ಮೈದಾನದಲ್ಲಿದ್ದ ಒಬ್ಬೇ ಒಬ್ಬ ಪ್ರೇಕ್ಷಕನಿಂದ ಅಭಿನಂದನೆ ಸ್ವೀಕರಿಸಿದ ಜೋ ರೂಟ್ರನ್ನು ಮೆಚ್ಚಿದ ನೆಟ್ಟಿಗರು
ರೂಟ್ ದ್ವಿಶತಕ ಬಾರಿಸಿದ ನಂತರ ಪೆವಿಲಿಯನ್ನತ್ತ ತಿರುಗಿ ಹೆಲ್ಮೆಟ್ ಮತ್ತು ಬ್ಯಾಟ್ ಎತ್ತಿ ತಮ್ಮ ತಂಡದ ಸದಸ್ಯರ ಆಭಿನಂದನೆ ಸ್ವೀಕರಿಸಿದರು. ಆದರೆ ಮೈದಾನದಲ್ಲಿದ್ದ ಆ ಒಬ್ಬ ಪ್ರೇಕ್ಷಕನ ಕಡೆಯೂ ತಿರುಗಿ ಆತನ ಅಭಿನಂದನೆಯನ್ನು ಸ್ವೀಕರಿಸಿದರು.
ಭಾರತದ ಸ್ಪಿನ್ನರ್ಗಳು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಈಗ ಶ್ರೀಲಂಕಾದಲ್ಲಿ ಅಡುತ್ತಿರುವ ಟೆಸ್ಟ್ಗಳ ವಿಡಿಯೊಗಳನ್ನು ನೋಡುವುದೊಳಿತು. ಸಾಮಾನ್ಯವಾಗಿ ಇಂಗ್ಲಿಷ್ ಆಟಗಾರರು ಉಪಖಂಡದ ಪಿಚ್ಗಳಲ್ಲಿ ರನ್ ಗಳಿಸಲು ಪರದಾಡುತ್ತಾರೆ. ಆದರೆ ಶ್ರೀಲಂಕಾದ ವಿರುದ್ಧ ಗಾಲ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರೂಟ್ ತಮ್ಮ ಕರೀಯರ್ನ ನಾಲ್ಕನೆ ಡಬಲ್ ಶತಕ ದಾಖಲಿಸುವಾಗ ಲಂಕಾದ ಸ್ಪಿನ್ರಗಳನ್ನು ಚೆನ್ನಾಗಿ ಥಳಿಸಿದರು.
ದ್ವಿಶತಕದ ಸಾಧನೆಯಲ್ಲದೆ ರೂಟ್ ಅವರಿಂದು ಮತ್ತೊಂದು ಕಾರಣಕ್ಕೂ ಇಂಟರ್ನೆಟ್ನಲ್ಲಿ ರಾರಾಜಿಸುತ್ತಿದ್ದರು. ಪ್ರವಾಸಿ ಇಂಗ್ಲೆಂಡ್ ಮತ್ತು ಶ್ರೀಲಂಕಾದ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿ ಖಾಲಿ ಮೈದಾನಗಳಲ್ಲಿ ಆಡುವುದೆಂದು ಎರಡು ರಾಷ್ಟ್ರಗಳ ಮಂಡಳಿಗಳ ನಡುವೆ ಒಪ್ಪಂದವಾಗಿದೆ. ಹಾಗಾಗಿ ಗಾಲ್ ಮೈದಾನದಲ್ಲಿ ಇವತ್ತು ಎರಡು ಟೀಮುಗಳ ಸದಸ್ಯರು ಮತ್ತು ಸಪೋರ್ಟ್ ಸ್ಟಾಫ್ ಮತ್ತು ಒಬ್ಬ ಪ್ರೇಕ್ಷಕ ಮಾತ್ರ ಇದ್ದ.
ರೂಟ್ ದ್ವಿಶತಕ ಬಾರಿಸಿದ ನಂತರ ಪೆವಿಲಿಯನ್ನತ್ತ ತಿರುಗಿ ಹೆಲ್ಮೆಟ್ ಮತ್ತು ಬ್ಯಾಟ್ ಎತ್ತಿ ತಮ್ಮ ತಂಡದ ಸದಸ್ಯರ ಆಭಿನಂದನೆ ಸ್ವೀಕರಿಸಿದರು. ಆದರೆ ಮೈದಾನದಲ್ಲಿದ್ದ ಆ ಒಬ್ಬ ಪ್ರೇಕ್ಷಕನ ಕಡೆಯೂ ತಿರುಗಿ ಆತನ ಅಭಿನಂದನೆಯನ್ನು ಸ್ವೀಕರಿಸಿದರು. ಅವರ ಈ ವರ್ತನೆಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ರೂಟ್ ಅವರ ವರ್ತನೆಯನ್ನು ಕೊಂಡಾಡುತ್ತಿದ್ದಾರೆ.
