India vs Australia Test Series ಅಂತಿಮ ಟೆಸ್ಟ್​: 369 ರನ್​ಗೆ ಆಸಿಸ್​ ಆಲ್​ಔಟ್.. ಬ್ಯಾಟಿಂಗ್​ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ..!

ಈಗಾಗಲೇ ಪಂದ್ಯದ ಎರಡನೇ ದಿನದ ಆಟ ಶುರುವಾಗಿದ್ದು, ಆಸ್ಟ್ರೇಲಿಯಾ ತಂಡ 2ನೇ ದಿನದ ಮೊದಲ ಸೆಷನ್‌ನಲ್ಲಿ ತನ್ನೇಲ್ಲಾ ವಿಕೆಟ್​ ಕಳೆದುಕೊಂಡು 369 ರನ್​ಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

India vs Australia Test Series ಅಂತಿಮ ಟೆಸ್ಟ್​: 369 ರನ್​ಗೆ ಆಸಿಸ್​ ಆಲ್​ಔಟ್.. ಬ್ಯಾಟಿಂಗ್​ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ..!
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
Follow us
ಪೃಥ್ವಿಶಂಕರ
|

Updated on:Jan 16, 2021 | 9:44 AM

ಬ್ರಿಸ್ಬೇನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈಗಾಗಲೇ ಪಂದ್ಯದ ಎರಡನೇ ದಿನದ ಆಟ ಶುರುವಾಗಿದ್ದು, ಆಸ್ಟ್ರೇಲಿಯಾ ತಂಡ 2ನೇ ದಿನದ ಮೊದಲ ಸೆಷನ್‌ನಲ್ಲಿ ತನ್ನೇಲ್ಲಾ ವಿಕೆಟ್​ ಕಳೆದುಕೊಂಡು 369 ರನ್​ಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

ಮೊದಲನೇ ದಿನದಾಟದಲ್ಲಿ 5 ವಿಕೆಟ್​ ಕಳೆದುಕೊಂಡು 274 ರನ್​ ಗಳಿಸಿದ್ದ ಆಸ್ಟ್ರೇಲಿಯಾ, 2ನೇ ದಿನದಾಟದಲ್ಲಿ ಕ್ಯಾಮರೂನ್​ ಗ್ರೀನ್​ ಅವರ 47 ರನ್​ ಹಾಗೂ ಟಿಮ್​ ಪೈನ್​ ಅವರ ಅರ್ಧಶತಕದ ನೆರವಿನಂದಾಗಿ 369 ರನ್​ ಗಳಿಸಿತು. ಈ ಇಬ್ಬರು ಆಟಗಾರರನ್ನ ಹೊರತು ಪಡಿಸಿದರೆ, ಆಸಿಸ್​ನ ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳು ಅಷ್ಟೇನೂ ಪ್ರತಿರೋಧ ತೋರಲಿಲ್ಲ ಹೀಗಾಗಿ ಆಸಿಸ್​ ತಂಡ ತನ್ನೇಲ್ಲಾ ವಿಕೆಟ್​ ಕಳೆದುಕೊಂಡು 369 ಗಳಿಸಿತು.

ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ನಟರಾಜನ್ ಹಾಗೂ ವಾಷಿಂಗ್​ಟನ್​ ಸುಂದರ್ ತಲಾ 3 ವಿಕೆಟ್​ ಪಡೆದು ಮಿಂಚಿದರು. ನಟರಾಜನ್​ಗೆ ಉತ್ತಮವಾಗಿ ಸಾಥ್​ ನೀಡಿದ ಶಾರ್ದೂಲ್​ ಠಾಕೂರ್​ ಸಹ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.ವೇಗಿ ಮಹಮದ್​ ಸಿರಾಜ್​ 1 ವಿಕೆಟ್​ ಪಡೆದು ಭಾರತಕ್ಕೆ ನೆರವಾದರು.

ಆಸ್ಟ್ರೇಲಿಯಾ ನೀಡಿರುವ ಸವಾಲಿನ ಮೊತ್ತವನ್ನ ಬೆನ್ನತ್ತಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ ಶುಭ್​ಮನ್​ ಗಿಲ್​ ಈ ಪಂದ್ಯದಲ್ಲಿ ಬಹುಬೇಗನ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿಕೊಂಡಿದ್ದಾರೆ.ರೋಹಿತ್​ ಶರ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಗಿಲ್​ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. 2ನೇ ದಿನದಾಟದಲ್ಲಿ 2ನೇ ಸೆಷನ್​ ಆಡುತ್ತಿರುವ ಟೀಂ ಇಂಡಿಯಾ 1 ವಿಕೆಟ್​ ನಷ್ಟಕ್ಕೆ 51 ರನ್​ ಗಳಿಸಿದೆ. ಆರಂಭಿಕ ರೋಹಿತ್​ ಶರ್ಮ ಅವರಿಗೆ ಚೇತೇಶ್ವರ್​ ಪೂಜಾರ ಜೊತೆಯಾಗಿದ್ದಾರೆ.

India vs Australia ಕೊನೆಯ ಟೆಸ್ಟ್: ಮೊದಲ ದಿನದಂತ್ಯಕ್ಕೆ 5 ವಿಕೆಟ್​ಗೆ 274 ರನ್​ ಗಳಿಸಿದ ಕಾಂಗರೂಗಳು..

Published On - 9:27 am, Sat, 16 January 21

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