ಮುಂಬೈ: ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯಾಟದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು 4 ರನ್ಗಳ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ಮಾಡಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿ, ನಿರಾಸೆ ಮೂಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಸ್ಫೋಟಕ ಆಟವಾಡಿ 221 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ ಗೆಲ್ಲಲು 222 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಹಾಗೂ ವೇಗದ ಆಟವನ್ನು ಆಡಿದ್ದಾರೆ. 50 ಬಾಲ್ಗೆ 91 ರನ್ ಕಲೆಹಾಕಿದ್ದಾರೆ. ಹೂಡಾ ಸಿಕ್ಸರ್ಗಳ ಸುರಿಮಳೆಗೈದು 64 ರನ್ ನೀಡಿದರೆ, ಗೈಲ್ ಕೂಡ 40 ರನ್ಗಳ ಉತ್ತಮ ಮೊತ್ತ ಕೊಟ್ಟಿದ್ದಾರೆ. ರಾಜಸ್ಥಾನ್ ಪರ ಯಾವ ಬೌಲರ್ಗಳೂ ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ರಾಹುಲ್ ಸಿಕ್ಸರ್ನ್ನು ಸ್ವಲ್ಪದರಲ್ಲೇ ತಪ್ಪಿಸಿ ತೆವಾಟಿಯಾ ಹಿಡಿದ ಕ್ಯಾಚ್ ರಾಜಸ್ಥಾನ್ ಪರ ಕಂಡುಬಂದ ಅದ್ಭುತ ಪ್ರದರ್ಶನವಾಗಿತ್ತಷ್ಠೆ.
ಐಪಿಎಲ್ 2021ನೇ ಆವೃತ್ತಿಯ 4ನೇ ಪಂದ್ಯಾಟವು ಇಂದು (ಏಪ್ರಿಲ್ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದ ವಿರುದ್ಧ ಆಟವಾಡಿತು. ಕಳೆದ ಪಂದ್ಯಾಟಗಳಲ್ಲೂ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ದುಕೊಂಡಿದ್ದವು. ಚೇಸಿಂಗ್ನಲ್ಲಿ ಯಶಸ್ವಿ ಕಂಡಿದ್ದವು. ಅದಲ್ಲದೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಚೇಸಿಂಗ್ಗೆ ಉತ್ತಮ ಪಿಚ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿತ್ತು.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ರನ್ಗಳ ರೋಚಕ ಗೆಲುವು ದಾಖಲಿಸಿದೆ. 222 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.
Match 4. It's all over! Punjab Kings won by 4 runs https://t.co/WNSqxSOXpd #RRvPBKS #VIVOIPL #IPL2021
— IndianPremierLeague (@IPL) April 12, 2021
ಸಂಜು ಸ್ಯಾಮ್ಸನ್ ಕೊನೆಯ ಎಸೆತದಲ್ಲಿ ವಿಕೆಟ್ ಬಿಟ್ಟುಕೊಟ್ಟಿದ್ದಾರೆ. ರೋಚಕ ಪಂದ್ಯದಲ್ಲಿ ಪಂಜಾಬ್ ಗೆಲುವು ಕಂಡಿದೆ.
ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 1 ಬಾಲ್ಗೆ 5 ರನ್ ಬೇಕು. ಸಂಜು ಸ್ಯಾಮ್ಸನ್ ಕ್ರೀಸ್ನಲ್ಲಿ ಇದ್ದಾರೆ!!
ರಾಜಸ್ಥಾನ್ ರಾಯಲ್ಸ್ ಗೆಲ್ಲಲು 6 ಬಾಲ್ಗೆ 12 ರನ್ ಬೇಕಾಗಿದೆ. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ ಹಾಗೂ ಕ್ರಿಸ್ ಮಾರಿಸ್ ಬ್ಯಾಟಿಂಗ್ ಮಾಡುತ್ತಿದ್ಧಾರೆ. ಕೊನೆಯ ಓವರ್ನಲ್ಲಿ ಗೆಲುವು ಯಾರ ಪಾಲು ಎಂದು ಕುತೂಹಲ ಹೆಚ್ಚಿದೆ. ಆರ್ಆರ್ ತಂಡ 19 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 209 ರನ್ ದಾಖಲಿಸಿದೆ.
