ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡಕ್ಕೆ ಐದನೇ ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಟ್ಮ್ಯಾನ್ ರೋಹಿತ್ ಶರ್ಮಾ, ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಗಾಯಗೊಂಡಿರೋ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಬಿದ್ದಿರುವ ರೋಹಿತ್, ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಃಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಟೆಸ್ಟ್ ಸರಣಿಗೆ ಮಾತ್ರ ರೋಹಿತ್ರನ್ನ ಆಯ್ಕೆ ಮಾಡಲಾಗಿದೆ..
ಗಾಯಗೊಂಡಿದ್ದ ಕಾರಣದಿಂದಾಗಿ ರೋಹಿತ್ನನ್ನ ಆಸಿಸ್ ವಿರುದ್ಧದ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ಆಯ್ಕೆ ಮಾಡಿಲ್ಲ. ಆದ್ರೆ, ಕ್ಯಾಪ್ಟನ್ ಕೊಹ್ಲಿ ಟೆಸ್ಟ್ ಸರಣಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗೋ ಹಿನ್ನಲೆ, ರೋಹಿತ್ ಶರ್ಮಾರನ್ನ ಆಯ್ಕೆ ಮಾಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಹೀಗಾಗಿ, ಟೆಸ್ಟ್ ಸರಣಿಗೆ ಮಾತ್ರ ರೋಹಿತ್ರನ್ನ ಆಯ್ಕೆ ಮಾಡಲಾಗಿದೆ. ಹೀಗಾಗಿ ಸ್ನಾಯುಸೆಳೆತದಿಂದ ಸಂಪೂರ್ಣ ಗುಣಮುಖರಾಗದ ರೋಹಿತ್, NCA ನಲ್ಲಿ ಫಿಟ್ನೆಸ್ ಸಾಬೀತು ಮಾಡಬೇಕಿದೆ.
ಗುರುವಾರ ರೋಹಿತ್ ಶರ್ಮಾ ಬೆಂಗಳೂರಿಗೆ ಬಂದಿಳಿದಿದ್ದು, NCA ಅಧ್ಯಕ್ಷ ರಾಹುಲ್ ದ್ರಾವಿಡ್ ಕೋಚಿಂಗ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಒಂದು ವೇಳೆ ರೋಹಿತ್, ಫಿಟ್ನೆಸ್ ಟೆಸ್ಟ್ನಲ್ಲಿ ಪಾಸ್ ಆದ್ರೆ, ಆಸಿಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ, ಬೆಂಗಳೂರಿನ NCAನಲ್ಲಿ ಫಿಟ್ನೆಸ್ ಟೆಸ್ಟ್ಗೆ ಒಳಗಾಗ್ತಿರೋದು ಇದೇ ಮೊದಲಲ್ಲ. 2018ರಲ್ಲೂ ರೋಹಿತ್ ಎನ್ಸಿಎನಲ್ಲಿ ಯೋ ಯೋ ಟೆಸ್ಟ್ನಲ್ಲಿ ಭಾಗವಹಿಸಿದ್ರು.
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಮಾತ್ರವಲ್ಲ, ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್ ಆಗಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡ್ತಿದ್ದ ಇಶಾಂತ್ ಕೂಡ, ಹ್ಯಾಮ್ಸ್ಟ್ರೀಂಗ್ ಇಂಜುರಿಯಿಂದ ಐಪಿಎಲ್ನಿಂದ ದೂರವಾಗಿದ್ರು. ಅಲ್ಲದೇ, ಆಸಿಸ್ ಟೆಸ್ಟ್ ಸರಣಿಯಿಂದ ತಂಡದಿಂದ ಹೊರಬಿದ್ದಿದ್ದಾರೆ. ಆದ್ರೀಗ, NCAಗೆ ಆಗಮಿಸಿ ಫಿಟ್ ಆಗಿರೋ ಇಶಾಂತ್, ಆಸಿಸ್ ಫ್ಲೈಟ್ ಹತ್ತೊ ಅವಕಾಶವನ್ನ ಪಡೆದುಕೊಳ್ಳೋ ಸಾಧ್ಯತೆಯಿದೆ.
ಒಟ್ನಲ್ಲಿ ಟೀಂ ಇಂಡಿಯಾ ಆಟಗಾರರ ಪಾಲಿಗೆ ಬೆಂಗಳೂರಿನ NCA ಅಕಾಡೆಮಿ ನಿಜಕ್ಕೂ ಪುನಃಶ್ಚೇತನ ಕೇಂದ್ರ.. ಗಾಯವಾದ್ರೂ ಆಗಲಿ, ಫಾರ್ಮ್ ಕಳೆದುಕೊಂಡ್ರು ಸರಿ.. NCAಗೆ ಆಗಮಿಸಿದ್ರೆ, ಆಟಗಾರರು ಫಿಟ್ ಆಗೋದು ಪಕ್ಕಾ.
Published On - 4:15 pm, Fri, 20 November 20