ಕಳೆದುಕೊಂಡರು ಕೆಲವು ದಿನಗಳ ಹಿಂದೆ ಕ್ರಿಕೆಟಿಗ ಪಿಯೂಷ್ ಚಾವ್ಲಾ ಅವರ ತಂದೆ ಪ್ರಮೋದ್ ಚಾವ್ಲಾ ಕೂಡ ಕೊರೊನಾದಿಂದ ಸಾವನ್ನಪ್ಪಿದರು. ಚಾವ್ಲಾ ಇನ್ನೂ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ಪಿಯುಷ್ ಚಾವ್ಲಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ತಂದೆಯ ಚಿತ್ರವನ್ನು ಪೋಸ್ಟ್ ಮಾಡಿ, ನನ್ನ ತಂದೆ ಪ್ರಮೋದ್ ಚಾವ್ಲಾ ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ನಾವು ಬಹಳ ದುಃಖದಿಂದ ತಿಳಿಸಬೇಕಾಗಿದೆ. ಅವರು ಕೋವಿಡ್ ಆಗಿದ್ದರು ಮತ್ತು ಹಲವು ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ಟೀಂ ಇಂಡಿಯಾ ಆಟಗಾರ ಪಿಯೂಷ್ ಚಾವ್ಲಾಗೆ ಪಿತೃ ವಿಯೋಗ; ಕೊರೊನಾ ಸೋಂಕಿಗೆ ಬಲಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