Roger Federer
ಟೆನಿಸ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್ (Roger Federer) ವೃತ್ತಿ ಬದಕಿನಿಂದ ನಿವೃತ್ತಿಯಾಗಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ (Grand Slams) ಗೆದ್ದಿರುವ ಈ ಆಟಗಾರ ಗುರುವಾರ ಟ್ವೀಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. 21ನೇ ವಯಸ್ಸಿನಲ್ಲಿ ವಿಂಬಲ್ಡನ್ (Wimbledon) ಗೆದ್ದಿರುವ ಈ ಆಟಗಾರ ವೃತ್ತಿ ಜೀವನದಲ್ಲಿ 103 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೆಡರರ್ 8 ಬಾರಿ ವಿಂಬಲ್ಡನ್ ಗೆದ್ದಿದ್ದು ವಿಶ್ವದಾಖಲೆಯಾಗಿದೆ. ಫೆಡರರ್ 310 ವಾರಗಳ ಕಾಲ ನಂಬರ್ 1 ಟೆನಿಸ್ ಆಟಗಾರರಾಗಿದ್ದರು. ಫೆಡರರ್ ಅವರ ಸಂಪೂರ್ಣ ವೃತ್ತಿಜೀವನವು ಒಂದಕ್ಕಿಂತ ಹೆಚ್ಚು ದಾಖಲೆಗಳಿಂದ ತುಂಬಿದೆ. ಆದರೆ ಅವರ ದಾಖಲೆಯ ಹೊರತಾಗಿ, ಕೆಲವೇ ಜನರಿಗೆ ತಿಳಿದಿರುವ ಅವರ ಬಗ್ಗೆ ಕೆಲವು ವಿಷಯಗಳನ್ನು ನಾವು ನಿಮಗೆ ಹೇಳುತ್ತೇವೆ.
- ರೋಜರ್ ಫೆಡರರ್ ಎರಡು ದೇಶಗಳ ಪೌರತ್ವ ಹೊಂದಿದ್ದು, ಸ್ವಿಟ್ಜರ್ಲೆಂಡ್ ಹೊರತುಪಡಿಸಿ, ಅವರು ದಕ್ಷಿಣ ಆಫ್ರಿಕಾದ ನಾಗರಿಕತ್ವ ಕೂಡ ಹೊಂದಿದ್ದಾರೆ. ಅವರ ತಂದೆ ಸ್ವಿಸ್ ಮತ್ತು ತಾಯಿ ದಕ್ಷಿಣ ಆಫ್ರಿಕಾದವರಾಗಿದ್ದಾರೆ.
- ರೋಜರ್ ಫೆಡರರ್ 16 ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಡಬೇಕಾಯಿತು . ಇದಕ್ಕೆ ಪ್ರಮುಖ ಕಾರಣವೇ ಟೆನಿಸ್, ಅವರು ಟೆನಿಸ್ ಆಟವನ್ನು ಮುಂದುವರಿಸಬೇಕಾಗಿದ್ದರಿಂದ ಶಾಲೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 21 ನೇ ವಯಸ್ಸಿನಲ್ಲಿ, ಫೆಡರರ್ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ, ಜೂಲಿಯೆಟ್ ಎಂಬ ಹೆಸರಿಸಿದ ಹಸುವನ್ನು ಉಡುಗೊರೆಯಾಗಿ ಪಡೆದಿದ್ದರು.
- ರೋಜರ್ ಫೆಡರರ್ ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರಾಗಿದ್ದು, ಅವರ ಆಸ್ತಿ ಮೌಲ್ಯ 4372 ಕೋಟಿ ರೂ. ಆಗಿದೆ. ಅಲ್ಲದೆ, ಫೆಡರರ್ ತಮ್ಮ ವೃತ್ತಿಜೀವನದಲ್ಲಿ 130 ಮಿಲಿಯನ್ ಡಾಲರ್ ಮೌಲ್ಯದ ಬಹುಮಾನವನ್ನು ಗಳಿಸಿದ್ದಾರೆ.
- 2017 ರಲ್ಲಿ, ರೋಜರ್ ಫೆಡರರ್ ಹೆಸರಿನಲ್ಲಿ ಸ್ವಿಸ್ ಸ್ಟಾಂಪ್ ಅನ್ನು ಬಿಡುಗಡೆ ಮಾಡಲಾಯಿತು. ಜೀವಂತವಾಗಿರುವಾಗ ಈ ಗೌರವವನ್ನು ಪಡೆದ ಸ್ವಿಟ್ಜರ್ಲೆಂಡ್ನ ಏಕೈಕ ಪ್ರಜೆ ಎಂಬ ಹೆಗ್ಗಳಿಕೆಗೆ ಫೆಡರರ್ ಪಾತ್ರರಾಗಿದ್ದಾರೆ.
- ರೋಜರ್ ಫೆಡರರ್ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮಥ್ಯ್ರ ಹೊಂದಿದ್ದು, ಅವರಿಗೆ ಇಂಗ್ಲಿಷ್, ಸ್ವಿಸ್ ಜರ್ಮನ್, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಸೇರಿದಂತೆ ಫೆಡರರ್ ಆಫ್ರಿಕಾ ಭಾಷೆಯನ್ನು ಮಾತನಾಡುತ್ತಾರೆ.
- ರೋಜರ್ ಫೆಡರರ್ ಅವರ ತಾಯಿ ಸ್ವತಃ ಶ್ರೇಷ್ಠ ಟೆನಿಸ್ ಆಟಗಾರ್ತಿ. ಅವರು ಸ್ವಿಸ್ ಇಂಟರ್ ಕ್ಲಬ್ ಮಟ್ಟದ ತರಬೇತುದಾರರಾಗಿದ್ದರು. ಫೆಡರರ್ ತನ್ನ ಹೆತ್ತವರ ಆಟವನ್ನು ನೋಡಿದ ನಂತರವೇ ಟೆನಿಸ್ ಆಡಲು ಪ್ರಾರಂಭಿಸಿದರು.
- ರೋಜರ್ ಫೆಡರರ್ ಅವರ ವಿಶೇಷವೆಂದರೆ ಅವರು ಎಂದಿಗೂ ತರಬೇತಿ ಪಂದ್ಯಗಳಲ್ಲಿ ಗೆಲುವು ಸಾಧಿಸಿರಲಿಲ್ಲ. ತರಬೇತಿ ವೇಳೆ ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಿದರೂ ಪಂದ್ಯದ ವೇಳೆ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದರು.