RR vs DC, IPL 2021: ರಿಷಭ್ ಪಂತ್ ರನೌಟ್ ಮಾಡಿ ಮೈದಾನದಲ್ಲೇ ಸ್ಟೆಪ್ ಹಾಕಿದ ಪರಾಗ್!
ರಿಷಭ್ ಪಂತ್ ವಿಕೆಟ್ ರಾಜಸ್ಥಾನ್ಗೆ ಅಗತ್ಯವಾಗಿತ್ತು. ಅರ್ಧಶತಕ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ 12.4ನೇ ಬಾಲ್ಗೆ ಅವಸರದ ಓಟಕ್ಕೆ ಮುಂದಾಗಿ ಔಟ್ ಆದರು. ರಿಯಾನ್ ಪರಾಗ್ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ತಗುಲಿತು.
ಮುಂಬೈ: ಇಲ್ಲಿ ನಡೆಯುತ್ತಿರುವ ಐಪಿಎಲ್ 2021ರ 7ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಣೆಸಾಡುತ್ತಿದೆ. ಪಂದ್ಯದ ಮೊದಲನೇ ಇನ್ನಿಂಗ್ಸ್ ವೇಳೆ ರಿಯಾನ್ ಪರಾಗ್ ಡ್ಯಾನ್ಸ್ ಮಾಡಿದ್ದಾರೆ. ಡೆಲ್ಲಿ ಪರ ಪ್ರಮುಖ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರನಡೆಯುತ್ತಿದ್ದರು. ಆದರೆ, ಈ ನಡುವೆ ಡೆಲ್ಲಿ ನಾಯಕ ರಿಷಭ್ ಪಂತ್ ಉತ್ತಮ ಆಟ ತೋರಿದ್ದರು. ಅರ್ಧಶತಕ ಬಾರಿಸಿ ತಂಡವನ್ನು ಮುನ್ನಡೆಸುತ್ತಿದ್ದರು.
ರಿಷಭ್ ಪಂತ್ ವಿಕೆಟ್ ರಾಜಸ್ಥಾನ್ಗೆ ಅಗತ್ಯವಾಗಿತ್ತು. ಅರ್ಧಶತಕ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ 12.4ನೇ ಬಾಲ್ಗೆ ಅವಸರದ ಓಟಕ್ಕೆ ಮುಂದಾಗಿ ಔಟ್ ಆದರು. ರಿಯಾನ್ ಪರಾಗ್ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ತಗುಲಿತು. ಪರಾಗ್ ಡೈರೆಕ್ಟ್ ಹಿಟ್ಗೆ ಪಂತ್ ವಿಕೆಟ್ ಒಪ್ಪಿಸಿ ನಿರ್ಗಮಿಸಬೇಕಾಯ್ತು. ಡೆಲ್ಲಿ ತಂಡದ ಮುಖ್ಯ ವಿಕೆಟ್ ಪತನದ ಸಂಭ್ರಮದಲ್ಲಿ ರಿಯಾನ್ ಪರಾಗ್ ಮೈದಾನದಲ್ಲೇ ಸ್ಟೆಪ್ ಹಾಕಿದರು. ರಿಯಾನ್ ಪರಾಗ್ ಹೊಸ ಸ್ಟೆಪ್ ಟ್ವಿಟರ್ನಲ್ಲಿ ಸದ್ದು ಮಾಡುತ್ತಿದೆ. ಐಪಿಎಲ್ ಟ್ವಿಟರ್ ಹ್ಯಾಂಡಲ್ ಡ್ಯಾನ್ಸ್ ತುಣುಕನ್ನು ಹಂಚಿಕೊಂಡಿದೆ.
The mood in @rajasthanroyals camp is being perfectly depicted by @ParagRiyan on the field. The delightful Bihu dance returns. ?https://t.co/SClUCyj1Xs #RRvDC #VIVOIPL pic.twitter.com/XFkG8Xkx6z
— IndianPremierLeague (@IPL) April 15, 2021
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್ಗೆ 148 ರನ್ಗಳ ಟಾರ್ಗೆಟ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು 32 ಬಾಲ್ಗೆ 51 ರನ್ ದಾಖಲಿಸಿದ್ದಾರೆ. ಉಳಿದಂತೆ ಅಗ್ರಕ್ರಮಾಂಕದ ದಾಂಡಿಗರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಪೃಥ್ವಿ ಶಾ, ಧವನ್, ಸ್ಟಾಯಿನಸ್, ರಹಾನೆ ಒಂದಂಕಿ ದಾಟದೆ ಬ್ಯಾಟಿಂಗ್ ವಿಭಾಗ ವಿಫಲಗೊಂಡಿದೆ.
ರಾಜಸ್ಥಾನ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಉನಾದ್ಕತ್ 4 ಓವರ್ಗೆ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದಾರೆ. ಮಾರಿಸ್ ಹಾಗೂ ತೆವಾಟಿಯಾ ದುಬಾರಿಯಾಗಿದ್ದು ಬಿಟ್ಟರೆ ಉಳಿದ ಬೌಲರ್ಗಳು ಡೆಲ್ಲಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ತಫಿಜುರ್ 2 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: RR vs DC Live Score, IPL 2021: ಪಂತ್ ಏಕಾಂಗಿ ಹೋರಾಟ, ಉನಾದ್ಕತ್ ಸೂಪರ್ ಬೌಲಿಂಗ್; ರಾಜಸ್ಥಾನ್ಗೆ 148 ರನ್ ಗುರಿ
ಇದನ್ನೂ ಓದಿ: Tamannaah Bhatia: ತಮನ್ನಾ ಭಾಟಿಯಾ ಹಿಂದಿರುವುದು ವಿರಾಟ್ ಕೊಹ್ಲಿ…?
Published On - 9:30 pm, Thu, 15 April 21