ಬ್ಯಾಟಿಂಗ್ ಆರ್ಡರ್ ಸ್ಥಿರವಾಗಿದ್ದರೆ ಹೀಗಾಗುತ್ತಿರಲಿಲ್ಲ; ವೃತ್ತಿ ಜೀವನ ಬೇಗ ಮುಗಿದಿದ್ದಕ್ಕೆ ಕಾರಣ ತಿಳಿಸಿದ ರಾಬಿನ್ ಉತ್ತಪ್ಪ

ಬ್ಯಾಟಿಂಗ್ ಕ್ರಮವನ್ನು ನಿರಂತರವಾಗಿ ಬದಲಾಯಿಸುವುದು, ಅಂದರೆ ಕೆಲವೊಮ್ಮೆ ಟಾಪ್ ಆರ್ಡರ್​ನಲ್ಲಿ ಮತ್ತೊಮ್ಮೆ ಕೆಳಕ್ರಮಾಂಕದಲ್ಲಿ ಆಡುವುದು ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಬ್ಯಾಟಿಂಗ್ ಆರ್ಡರ್ ಸ್ಥಿರವಾಗಿದ್ದರೆ ಹೀಗಾಗುತ್ತಿರಲಿಲ್ಲ; ವೃತ್ತಿ ಜೀವನ ಬೇಗ ಮುಗಿದಿದ್ದಕ್ಕೆ ಕಾರಣ ತಿಳಿಸಿದ ರಾಬಿನ್ ಉತ್ತಪ್ಪ
ಧೋನಿ, ಉತ್ತಪ್ಪ
Follow us
ಪೃಥ್ವಿಶಂಕರ
| Updated By: ಆಯೇಷಾ ಬಾನು

Updated on: May 23, 2021 | 9:59 AM

ರಾಬಿನ್ ಉತ್ತಪ್ಪ ಅವರನ್ನು ಸ್ಪೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ ಎಂದು ಪರಗಣಿಸಲಾಗಿದೆ. ಅವರು ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರು ಬಹಳ ಮನರಂಜನೆ ಪಡೆಯುತ್ತಾರೆ. ಕರ್ನಾಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 2006 ರಲ್ಲಿ ತನ್ನ 20 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 96 ಎಸೆತಗಳಲ್ಲಿ 86 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರ ನಂತರ, ರಾಬಿನ್ ಉತ್ತಪ್ಪ ಅವರು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುತ್ತಾರೆ ಎಂದು ನಂಬಲಾಗಿತ್ತು. ಆದರೆ ಇದು ಸಂಭವಿಸಲಿಲ್ಲ. ಅವರು ಓಪನರ್ ಅಥವಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ಆಡಿದರು. ಅವರು ತಂಡಕ್ಕೆ ಆಯ್ಕೆಯಾದಾಗ, ಆಗಾಗಲೇ ಟಾಪ್ ಆರ್ಡರ್ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ರೂಪದಲ್ಲಿ ತುಂಬಿ ಹೋಗಿತ್ತು. ಈಗ ಸಂದರ್ಶನವೊಂದರಲ್ಲಿ ರಾಬಿನ್ ಉತ್ತಪ್ಪ ಅವರು ಟೀಮ್ ಇಂಡಿಯಾದಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ.

ಒಂದೇ ಆರ್ಡರ್​ನಲ್ಲಿ ಹೆಚ್ಚಿನ ಅವಕಾಶ ಇರಲಿಲ್ಲ ಆಸ್ಟ್ರೇಲಿಯಾದ ದಿ ಗ್ರೇಡ್ ಕ್ರಿಕೆಟಿಗ ಯೂಟ್ಯೂಬ್ ಕಾರ್ಯಕ್ರಮದೊಂದಿಗಿನ ಸಂವಾದದಲ್ಲಿ, ರಾಬಿನ್ ಉತ್ತಪ್ಪ ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ಕಾಲ ಉಳಿಯದಿರುವ ಬಗ್ಗೆ ಮಾತನಾಡಿದರು. ಬ್ಯಾಟಿಂಗ್ ಕ್ರಮವನ್ನು ನಿರಂತರವಾಗಿ ಬದಲಾಯಿಸುವುದು, ಅಂದರೆ ಕೆಲವೊಮ್ಮೆ ಟಾಪ್ ಆರ್ಡರ್​ನಲ್ಲಿ ಮತ್ತೊಮ್ಮೆ ಕೆಳಕ್ರಮಾಂಕದಲ್ಲಿ ಆಡುವುದು ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದೇ ಆರ್ಡರ್​ನಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದರೆ, ಅವರ ವೃತ್ತಿಜೀವನವು ಹೆಚ್ಚು ಸಮಯ ಇರುತ್ತಿತ್ತು. ಅಲ್ಲದೆ ಕೇವಲ 49 ಪಂದ್ಯಗಳನ್ನು ಆಡಿರುವ ನಾನು ಒಂದೇ ಆರ್ಡರ್​ನಲ್ಲಿ ಆಡಿದ್ದರೆ ಭಾರತಕ್ಕಾಗಿ 150 ರಿಂದ 250 ಪಂದ್ಯಗಳನ್ನು ಆಡಬಹುದಿತ್ತು ಎಂದು ಉತ್ತಪ್ಪ ಹೇಳಿದ್ದಾರೆ.

ಉತ್ತಪ್ಪ 2007 ರ ವಿಶ್ವಕಪ್ ವಿಜೇತ ತಂಡದಲ್ಲಿದ್ದರು ರಾಬಿನ್ ಉತ್ತಪ್ಪ ಅವರ ಅಂಕಿಅಂಶಗಳನ್ನು ನೋಡಿದರೆ, ಅವರು 16 ಬಾರಿ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ನಂತರ ಅವರು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿದರು. ಇದಲ್ಲದೆ ಅವರು ಟೀಮ್ ಇಂಡಿಯಾ ಪರ ಐದನೇ, ಆರು ಮತ್ತು ಏಳನೇ ಸ್ಥಾನದಲ್ಲೂ ಕೂಡ ಬ್ಯಾಟಿಂಗ್ ಮಾಡಿದ್ದಾರೆ. ತಂಡಕ್ಕೆ ಅವಶ್ಯಕವಾದ ಕಾರಣ ಬೇರೆ ಬೇರೆ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ಉತ್ತಪ್ಪ ಹೇಳಿದರು. ಉತಪ್ಪ ಭಾರತ ಪರ 46 ಏಕದಿನ ಮತ್ತು 13 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು 2007 ರಲ್ಲಿ ಟಿ 20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಉತ್ತಪ್ಪ ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ತಂಡಗಳಲ್ಲೂ ಆಡಿದ್ದರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್