Road Safety World Series 2021: ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ರೋಚಕ ಜಯಗಳಿಸಿ ಫೈನಲ್​ಗೇರಿದ ಇಂಡಿಯಾ ಲೆಜೆಂಡ್ಸ್

| Updated By: Digi Tech Desk

Updated on: Mar 19, 2021 | 7:01 PM

Road Safety World Series 2021: ಯುವರಾಜ್​ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ, ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ ಹೊಡೆದರು. ಇದರೊಂದಿಗೆ ಭಾರತ ಮೂರು ವಿಕೆಟ್‌ಗಳಿಗೆ 218 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತು.

Road Safety World Series 2021: ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ರೋಚಕ ಜಯಗಳಿಸಿ ಫೈನಲ್​ಗೇರಿದ ಇಂಡಿಯಾ ಲೆಜೆಂಡ್ಸ್
ಇಂಡಿಯಾ ಲೆಜೆಂಡ್ಸ್
Follow us on

ರಾಯ್​ಪುರ್​: ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ಲೆಜೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ನಡುವಿನ ರಸ್ತೆ ಸುರಕ್ಷತೆ ವಿಶ್ವ ಸರಣಿಯ ಸೆಮಿ ಫೈನಲ್​ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಭರ್ಜರಿ ಜಯ ಗಳಿಸಿ ಫೈನಲ್‌ ಪ್ರವೇಶಿಸಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡವು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಲೆಜೆಂಡ್ಸ್ ಮೂರು ವಿಕೆಟ್‌ ಕಳೆದುಕೊಂಡು 218 ರನ್ ಗಳಿಸಿತು. ಭಾರತ ಪರ ಸಚಿನ್ ನಾಯಕತ್ವದ ಇನ್ನಿಂಗ್ಸ್ ಆಡಿದ್ದು 65 ರನ್ ಗಳಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಯುವರಾಜ್ ಸಿಂಗ್ ಆರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 49 ರನ್ ಗಳಿಸಿದರು.

ಆರ್. ವಿನಯ್ ಕುಮಾರ್ ಅದ್ಭುತ ಬೌಲಿಂಗ್​
ನಂತರ, ಆರ್ ವಿನಯ್ ಕುಮಾರ್ ಅವರ ಅದ್ಭುತ ಬೌಲಿಂಗ್​ನಿಂದಾಗಿ ವೆಸ್ಟ್ ಇಂಡೀಸ್ ಅಂತಿಮವಾಗಿ ಆರು ವಿಕೆಟ್​ ಕಳೆದುಕೊಂಡು 206 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಂಡೀಸ್ ಪರ ಡ್ವೇನ್ ಸ್ಮಿತ್ 63 ಮತ್ತು ನರಸಿಂಗ್ ದಿಯೋನಾರಾಯಣ್ 56 ರನ್ ಗಳಿಸಿದರು. ಆದರೆ ಈ ಇಬ್ಬರ ಆಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆರ್ ವಿನಯ್ ಕುಮಾರ್ ಕೊನೆಯ ಎರಡು ಓವರ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್​ ಮಾಡಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

ಡ್ವೇನ್ ಸ್ಮಿತ್ ವೆಸ್ಟ್ ಇಂಡೀಸ್ ಪರ ಅಬ್ಬರದ ಬ್ಯಾಟಿಂಗ್
218 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡ್ವೇನ್ ಸ್ಮಿತ್ ವೆಸ್ಟ್ ಇಂಡೀಸ್ ಪರ ಅಬ್ಬರದ ಬ್ಯಾಟಿಂಗ್​ ಮಾಡಿದರು. ಸ್ಮಿತ್, ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 36 ಎಸೆತಗಳಲ್ಲಿ 63 ರನ್ ಗಳಿಸಿದರು. ಅವರು ನರಸಿಂಗ್ ದಿಯೋನಾರಾಯಣ್ (59) ಅವರೊಂದಿಗೆ 99 ರನ್ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಪಾಲುದಾರಿಕೆಯನ್ನು ಕೇವಲ 58 ಎಸೆತಗಳಲ್ಲಿ ಮಾಡಲಾಯಿತು. ಇಬ್ಬರೂ ಮೈದಾನದಲ್ಲಿ ಇರುವವರೆಗೂ ಭಾರತ ಗೆಲುವಿನಿಂದ ಕೊಂಚ ದೂರದಲ್ಲಿತ್ತು. ಆದರೆ ಇರ್ಫಾನ್ ಪಠಾಣ್, ಆರಂಭಿಕ ಡ್ವೇನ್ ಸ್ಮಿತ್ ಅವರನ್ನು ಔಟ್​ ಮಾಡುವ ಮೂಲಕ ಭಾರತವನ್ನು ಗೆಲುವಿನತ್ತ ಮರಳಿ ತಂದರು. ಇದರ ನಂತರ, ಪ್ರಜ್ಞಾನ್ ಓಜಾ ಕಿರ್ಕ್ ಎಡ್ವರ್ಡ್ಸ್ ಅವರನ್ನು ಬಲಿ ಮಡೆದರು. ಇಂತಹ ಪರಿಸ್ಥಿತಿಯಲ್ಲಿ ವಿಂಡೀಸ್ ಮೂರು ವಿಕೆಟ್‌ಗೆ 120 ರನ್ ಗಳಿಸಿತು. ಐದನೇ ಸ್ಥಾನದಲ್ಲಿ ಬ್ಯಾಟಿಂಗಿಳಿದ ಕ್ಯಾಪ್ಟನ್ ಬ್ರಿಯಾನ್ ಲಾರಾ ಅವರು ಬಂದ ಕೂಡಲೇ ತಮ್ಮ ಬಿರುಸಿನ ಆಟಕ್ಕೆ ಮುಂದಾದರು. ನಾಲ್ಕನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟವನ್ನು ದೇವನಾರಾಯಣ್ ಜೊತೆ ಸೇರಿ ಮಾಡಿದರು.