ರಾಜಸ್ಥಾನ್ ರಾಯಲ್ಸ್ಗೆ ಮತ್ತೊಂದು ಆಘಾತ ಎದುರಾಗಿದೆ. ರಾಹುಲ್ ತೆವಾಟಿಯಾ ಮೆರೆಡಿತ್ಗೆ ವಿಕೆಟ್ ಒಪ್ಪಿಸಿದ್ದಾರೆ. ಕ್ರಿಸ್ ಮಾರಿಸ್ ಈಗ ಕ್ರೀಸ್ಗೆ ಇಳಿದಿದ್ದಾರೆ.
Riley Meredith with a wicket! ?
Rahul accepts the catch as Tewatia walks back
Keep chipping, Riley ?#RR – 201/6 (18.1)#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ರಾಜಸ್ಥಾನ್ ರಾಯಲ್ಸ್ ಕೊನೆಯ 2 ಓವರ್ ಬಾಕಿ ಇರುವಂತೆ 21 ರನ್ ಗಳಿಸಬೇಕಾಗಿದೆ. ಸಂಜು ಸ್ಯಾಮ್ಸನ್ ಹಾಗೂ ತೆವಾಟಿಯಾ ಕ್ರೀಸ್ನಲ್ಲಿ ಇದ್ದಾರೆ. 18 ಓವರ್ ಅಂತ್ಯಕ್ಕೆ ತಂಡ 5 ವಿಕೆಟ್ ಕಳೆದುಕೊಂಡು 201 ರನ್ ಕೂಡಿಸಿದೆ.
ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಶತಕ ಸಿಡಿಸಿದ್ದಾರೆ. ಇದು ಅವರ 3ನೇ ಐಪಿಎಲ್ ಸೆಂಚುರಿ ಆಗಿದೆ. ಸಂಜು ಸ್ಯಾಮ್ಸನ್ 54 ಬಾಲ್ಗೆ 102 ರನ್ ಬಾರಿಸಿದ್ದಾರೆ. ಇದರಲ್ಲಿ 5 ಸಿಕ್ಸರ್, 12 ಬೌಂಡರಿ ಸೇರಿದೆ. ತಂಡಕ್ಕೆ ಗೆಲ್ಲಲು ಇನ್ನು 15 ಬಾಲ್ಗೆ 26 ರನ್ ಬೇಕಾಗಿದೆ. ಇದು ಸೀಸನ್ನ ಮೊದಲ ಶತವಾಗಿದೆ.
.@IamSanjuSamson with the first ? of #VIVOIPL 2021 season.
Well played, Sanju ??
Live – https://t.co/PhX8Fz0Uoz #RRvPBKS #VIVOIPL pic.twitter.com/9GaDeONePf
— IndianPremierLeague (@IPL) April 12, 2021
ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಾಟ ರೋಚಕ ಹಂತದತ್ತ ಸಾಗುತ್ತಿದೆ. ತಂಡಕ್ಕೆ ಗೆಲ್ಲಲು 18 ಬಾಲ್ಗೆ 40 ರನ್ ಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗೆ ಉತ್ತಮ ಜೊತೆಯಾಟ ನೀಡಿ, ಸ್ಫೋಟಕ ಆಟದಿಂದ ರನ್ ವೇಗ ಹೆಚ್ಚಿಸಿದ್ದ ರಿಯಾನ್ ಪರಾಗ್, ಮೊಹಮದ್ ಶಮಿಗೆ ವಿಕೆಟ್ ನೀಡಿ ನಿರ್ಗಮಿಸಿದ್ದಾರೆ. ಪರಾಗ್, 11 ಬಾಲ್ಗೆ 25 ರನ್ ನೀಡಿ ಔಟ್ ಆಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿಗೆ 24 ಬಾಲ್ಗೆ 48 ರನ್ ಬೇಕಾಗಿದೆ. 16 ಓವರ್ ಅಂತ್ಯಕ್ಕೆ 174 ರನ್ ಗಳಿಸಿ, 4 ವಿಕೆಟ್ ಕಳೆದುಕೊಂಡಿರುವ ರಾಯಲ್ಸ್ ಗೆಲುವಿನ ಉತ್ಸಾಹದಲ್ಲಿದೆ. ಪಂಜಾಬ್ ಗೆಲ್ಲಲು ಸ್ಯಾಮ್ಸನ್ ವಿಕೆಟ್ ಅವಶ್ಯವಾಗಿದೆ.
ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಅದ್ಭುತ ಆಟ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದೆ. 222 ರನ್ಗಳ ಬೃಹತ್ ಮೊತ್ತವನ್ನು ಕೂಡ ರಾಯಲ್ಸ್ ಬಗ್ಗುಬಡಿಯುವ ಸೂಚನೆ ನೀಡುತ್ತಿದ್ದಾರೆ. ಪರಾಗ್ 9 ಬಾಲ್ಗೆ 25 ರನ್ ಕಲೆಹಾಕಿದ್ದಾರೆ. 3 ಸಿಕ್ಸರ್, 1 ಬೌಂಡರಿ ಸಿಡಿಸಿದ್ದಾರೆ. ಮತ್ತೊಂದೆಡೆ ನಾಯಕ ಸಂಜು, 49 ಬಾಲ್ಗೆ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. ಅವರು 4 ಸಿಕ್ಸ್, 9 ಬೌಂಡರಿ ಬಾರಿಸಿದ್ದಾರೆ.
Normal heart rate:
⠀ /\⠀ ⠀ ⠀ ⠀ /\
_ / \ /\_ / \ _
\/⠀ ⠀ ⠀ ⠀ \/When Sanju bats :
⠀/\ /\⠀ /\
/ \ /\/ \ /\_/ \ /\__
⠀ \/⠀⠀ \/⠀⠀ \/— Rajasthan Royals (@rajasthanroyals) April 12, 2021
ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಆಟ ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ. ರಾಜಸ್ಥಾನ್ ರಾಯಲ್ಸ್ ಕೂಡ ಗೆಲ್ಲುವ ವಿಶ್ವಾಸ ಉಳಿಸಿಕೊಂಡಿದೆ. ತಂಡದ ಪರ ಸಂಜು ಬೌಂಡರಿ-ಸಿಕ್ಸರ್ಗಳನ್ನು ಬಾರಿಸುತ್ತಿದ್ದಾರೆ. 3 ಸಿಕ್ಸರ್, 9 ಬೌಂಡರಿ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ಗೆ 30 ಬಾಲ್ಗೆ 68 ರನ್ ಬೇಕಿದೆ.
ರಾಜಸ್ಥಾನ್ ರಾಯಲ್ಸ್ ತಂಡ 14 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 141 ರನ್ ದಾಖಲಿಸಿದೆ. ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಬೌಂಡರಿ-ಸಿಕ್ಸರ್ ಸುರಿಮಳೆಗೈಯ್ಯುತ್ತಿದ್ದಾರೆ. ಪಂದ್ಯ ರೋಚಕ ಹಂತದತ್ತ ಸಾಗುತ್ತಿದೆ. ಸಂಜು ಸ್ಯಾಮ್ಸನ್ 44 ಬಾಲ್ಗೆ 65 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ರಾಜಸ್ಥಾನ್ ಮತ್ತೊಬ್ಬ ದಾಂಡಿಗೆ ಶಿವಮ್ ದುಬೆ ಔಟ್ ಆಗಿದ್ದಾರೆ. ಅರ್ಶ್ದೀಪ್ ಸಿಂಗ್ಗೆ ದುಬೆ ವಿಕೆಟ್ ಒಪ್ಪಿಸಿದ್ದಾರೆ. 15 ಬಾಲ್ಗೆ 23 ರನ್ ಗಳಿಸಿದ್ದ ಅವರು ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದಾರೆ. ಸಂಜು ಸ್ಯಾಮ್ಸನ್ ಆಟ ಮುಂದುವರಿದಿದೆ.
