ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್ನಲ್ಲಿ ಪಂದ್ಯದ ಎರಡನೆ ದಿನವಾಗಿದ್ದ ಇಂದು ಅನಾವಶ್ಯಕ ಅವಸರದ ಪ್ರವೃತ್ತಿ ತೋರಿ ಚೆಂಡನ್ನು ಗಾಳಿಯಲ್ಲಿ ಬಾರಿಸಿ ನೇಥನ್ ಲಿಯಾನ್ಗೆ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮ ಅಂಥ ಹೊಡೆತ ಪ್ರಯತ್ನಿಸಿದಕ್ಕೆ ವಿಷಾದವಿಲ್ಲ ಎಂದು ಹೇಳಿದ್ದಾರೆ.
44 ರನ್ ಗಳಿಸಿ ಸೆಟ್ಲ್ ಆಗಿದ್ದ ಸೆಟ್ಲ್ ಅಗಿದ್ದ ರೋಹಿತ್, ಲಿಯಾನ್ ಅವರ ಉತ್ತಮ ಅಂತರದ ಎಸೆತವೊಂದನ್ನು ಬೌಂಡರಿಯ ಅಚೆ ಎತ್ತಿ ಬಾರಿಸುವ ಯತ್ನದಲ್ಲಿ ಲಾಂಗ್ ಆನ್ನಲ್ಲಿದ್ದ ಮಿಚೆಲ್ ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟಾದರು.
‘ಬಾಲ್ ಪಿಚ್ ಆದ ಸ್ಥಳಕ್ಕೆ ನಾನು ತಲುಪಿದೆ, ಆದರೆ ಹೊಡೆತ ಬಾರಿಸುವಾಗ ಚೆಂಡನ್ನು ನಾನಂದುಕೊಂಡಂತೆ ಸರಿಯಾಗಿ ಕನೆಕ್ಟ್ ಮಾಡಲಾಗದೆ ಅದು ಮಿಸ್ಟೈಮ್ ಅಯಿತು. ಸ್ಕ್ವೇರ್ಲೆಗ್ ಮತ್ತು ಲಾಂಗ್ ಆನ್ ಮಧ್ಯೆಯಿದ್ದ ದೊಡ್ಡ ಗ್ಯಾಪ್ ನಡುವೆ ಚೆಂಡನ್ನು ಬಾರಿಸುವ ಇರಾದೆ ನನ್ನದಾಗಿತ್ತು. ಅಂಥ ಹೊಡೆತಗಳನ್ನು ಬಾರಿಸಿಲು ನಾನು ಸದಾ ಇಷ್ಟಪಡುತ್ತೇನೆ. ಇಲ್ಲಿಗೆ ಬರುವ ಮುಂಚೆಯೇ ಪಿಚ್ ಬ್ಯಾಟಿಂಗ್ಗೆ ನೆರವಾಗುವ ಬಗ್ಗ್ಗೆ ತಿಳಿದುಕೊಂಡಿದ್ದೆವು. ಬೌನ್ಸ್ ಆದ ನಂತರ ಚೆಂಡು ವಿಕೆಟ್ಕೀಪರ್ವರೆಗೆ ಚೆನ್ನಾಗಿ ಕ್ಯಾರಿ ಆಗುತ್ತಿದೆ. ಇಂಥ ಪಿಚ್ಗಳಲ್ಲಿ ಆಡುವುದು ನನಗೆ ಬಹಳ ಖುಷಿ ನೀಡುತ್ತದೆ,’ ಎಂದು ಎರಡನೆ ದಿನದಾಟದ ನಂತರ ನಡೆದ ವರ್ಚ್ಯುಯನ್ ಪ್ರೆಸ್ ಮೀಟ್ನಲ್ಲಿ ರೋಹಿತ್ ಹೇಳಿದರು.
‘ಒಂದಷ್ಟು ಓವರ್ಗಳನ್ನಾಡಿ ಸೆಟ್ಲ್ ಆದ ನಂತರ ಬಾಲು ಹೆಚ್ಚು ಸ್ವಿಂಗ್ ಅಗುತ್ತಿಲ್ಲವೆಂಬ ಅಂಶವನ್ನು ನಾನು ಕಂಡುಕೊಂಡೆ. ಬ್ಯಾಟಿಂಗ್ನಲ್ಲಿ ಕೊಂಚ ಹೊಂದಾಣಿಕೆಗಳನ್ನು ಮಾಡಿಕೊಂಡು ನಿರ್ಭೀತಿಯಿಂದ ಶಾಟ್ಗಳನ್ನಾಡಲು ಅರಂಭಿಸಿದ ನಂತರ ನಾನು ಔಟಾಗುವ ಪ್ರಸಂಗ ಎದುರಾಯಿತು. ಔಟಾಗಿದ್ದು ನನ್ನ ದುರಾದೃಷ್ಟ, ಅದಕ್ಕಾಗಿ ಪರಿತಪಿಸಲಾರೆ. ನಾನಾಡುವ ರೀತಿಯೇ ಹಾಗಿದೆ. ಬೌಲರ್ಗಳ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ನಾನು ಮಾಡುತ್ತೇನೆ. ಟೀಮಿನ ಪರವಾಗಿ ನನ್ನ ಮೇಲಿರುವ ಜವಾಬ್ದಾರಿಯೂ ಆದೇ ಅಗಿದೆ. ಎರಡು ತಂಡಗಳಿಗೂ ಸುಲಭವಾಗಿ ರನ್ ಗಳಿಸುವುದು ಕಷ್ಟವಾಗುತ್ತಿರವುದರರಿಂದ ಯಾರಾದರೊಬ್ಬರು ಬೌಲರ್ಗಳ ಮೇಲೆ ಒತ್ತಡ ಹೇರಲು ಮುಂದಾಗಬೇಕು,’ ಎಂದು ರೋಹಿತ್ ಹೇಳಿದರು.
