ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಹಿಡಿದ ಖುಷಿಗೆ ರಿಯಾನ್ ಪರಾಗ್ ಹಾಗೂ ತೇವಾಟಿಯಾ ಮೈದಾನದಲ್ಲೇ ಸೆಲ್ಫೀ ತೆಗೆದುಕೊಂಡಂತೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ಗೆ ಇಳಿದ ಕೋಲ್ಕತ್ತಾ ನೈಟ್ ರೈಡರ್ಸ್ ಕಳಪೆ ಆರಂಭ ಕಂಡಿತ್ತು. ಎಲ್ಲರೂ ಬಹುಬೇಗ ಪೆವಿಲಿಯನ್ ಸೇರಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್ ಕಳಪೆ ಆರಂಭ ಕಂಡಿತ್ತು. ದಿನೇಶ್ ಕಾರ್ತಿಕ್, ರಸೆಲ್ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿ ಕೆಕೆಆರ್ ರನ್ ಹೆಚ್ಚಿಸಿದ್ದರು. ಹೀಗಾಗಿ, ಇಂದಿನ ಪಂದ್ಯಗಳಲ್ಲಿ ಈ ವಿಕೆಟ್ಗಳನ್ನು ಪಡೆಯೋದು ಆರ್ಆರ್ಗೆ ತುಂಬಾನೇ ಮುಖ್ಯವಾಗಿತ್ತು.
ಕೋಲ್ಕತ್ತಾ 127ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಆಡುತ್ತಿತ್ತು. ಆಗ ಕಮ್ಮಿನ್ಸ್ ಹೊಡಿಬಡಿ ಆಟಕ್ಕೆ ಮುಂದಾದರು. ಕೊನೆಯ ಓವರ್ನ ಮೊದಲ ಬಾಲ್ಅನ್ನು ಸಿಕ್ಸರ್ ಬಾರಿಸಿದರು. ಎರಡನೇ ಬಾಲ್ ಕೂಡ ಸಿಕ್ಸ್ ಹೊಡೆಯೋಕೆ ಹೋದರು. ಆದರೆ, ಈ ಬಾಲ್ ರಿಯಾನ್ ಪರಾಗ್ ಕೈ ಸೇರಿತ್ತು. ಈ ಖುಷಿಗೆ ರಿಯಾನ್ ಪರಾಗ್ ಹಾಗೂ ರಾಹುಲ್ ತೇವಾಟಿಯಾ ಸೆಲ್ಫೀ ತೆಗೆದುಕೊಂಡಂತೆ ನಟಿಸಿದರು.
New celebration in the market ?#RiyanParag #Rahultewatia pic.twitter.com/8pLR7LJtJM
— COLONEL (@CloudyCrick) April 24, 2021
Ads of Oppo and Vivo be like??#IPL2021 #RiyanParag #RRvKKR pic.twitter.com/Lpnrt59Ssn
— ʜᴀʀꜱʜ??™?? Masked? (@HarshRo45_) April 24, 2021
Meet the Jay and Veeru of Indian cricket #RiyanParag and #RahulTewatia #IPL2021 #KKRvRR pic.twitter.com/hMKmKD1mOd
— Harshit Jani (@hsjani) April 24, 2021
Seriously? Wtf was that? ?#IPL2021 #RiyanParag #RRvKKR #Tewatia pic.twitter.com/wJZpF3n0et
— Sriram Kumar (@batteringram92) April 24, 2021