ಇದೆಲ್ಲಾ ಬೇಡ ಸುಮ್ಮನೆ ಹೋಗಿ ಬೌಲಿಂಗ್ ಮಾಡು! ಕೋಪಿಷ್ಟ ಶ್ರೀಶಾಂತ್ನನ್ನು ಸಂಭಾಳಿಸುವುದು ಧೋನಿಗೆ ಮಾತ್ರ ಗೊತ್ತಿತ್ತು; ಉತ್ತಪ್ಪ
ಕೂಡಲೇ ಅಲ್ಲಿ ನಿಂತಿರುವ ಆಟಗಾರ ಯಾರು ಎಂಬುದನ್ನು ನೋಡಿದೆ. ನೋಡಿದರೆ ಶ್ರೀಶಾಂತ್ ನಿಂತಿದ್ದರು. ಅದನ್ನು ನೋಡಿದ ನಾನು ಶ್ರೀಶಾಂತ್ ಬಾಲ್ ಹಿಡಿಯಲ್ಲಪ್ಪ ಎಂದು ದೇವರತ್ತ ಪ್ರಾರ್ಥಿಸಲು ಆರಂಭಿಸಿದೆ.
ರಾಬಿನ್ ಉತ್ತಪ್ಪ ಅವರು ಭಾರತೀಯ ಕ್ರಿಕೆಟ್ ತಂಡ ಮಹೇಂದ್ರ ಸಿಂಗ್ ಧೋನಿ ಮತ್ತು ಶ್ರೀಶಾಂತ್ ಅವರನ್ನು ಒಳಗೊಂಡ ಆಸಕ್ತಿದಾಯಕ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಶ್ರೀಶಾಂತ್ ಅವರನ್ನು ನಿಭಾಯಿಸುವಲ್ಲಿ ಪಂಟರ್ ಆಗಿದ್ದರೆಂದು ರಾಬಿನ್ ಹೇಳಿದ್ದಾರೆ. ಉತ್ತಪ್ಪ ಈಗ ಬಹಿರಂಗಗೊಳಿಸಿರುವ ಪ್ರಕರಣವು 2007 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ಪಂದ್ಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತ ಟಿ 20 ವಿಶ್ವಕಪ್ ಗೆದ್ದ ಒಂದು ವಾರದ ನಂತರ ಈ ಪಂದ್ಯವನ್ನು ಹೈದರಾಬಾದ್‌ನಲ್ಲಿ ಆಡಲಾಯಿತು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ಆ ಪಂದ್ಯದಲ್ಲಿ ಶ್ರೀಶಾಂತ್‌ಗೆ ಬಂದ ಕೋಪವನ್ನು ಧೋನಿ ತಮ್ಮದೇ ಶೈಲಿಯಲ್ಲಿ ಕಡಿಮೆ ಮಾಡಿದ್ದನ್ನು ಉತ್ತಪ್ಪ ವಿವರಿಸಿದ್ದರು.
ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು ರಾಬಿನ್ ಉತ್ತಪ್ಪ ಇದರ ಬಗ್ಗೆ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾತಾನಾಡಿದ್ದು, ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ಶ್ರೀಶಾಂತ್ ಬೌಲಿಂಗ್ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿ ಆ್ಯಂಡ್ರೂ ಸೈಮಂಡ್ಸ್ ಅಥವಾ ಮೈಕ್ ಹಸ್ಸಿ ಇದ್ದರು ಎನಿಸುತ್ತದೆ. ಶ್ರೀಶಾಂತ್ ಬೌಲಿಂಗ್ ಮಾಡಲು ಬಂದರು, ಶ್ರೀಶಾಂತ್ ಬಾಲ್ ಎಸೆಯುವ ಮುನ್ನವೇ ನಾನ್ ಸ್ಟ್ರೈಕ್ ಆಟಗಾರ ಕ್ರೀಜ್ ಬಿಟ್ಟಿದ್ದ ಎನಿಸುತ್ತದೆ. ಕೂಡಲೇ ಶ್ರೀಶಾಂತ್ ಮಂಕಡ್ ರನ್ಔಟ್ ಮಾಡಲು ಯತ್ನಿಸಿ ಅಂಪೈರ್ ಬಳಿ ಔಟ್ ಮನವಿಯನ್ನು ಮಾಡಿದ್ದರು. ಶ್ರೀಶಾಂತ್ ಈ ರೀತಿ ಮಂಕಡ್ ರನ್ಔಟ್ ಮನವಿಯನ್ನು ಮಾಡಿದ ಕೂಡಲೇ ಕೀಪಿಂಗ್ ಮಾಡುತ್ತಿದ್ದ ನಾಯಕ ಧೋನಿ ಕೋಪಿಷ್ಟ ಶ್ರೀಶಾಂತ್ ಅವರನ್ನು ಸಮಾಧಾನ ಮಾಡಿ ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು ಎಂದು ಕಳುಹಿಸಿದ್ದರು, ತದನಂತರ ಯಾರ ಮಾತನ್ನು ಕೇಳದ ಶ್ರೀಶಾಂತ್ ಧೋನಿ ಮಾತನ್ನು ಕೇಳಿ ಸಹಜ ಸ್ಥಿತಿಗೆ ಮರಳಿ ಬೌಲಿಂಗ್ ಮಾಡಿದ್ದರು ಎಂದು ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ.
ಶ್ರೀಶಾಂತ್ ಬಾಲ್ ಹಿಡಿಯಲ್ಲಪ್ಪ 2007 ರ ಟಿ 20 ವಿಶ್ವಕಪ್ ಬಗ್ಗೆ ಮಾತನಾಡಿದ ಉತ್ತಪ್ಪ ಅಂತಿಮ ಓವರ್ ಬಗ್ಗೆ ಮಾತಾನಾಡಿದರು. ಕೊನೆಯ ಓವರ್ ಬೌಲ್ ಮಾಡಿದ ಜೋಂಗಿದರ್ ಶರ್ಮಾ ಎಸೆತವನ್ನು ಮಿಸ್ಬಾ ಉಲ್ ಹಕ್ ಸ್ಕೂಪ್ ಶಾಟ್ ಮಾಡಿದರು. ಬಾಲ್ ಶಾರ್ಟ್ ಫೈನ್ ಲೆಗ್ ಕಡೆ ಪುಟಿಯಿತು. ಆ ವೇಳೆ ನಾನು ಲಾಂಗ್ ಆನ್ನಲ್ಲಿ ನಿಂತಿದ್ದೆ. ಕೂಡಲೇ ಅಲ್ಲಿ ನಿಂತಿರುವ ಆಟಗಾರ ಯಾರು ಎಂಬುದನ್ನು ನೋಡಿದೆ. ನೋಡಿದರೆ ಶ್ರೀಶಾಂತ್ ನಿಂತಿದ್ದರು. ಅದನ್ನು ನೋಡಿದ ನಾನು ಶ್ರೀಶಾಂತ್ ಬಾಲ್ ಹಿಡಿಯಲ್ಲಪ್ಪ ಎಂದು ದೇವರತ್ತ ಪ್ರಾರ್ಥಿಸಲು ಆರಂಭಿಸಿದೆ ಎಂದು ಅಂದು ನಡೆದ ಘಟನೆಯ ಬಗ್ಗೆ ಮೆಲುಕು ಹಾಕಿದ್ದಾರೆ.