ಕೊಹ್ಲಿ ಬದಲು ಈತ ಟೀಂ ಇಂಡಿಯಾದ ನಾಯಕನಾಗಬೇಕು! ಇಷ್ಟರಲ್ಲೇ ನಾಯಕತ್ವ ಬದಲಾಗಬಹುದು; ಕಿರಣ್ ಮೋರೆ
ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಿಂದ ಹಿಂದಿರುಗಿದ ನಂತರ ನಾಯಕತ್ವ ಬದಲಾವಣೆ ಬಗ್ಗೆ ನಿರ್ಧರಿಸಲಾಗುತ್ತದೆ ಅಥವಾ ಅದನ್ನು ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಎಂಎಸ್ ಧೋನಿ ಭಾರತ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಾಗಿನಿಂದಲೂ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಶೀಘ್ರದಲ್ಲೇ ಭಾರತೀಯ ತಂಡದ ಜವಾಬ್ದಾರಿಯನ್ನು ಸ್ಫೋಟಕ ಓಪನರ್ ರೋಹಿತ್ ಶರ್ಮಾ ಅವರಿಗೆ ಹಸ್ತಾಂತರಿಸಬೇಕೆಂದು ಟೀಂ ಇಂಡಿಯಾದ ಮಾಜಿ ಸೆಲೆಕ್ಟರ್ ಕಿರಣ್ ಮೋರ್ ಅವರ ಅಭಿಪ್ರಾಯವಾಗಿದೆ. ಕಿರಣ್ ರೋಹಿತ್ ಅವರಿಗೆ ಶೀಘ್ರದಲ್ಲೇ ಕೆಲವು ಸ್ವರೂಪದಲ್ಲಿ ನಾಯಕತ್ವವನ್ನು ನೀಡಬಹುದು ಎಂದು ಕಿರಣ್ ಮೋರೆ ಹೇಳಿದ್ದಾರೆ.
ಕಿರಣ್ ಮೋರೆ ಹೇಳಿದ್ದೇನು? ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಕಿರಣ್ ಮೋರೆ , ರೋಹಿತ್ ಶರ್ಮಾ ಅವರಿಗೆ ಶೀಘ್ರದಲ್ಲೇ ತಂಡದ ನಾಯಕನಾಗುವ ಅವಕಾಶ ಸಿಗಲಿದೆ. ಕೊಹ್ಲಿ ಅನುಭವಿ ನಾಯಕ, ಆದರೆ ಅವರು ಇನ್ನೇಷ್ಟು ದಿನಗಳವರೆಗೆ ಏಕದಿನ ಮತ್ತು ಟಿ 20 ಗಳಲ್ಲಿ ನಾಯಕತ್ವದ ಉಸ್ತುವಾರಿ ವಹಿಸಲಿದ್ದಾರೆ? ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಿಂದ ಹಿಂದಿರುಗಿದ ನಂತರ ನಾಯಕತ್ವ ಬದಲಾವಣೆ ಬಗ್ಗೆ ನಿರ್ಧರಿಸಲಾಗುತ್ತದೆ ಅಥವಾ ಅದನ್ನು ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಕಿರಣ್ ಮೋರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ನಾಯಕನಾಗಿರುವುದು ಸುಲಭದ ಕೆಲಸವಲ್ಲ. ಭಾರತೀಯ ತಂಡವು ವಿಭಿನ್ನ ಸ್ವರೂಪಗಳಲ್ಲಿ ವಿಭಿನ್ನ ನಾಯಕರ ಮೇಲೆ ಕೇಂದ್ರೀಕರಿಸಬಹುದು. ವಾಸ್ತವವಾಗಿ, ಭವಿಷ್ಯದಲ್ಲಿ ಅಂತಹ ಆಯ್ಕೆ ಮಾಡಬಹುದು. ರೋಹಿತ್ ಶರ್ಮಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರಿಗೆ ಅವಕಾಶ ಸಿಗಬೇಕು.
ನಾಯಕತ್ವದಲ್ಲಿ ರೋಹಿತ್, ವಿರಾಟ್ಗಿಂತ ಒಂದು ಹೆಜ್ಜೆ ಮುಂದಿದ್ದಾರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಷ್ಯಾ ಕಪ್ ಮತ್ತು ನಿಡಾಹಾಸ್ ಟ್ರೋಫಿಯಂತಹ ಸ್ಪರ್ಧೆಗಳಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ಇನ್ನೂ ಪ್ರಮುಖ ಪಂದ್ಯಾವಳಿಯನ್ನು ಗೆದಿಲ್ಲ. ಅದು ಐಸಿಸಿ ಟೂರ್ನಮೆಂಟ್ ಆಗಿರಲಿ ಅಥವಾ ಐಪಿಎಲ್ ಟೂರ್ನಮೆಂಟ್ ಆಗಿರಲಿ, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಗೆಲ್ಲುವಲ್ಲಿ ವಿಫಲವಾಗಿದೆ.
ಮುಂಬೈ 5 ಬಾರಿ ಚಾಂಪಿಯನ್, ಬೆಂಗಳೂರು ಒಮ್ಮೆಯೂ ಆಗಿಲ್ಲ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಐದು ಬಾರಿ ಐಪಿಎಲ್ ಗೆದ್ದಿದೆ. ರೋಹಿತ್ ನೇತೃತ್ವದಲ್ಲಿ ಮುಂಬೈ ತಂಡ 2013, 2015, 2017, 2019 ಮತ್ತು 2020 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಬಾರಿ (2009, 2011, 2016) ಐಪಿಎಲ್ ಫೈನಲ್ ತಲುಪಿದೆ. ಆದರೆ ಎಲ್ಲಾ ಮೂರು ಬಾರಿ ಅವರು ಸೋಲನ್ನು ಎದುರಿಸಬೇಕಾಯಿತು. ವಿರಾಟ್ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.