ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ನೀಡಿದ ಅದ್ಭುತ ಪ್ರದರ್ಶನವನ್ನು ಯಾರೂ ಮರೆಯುವಂತಿಲ್ಲ. ಆದರೆ, ಈ ಅದ್ಭುತ ಪ್ರದರ್ಶನಕ್ಕೂ ಮೊದಲು ಅವರು ಹಿಗ್ಗಾ-ಮುಗ್ಗಾ ಟ್ರೋಲ್ ಆಗಿದ್ದರು. ಸತತ ಕ್ಯಾಚ್ ಬಿಡುವ ಮೂಲಕ ಟ್ರೋಲ್ ಮಾಡುವವರಿಗೆ ಆಹಾರವಾಗಿದ್ದರು. ನಂತರ ಪುಟಿದೆದ್ದ ರಿಷಬ್ ತನ್ನ ಓಟವನ್ನು ನಿಲ್ಲಿಸಿಲ್ಲ. ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರವಲ್ಲದೆ ಭಾರತ ನೆಲದಲ್ಲೂ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಅವರು ಹಿಡಿದ ಅದ್ಭುತ ಕ್ಯಾಚ್ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾ ನೆಲದಲ್ಲಿ ರಿಷಬ್ ಕ್ಯಾಚ್ ಬಿಟ್ಟಿದ್ದಕ್ಕೆ ಸಾಕಷ್ಟು ಜನರು ‘ಈ ಆಟಗಾರರನ್ನು ಏಕೆ ಹಾಕಿಕೊಂಡಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದರು. ಈ ರೀತಿಯ ಟ್ರೋಲ್ಗಳನ್ನು ನೋಡಿ ಮೈದಾನದಲ್ಲಿ ಆಡುವುದಿದೆಯಲ್ಲ ಅದು ನಿಜಕ್ಕೂ ಒಂದು ಸವಾಲಿನ ಕೆಲಸ. ಮೈದಾನದಲ್ಲಿ ಇರುವ ಒತ್ತಡ ಒಂದು ಕಡೆ ಆದರೆ, ಬ್ಯಾಟ್ ಬೀಸುವಾಗ, ಫೀಲ್ಡಿಂಗ್ ಮಾಡುವಾಗ ನೆನಪಾಗುವ ಟ್ರೋಲ್ಗಳು ಮತ್ತೊಂದು ಕಡೆ. ಇದೆಲ್ಲದರ ವಿರುದ್ಧ ಸಿಡಿದೆದ್ದ ರಿಷಬ್, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Ind vs Eng, 2nd Test, Day 2, LIVE Score: ಸಿರಾಜ್ಗೆ ಮೊದಲ ಎಸೆತದಲ್ಲೇ ವಿಕೆಟ್, ಶತಕ ಪೂರೈಸಿದ ಇಂಗ್ಲೆಂಡ್
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಅಷ್ಟೇ. 55 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್ಗಳು ಒಳಗೊಂಡಿವೆ. ಇನ್ನು, ಅವರು ಹಿಡಿದ ಅದ್ಭುತ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Is that a spiderman??
What a catch!
Rishab Pant! U beauty! ?#INDvsENG #RishabhPant pic.twitter.com/p7srF7TPQW— ThatFanBoy❣️?? (@SiddhuYour) February 14, 2021
ಆಸ್ಟ್ರೇಲಿಯಾ ಐದು ವಿಕೆಟ್ಗಳನ್ನು ಕಳೆದುಕೊಂಡು ಆಡುತ್ತಿತ್ತು. ಈ ವೇಳೆ, ಮೊಹ್ಮದ್ ಸಿರಾಜ್ ಹಾಕಿದ ಬೌಲ್ಅನ್ನು ಇಂಗ್ಲೆಂಡ್ ಆಟಗಾರ ಆಲಿ ಪೋಪ್ ಬೌಂಡರಿಗೆ ಕಳುಹಿಸಲು ಹೋದರು. ಆದರೆ ಅದು ಎಡ್ಜ್ ಆಗಿ ಬೌಲ್ ನೇರವಾಗಿ ಪಂತ್ ಕೈ ಬಳಿ ಹೋಗಿತ್ತು. ಪಂತ್ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ICC award Rishabh Pant ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಬ್ ಪಂತ್ ಅದ್ಭುತ ಆಟಕ್ಕೆ ICC ಯಿಂದ ಸಿಕ್ತು ವಿಶೇಷ ಗೌರವ!
Published On - 2:54 pm, Sun, 14 February 21