Australia vs India Test Series | ಅಂತಿಮ ಟೆಸ್ಟ್​: ವಾಷಿಂಗ್ಟನ್ ಸುಂದರ್​-ಶಾರ್ದೂಲ್​ ಠಾಕೂರ್ ಅರ್ಧ ಶತಕ, ಶತಕದ ಜೊತೆಯಾಟ

ಶಾರ್ದೂಲ್​ ಠಾಕೂರ್ 94 ಎಸೆತಗಳನ್ನ ಎದುರಿಸಿ ಭರ್ಜರಿ 2 ಸಿಕ್ಸರ್​ಗಳೊಂದಿಗೆ 54 ರನ್​ ಸಿಡಿಸಿದರೆ, 110 ಬಾಲ್​ಗಳನ್ನ ಎದುರಿಸಿರುವ ವಾಷಿಂಗ್ಟನ್ ಸುಂದರ್​ 50 ರನ್​ ಬಾರಿಸಿದ್ದಾರೆ.

Australia vs India Test Series | ಅಂತಿಮ ಟೆಸ್ಟ್​: ವಾಷಿಂಗ್ಟನ್ ಸುಂದರ್​-ಶಾರ್ದೂಲ್​ ಠಾಕೂರ್ ಅರ್ಧ ಶತಕ, ಶತಕದ ಜೊತೆಯಾಟ
ಅರ್ಧ ಶತಕ ಬಾರಿಸಿದ ಶಾರ್ದೂಲ್​ ಠಾಕೂರ್​ ಹಾಗೂ ವಾಷಿಂಗ್​ಟನ್​ ಸುಂದರ್​
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 17, 2021 | 11:35 AM

ಬ್ರಿಸ್ಬೇನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಪ್ರಮುಖ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್​ ಹಾಗೂ ಶಾರ್ದೂಲ್​ ಠಾಕೂರ್​ ಅವರ ಜೊತೆಯಾಟ ನೆರವಾಗಿದೆ.

ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಭಾರತವು ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ನಂತರ ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಕೂಡ ಬೇಗನೆ ಮರಳಿದರು. ಟೀ ವಿರಾಮದ ವೇಳೆಗೆ ಭಾರತದ ಸ್ಕೋರ್ 253/6 ಆಗಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಅವರ ಇನ್ನಿಂಗ್ಸ್  ಆಸರೆಯಾಗಿದೆ.

ಟೀಂ ಇಂಡಿಯಾದ ಪ್ರಮುಖ ದಾಂಡಿಗರು ಬಹುಬೇಗನೇ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿಕೊಂಡ ಸಮಯದಲ್ಲಿ ಮೈದಾನಕ್ಕಿಳಿದ ಈ ಜೋಡಿ ಅದ್ಭುತ ಆಟವಾಡಿತು. ಇಬ್ಬರೂ ಸಹ ಅರ್ಧ ಶತಕ ಬಾರಿಸಿದ್ದಾರೆ. ಮೈದಾನದಲ್ಲಿ ಆರ್ಭಟ ಶುರು ಮಾಡಿರುವ ಶಾರ್ದುಲ್ ಠಾಕೂರ್ 94 ಎಸೆತ ಎದುರಿಸಿ ಭರ್ಜರಿ 2 ಸಿಕ್ಸರ್​ಗಳೊಂದಿಗೆ 54 ರನ್​ ಸಿಡಿಸಿದರೆ, 110 ಬಾಲ್​ಗಳನ್ನ ಎದುರಿಸಿರುವ ವಾಷಿಂಗ್ಟನ್ ಸುಂದರ್​ 50 ರನ್​ ಬಾರಿಸಿದ್ದಾರೆ. ಈ ಜೋಡಿಯ ಶತಕದ ಜೊತೆಯಾಟ ತಂಡವನ್ನು ಫಾಲೋ ಆನ್​ನಿಂದ ಪಾರು ಮಾಡಿವೆ.