.@arshdeepsinghh with his second wicket of the game. Dube was looking to go big, but departs after scoring 23 runs.
Hooda with a fine catch in the deep.
Live – https://t.co/PhX8FyJiZZ #RRvPBKS #VIVOIPL pic.twitter.com/TAuc7ODpxC
— IndianPremierLeague (@IPL) April 12, 2021
ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ. ಅಂದರೆ, ಇನ್ನು 54 ಬಾಲ್ಗೆ 113 ರನ್ ಬೇಕಾಗಿದೆ. ಈ ಮಧ್ಯೆ ಸಂಜು ಸ್ಯಾಮ್ಸನ್ ಅರ್ಧಶತಕ ಸಿಡಿಸಿದ್ದಾರೆ. ಅವರು 36 ಬಾಲ್ಗೆ 55 ರನ್ ಗಳಿಸಿ, 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಕ್ರೀಸ್ನಲ್ಲಿದ್ದಾರೆ.
A wonderful half-century for @IamSanjuSamson ??
His 14th #VIVOIPL
Live – https://t.co/WNSqxT6ygL #RRvPBKS #VIVOIPL pic.twitter.com/gMNmWxgyna
— IndianPremierLeague (@IPL) April 12, 2021
ಸಂಜು ಸ್ಯಾಮ್ಸನ್ 10.5ನೇ ಎಸೆತದಲ್ಲಿ ಎಲ್ಬಿಡ್ಬ್ಲ್ಯೂ ಎಂದು ಘೋಷಿಸಲಾಯಿತು. ಬಳಿಕ, ಡಿಆರ್ಎಸ್ ಮೂಲಕ ನಾಟೌಟ್ ಎಂದು ತಿಳಿದುಬಂತು. ನಾಯಕ ಸ್ಯಾಮ್ಸನ್ ರಾಯಲ್ಸ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದು, ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಹಾಗಾಗಿ, ಈ ವಿಕೆಟ್ ಮುಖ್ಯವಾಗಿತ್ತು.
ರಾಜಸ್ಥಾನ್ ರಾಯಲ್ಸ್ ತಂಡ 10 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದ್ದಾರೆ. ವಿಕೆಟ್ ಪತನದ ಬೆನ್ನಲ್ಲೂ ಉತ್ತಮ ಮೊತ್ತ ದಾಖಲಿಸುವಲ್ಲಿ ಸಂಜು ಸ್ಯಾಮ್ಸನ್ ಹೋರಾಟ ನಡೆಸುತ್ತಿದ್ದಾರೆ. ನಾಯಕ ಸಂಜು 30 ಬಾಲ್ಗೆ 41 ರನ್ ದಾಖಲಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾರೆ.
Staying in, standing tall. ??#HallaBol | #RRvPBKS | @IamSanjuSamson pic.twitter.com/WCMHrAsbeD
— Rajasthan Royals (@rajasthanroyals) April 12, 2021
ರಾಜಸ್ಥಾನ್ ರಾಯಲ್ಸ್ ತಂಡ 8 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 78 ರನ್ ದಾಖಲಿಸಿದೆ. ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ಗೆ ಮತ್ತೆ ಆಘಾತ ಎದುರಾಗಿದೆ. ರಾಯಲ್ಸ್ ಪರ ದಾಂಡಿಗ ಬಟ್ಲರ್ ಜೈ ರಿಚರ್ಡ್ಸನ್ ಎಸೆತಕ್ಕೆ ಬೋಲ್ಡ್ ಆಗಿದ್ದಾರೆ. 5 ಬೌಂಡರಿ ಸಹಿತ 13 ಬಾಲ್ಗೆ 25 ರನ್ ಕಲೆಹಾಕಿದ್ದ ಬಟ್ಲರ್, ಸ್ಯಾಮ್ಸನ್ಗೆ ಜೊತೆಯಾಗುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಸ್ಯಾಮ್ಸನ್ಗೆ ದುಬೆ ಜೊತೆಯಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ 2 ವಿಕೆಟ್ ನಷ್ಟ ಅನುಭವಿಸಿ ಆರಂಭಿಕ ಆಘಾತ ಎದುರಿಸಿದ ಬಳಿಕವೂ ವೇಗದ ಆಟ ಆಡುತ್ತಿದೆ. ಗುರಿ ಬೆನ್ನತ್ತಲು ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಮೂಲಕ ತಂಡದ ಮೊತ್ತ 6 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 59 ಆಗಿದೆ.