ರನ್ ಗಳಿಸುವ ಗತಿಯನ್ನು ತೀವ್ರಗೊಳಿಸುವಾಗ ವಿಕೆಟ್ ಕಳೆದುಕೊಳ್ಳುವ ಅಪಾಯ ಯಾವಾಗಲೂ ಇರುತ್ತದೆ. ಅದಕ್ಕಾಗಿ ಸಿದ್ಧರಾಗಿರಬೇಕು ಎಂದು ರೋಹಿತ್ ಹೇಳಿದ್ದಾರೆ.
‘ರನ್ ಗತಿಯನ್ನು ಹೆಚ್ಚಿಸುವಾಗ ವಿಕೆಟ್ ಕಳೆದುಕೊಳ್ಳುವ ಅಪಾಯ ಯವಾಗಲೂ ಇರುತ್ತದೆ. ಅದನ್ನು ಎದುರಿಸಲು ಸಿದ್ಧರಿರಬೇಕಾಗುತ್ತದೆ. ಆದು ನಾನು ಮಾಡಿಕೊಂಡ ಪ್ಲ್ಯಾನ್ ಆಗಿದ್ದರಿಂದ ಅದನ್ನು ಎಕ್ಸಿಕ್ಯೂಟ್ ಮಾಡುವಲ್ಲಿ ವಿಫಲಗೊಂಡಿದ್ದಕ್ಕೆ ವಿಷಾದವಿಲ್ಲ. ನೇಥನ್ ಲಿಯಾನ ನಿಸ್ಸಂದೇಹವಾಗಿ ಒಬ್ಬ ಬುದ್ಧಿಬವಂತ ಬೌಲರ್, ಹೊಡೆತ ಸರಿಯಾಗಿ ಬಾರಿಸಲು ಸಾಧ್ಯವಾಗದ ಹಾಗೆ ಆತ ನನ್ನ ಕಾಲುಗಳತ್ತ ಬೌಲ್ ಮಾಡಿದರು, ಎಂದು ರೋಹಿತ್ ಹೇಳಿದರು.
ಆದರೆ, ಬಾರತ ಮಾಜಿ ಆರಂಭ ಆಟಗಾರ ಸುನಿಲ್ ಗಾವಸ್ಕರ್, ರೊಹಿತ್ ಅವರ ಹೊಡೆತ ಬಾರಿಸಲು ಪ್ರಯತ್ನಿಸಿ ಔಟಾಗಿದ್ದನ್ನು ಖಂಡಿಸಿದ್ದಾರೆ.
‘ಆ ಹೊಡೆತ ಪ್ರಯತ್ನಿಸುವ ಅಗತ್ಯವಾದರೂ ಏನಿತ್ತು? ಅದು ನಂಬಲಸಾಧ್ಯ ಮತ್ತು ಬೇಜವಾಬ್ದಾರಿತನದ ಹೊಡೆತ. ಲಾಂಗ್ ಆನ್ನಲ್ಲಿ ಒಬ್ಬ ಫೀಲ್ಡರ್ ಇದ್ದ ಮತ್ತೊಬ್ಬ ಸ್ಕ್ವೇರ್ಲೆಗ್ನಲ್ಲಿದ್ದ. ಅದಕ್ಕೂ ಮಿಗಿಲಾದ ಸಂಗತಿಯೇನೆಂದರೆ, ಕೇವಲ ಎರಡು ಎಸೆತಗಳ ಮುಂಚೆ ರೋಹಿತ್ ಬೌಂಡರಿ ಬಾರಿಸಿದ್ದರು, ಹಾಗಿದ್ದ ಮೇಲೆ ಆ ಹೊಡೆತಕ್ಕೆ ಪ್ರಯತ್ನಿಸುವ ಅವಶ್ಯಕತೆಯಾದರೂ ಏನಿತ್ತು? ಅವರು ತಂಡದ ಸೀನಿಯರ್ ಆಟಗಾರ. ಹಾಗಾಗಿ ಆ ಹೊಡೆತ ಪ್ರಯತ್ನಿದ್ದಕ್ಕೆ ಅವರಿಗೆ ಕ್ಷಮೆಯೇ ಇಲ್ಲ. ಅನಾವಶ್ಯಕವಾಗಿ ಅವರು ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದರು, ಇದು ಅಕ್ಷರಶಃ ಬೇಜವಾಬ್ದಾರಿತನ,’ ಎಂದು ಗಾವಸ್ಕರ್ ಹೇಳಿದ್ದಾರೆ.