ಅಂದಹಾಗೆ, ಈ ಱಂಡಿ ಕ್ಯಾಡಿಕ್ ಹೆಸರಿನ ಈ ಪ್ರೇಕ್ಷಕ ಅಸಲಿಗೆ ಇಂಗ್ಲೆಂಡಿನವನು. ಎರಡು ರಾಷ್ಟ್ರಗಳ ಮಧ್ಯೆ ಸದರಿ ಟೆಸ್ಟ್ ಸರಣಿ 10 ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ಕೊವಿಡ್-19 ಪಿಡುಗಿನಿಂದಾಗಿ ಅದನ್ನು ಈ ವರ್ಷದ ಜನೆವರಿ ತಿಂಗಳಿಗೆ ಮುಂದೂಡಲಾಯಿತು. ಕ್ಯಾಡಿಕ್ ಆಗನಿಂದಲೂ ಶ್ರೀಲಂಕಾದಲ್ಲೇ ಉಳಿದು ಸರಣಿ ಆರಂಭವಾಗುವುದನ್ನು ಎದುರು ನೋಡುತ್ತಿದ್ದ. ಅವನ ಕತೆ ಕೇಳಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಂದ್ಯ ವೀಕ್ಷಿಸುವ ಅನುಮತಿ ನೀಡಿತು. ಇಂಗ್ಲಿಷ್ ಟೀಮಿನ ಕುರಿತು ಅವಗಿರುವ ಅಭಿಮಾನವನ್ನು ಕೇಳಿ ದಂಗಾದ ರೂಟ್ ಅವನ ಆಭಿನಂದನೆಯನ್ನು ಸ್ವೀಕರಿಸಿದಾಗ ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.
ಅಂದಹಾಗೆ, ಭಾರತೀಯರು ಬೌಲರ್ಗಳು ಯಾಕೆ ರೂಟ್ ಬಗ್ಗೆ ಎಚ್ಚರವಹಿಬೇಕಾಗಿದೆಯೆಂದರೆ , ಸಮಕಾಲೀನ ಕ್ರಿಕೆಟ್ನಲ್ಲಿ ಅವರು ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅವರ ಸಾಲಿನಲ್ಲಿ ನಿಲ್ಲುವ ಶ್ರೇಷ್ಠ ಆಟಗಾರ. ಕೊಹ್ಲಿಯಂತೆ ರೂಟ್ ಕೂಡ 2020 ರಲ್ಲಿ ಒಂದೇ ಒಂದು ಶತಕ ಬಾರಿಸಿರಲಿಲ್ಲ. ಈ ವರ್ಷದ ಆಡಿದ ಮೊದಲ ಟೆಸ್ಟ್ನಲ್ಲೇ ಅವರು ಡಬಲ್ ಸೆಂಚುರಿ ಬಾರಿಸಿದ್ದಾರೆ.
ಶ್ರೀಲಂಕಾದಲ್ಲಿ ಎರಡು ಟೆಸ್ಟ್ಗಳನಾಡಿದ ಬಳಿಕ ಇಂಗ್ಲೆಂಡ್ ಪೂರ್ಣ ಪ್ರಮಾಣದ ಸರಣಿ ಆಡಲು ಭಾರತಕ್ಕೆ ಅಗಮಿಸಲಿದೆ. ರೂಟ್ ಫಾರ್ಮ್ ಕಂಡುಕೊಂಡಿರುವುದರಿಂದ ಮತ್ತು ಸ್ಪಿನ್ನರಗಳನ್ನು ಚೆನ್ನಾಗಿ ಎದುರಿಸಿ ಆಡುತ್ತಿರುವುದರಿಂದ ಭಾರತೀಯ ಬೌಲರ್ಗಳು ಅವರ ಮೇಲೆ ನಿಗಾ ಇಡಬೇಕಿದೆ.
ಇಂದು ಗಾಲ್ನಲ್ಲಿ ಅಂತಿಮವಾಗಿ 228 ರನ್ ಗಳಿಸಿ ಔಟಾಗುವ ಮೊದಲು ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ನಳಲ್ಲಿ 8.000 ರನ್ ಗಳಿಸಿರರುವ ಇಂಗ್ಲಿಷ್ ಆಟಗಾರರ ಪೈಕಿ ಎರಡನೆಯವರೆನಿಸಿಕೊಂಡರು. ಮಾಜಿ ಆರಂಭ ಆಟಗಾರ ಅಲಸ್ಟೇರ್ ಕುಕ್ 178 ಇನ್ನಿಂಗ್ಸ್ಗಳಲ್ಲಿ ಈ ಸಾಧನೆಯನ್ನು ಮಾಡಿದ್ದರೆ, ಕೆವಿನ್ ಪೀಟರ್ಸ್ನ್ 176 ಇನ್ನಿಂಗ್ಸ್ಗಳನ್ನು ತೆಗೆದುಕೊಡಿದ್ದರು. ರೂಟ್ 177 ಇನ್ನಿಂಗ್ಸ್ಗಳಲ್ಲಿ ಸಾಧನೆ ಮಾಡಿದ್ದಾರೆ.
ಹಾಗೆಯೇ, ರೂಟ್ ಇಂಗ್ಲಿಷ್ ಆಟಗಾರರ ಪೈಕಿ 8,000 ರನ್ ಪೂರೈಸಿರುವ 7ನೇ ಆಟಗಾರನೆನಿಸಿಕೊಂಡಿದ್ದಾರೆ ಮತ್ತು ಶ್ರೀಲಂಕಾದಲ್ಲಿ ದ್ವಿಶತಕ ಬಾರಿಸಿದ ಮೊದಲ ಇಂಗ್ಲೆಂಡ್ ಆಟಗಾರರಾಗಿದ್ದಾರೆ.
Root scoring 200 and waving to Randy Caddick, an England fan waiting for 10 months for the tour to happen, is why you have to love cricket pic.twitter.com/Cw9uGF6r8F
— Henry Moeran (@henrymoeranBBC) January 16, 2021