ವೆಸ್ಟ್ ಇಂಡೀಸ್ ನಿರೀಕ್ಷೆ ಮುರಿದ ವಿನಯ್ ಕುಮಾರ್
ವೆಸ್ಟ್ ಇಂಡೀಸ್ ತಂಡವು 19 ನೇ ಓವರ್‌ ಮುಗಿಯುವದರೊಳಗೆ 200 ರನ್ ಗಳಿಸಿತ್ತು. ಅವರಿಗೆ 9 ಎಸೆತಗಳಲ್ಲಿ 19 ರನ್ ಬೇಕಿತ್ತು. ಭಾರತದ ಸೋಲು ಇಲ್ಲಿ ನಿಶ್ಚಿತವೆಂದು ತೋರುತ್ತುತ್ತು. ಆದರೆ ವಿನಯ್ ಕುಮಾರ್ ಲಾರಾ ಅವರನ್ನು ಬಲಿ ಪಡೆಯುವ ಮೂಲಕ ಭಾರತಕ್ಕೆ ಗೆಲುವಿನ ಮಾಲೆಯನ್ನು ಮೊದಲು ತೋಡಿಸಿದರು. ಲಾರಾ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 46 ರನ್ ಗಳಿಸಿದರು. ಅವರು ನಿರ್ಗಮಿಸಿದ ಎರಡು ಎಸೆತಗಳಲ್ಲಿ, ಟಿನೋ ಬೆಸ್ಟ್ ಕೂಡ ವಿನಯ್ ಕುಮಾರ್ ದಾಳಿಗೆ ಬಲಿಯಾದರು.

ಕೊನೆಯ ಓವರ್ ಅನ್ನು ಇರ್ಫಾನ್ ಪಠಾಣ್ ಮಾಡಿದರು. ನಂತರ ವಿಂಡೀಸ್ ತಂಡಕ್ಕೆ ಆರು ಎಸೆತಗಳಲ್ಲಿ 17 ರನ್ ಗಳಿಸಬೇಕಾಯಿತು. ತಮ್ಮ ಅನುಭವವನ್ನು ಬಳಸಿಕೊಂಡು ಇರ್ಫಾನ್ ಕೇವಲ ಎರಡು ರನ್ ನೀಡಿದರು. ಈ ಓವರ್‌ನಲ್ಲಿ ವಿನಯ್ ಕುಮಾರ್ ಅವರ ಕೊಡುಗೆ ಕೂಡ ಕಂಡುಬಂತು. ಅವರು ದೇವ್ನಾರಾಯಣ್ ಅವರನ್ನು ಉತ್ತಮ ಥ್ರೋ ಮೂಲಕ ರನ್​ಔಟ್ ಮಾಡಿದರು. ಇದರೊಂದಿಗೆ ಭಾರತ 12 ರನ್‌ಗಳಿಂದ ಜಯಗಳಿಸಿ ಫೈನಲ್‌ಗೆ ಹೋಯಿತು.

ಭಾರತೀಯ ಬ್ಯಾಟ್ಸ್‌ಮನ್‌ಗಳ ಬಿರುಗಾಳಿಯ ಬ್ಯಾಟಿಂಗ್
ಇದಕ್ಕೂ ಮೊದಲು ಭಾರತ ಪರ ನಾಯಕ ಸಚಿನ್ 42 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿ 65 ರನ್ ಗಳಿಸಿದರು. ಯುವರಾಜ್ ಅಜೇಯ 49 ರನ್ ಗಳಿಸಿ ಆರು ಸಿಕ್ಸರ್ ಬಾರಿಸಿದರು. ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸಿದ ಪಠಾಣ್ ಅಜೇಯರಾಗಿ ಉಳಿದರು. ಸಚಿನ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಬಂದ ಸೆಹ್ವಾಗ್ 17 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 35 ರನ್ ಗಳಿಸಿದರು.

ಸಚಿನ್ ಮತ್ತು ಸೆಹ್ವಾಗ್ ಇನ್ನಿಂಗ್ಸ್ ಅನ್ನು ಬಿರುಗಾಳಿಯ ರೀತಿ ಆರಂಭಿಸಿದರು. ಇವರಿಬ್ಬರು 33 ಎಸೆತಗಳಲ್ಲಿ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕೊನೆಯಲ್ಲಿ, ಯೂಸುಫ್ ಪಠಾಣ್ ಮತ್ತು ಯುವರಾಜ್ ಸಿಂಗ್ ಭಾರತವನ್ನು 200 ರನ್​ಗಳ ಗಡಿ ದಾಟಿಸಿದರು. ಯುವರಾಜ್ ಕೊನೆಯ 11 ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದರು. ಯುವರಾಜ್​ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ, ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ ಹೊಡೆದರು. ಇದರೊಂದಿಗೆ ಭಾರತ ಮೂರು ವಿಕೆಟ್‌ಗಳಿಗೆ 218 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತು.

Published On - 11:26 am, Thu, 18 March 21