ಮೆರೆಡಿತ್ ಬೌಲಿಂಗ್ನ 4ನೇ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ಕಪ್ತಾನ ಸಂಜು ಸ್ಯಾಮ್ಸನ್ ಬೆನ್ನುಬೆನ್ನಿಗೆ ಫೋರ್ ಬಾರಿಸಿದ್ದಾರೆ. ಮೊದಲ ನಾಲ್ಉ ಎಸೆತವನ್ನು ಬೌಂಡರಿಗೆ ಅಟ್ಟಿದ್ದಾರೆ. ಈ ಮೂಲಕ ತಂಡದ ಮೊತ್ತ ಈಗ 5 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 48 ಆಗಿದೆ.
ರಾಜಸ್ಥಾನ್ ರಾಯಲ್ಸ್ಗೆ ಮತ್ತೆ ಆಘಾತ ಉಂಟಾಗಿದೆ. ಮತ್ತೋರ್ವ ಆರಂಭಿಕ ದಾಂಡಿಗ ಮನನ್ ವೋಹ್ರಾ 8 ಬಾಲ್ 12 ರನ್ ಗಳಿಸಿ ಔಟ್ ಆಗಿದ್ದಾರೆ. ಅರ್ಶ್ದೀಪ್ ಬಾಲ್ನ್ನು ಅವರ ಕೈಗೇ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್ಗೆ ಬಟ್ಲರ್ ಜೊತೆಯಾಗಿದ್ದಾರೆ.
Match 4. 3.2: WICKET! M Vohra (12) is out, c & b Arshdeep Singh, 25/2 https://t.co/WNSqxSOXpd #RRvPBKS #VIVOIPL #IPL2021
— IndianPremierLeague (@IPL) April 12, 2021
ರಾಜಸ್ಥಾನ್ ರಾಯಲ್ಸ್ ತಂಡ 3 ಓವರ್ಗೆ 25 ರನ್ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ನಾಯಕ ಸ್ಯಾಮ್ಸನ್ ಉತ್ತಮ ಆಟ ಆಡುತ್ತಿದ್ದಾರೆ.
222 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಶಮಿ ಎಸೆದ ಬಾಲ್ಗೆ ಬೆನ್ ಸ್ಟೋಕ್ಸ್ ಔಟ್ ಆಗಿದ್ದಾರೆ. ಈಗ ಮನನ್ ವೋಹ್ರಾಗೆ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಗಿದ್ದಾರೆ.
.@MdShami11 starts the proceedings with the ball and strikes in the third delivery.
Ben Stokes departs for a duck.
Live – https://t.co/PhX8FyJiZZ #RRvPBKS #VIVOIPL pic.twitter.com/VY901EPUpO
— IndianPremierLeague (@IPL) April 12, 2021
ಭರ್ಜರಿ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ 222 ರನ್ಗಳ ಬೃಹತ್ ಟಾರ್ಗೆಟ್ ನೀಡಿದ್ದಾರೆ. ರಾಉಲ್ ಪ್ರದರ್ಶನ ಮೊದಲ ಇನ್ನಿಂಗ್ಸ್ನ್ನು ಸ್ಮರಣೀಯವಾಗಿಸಿದೆ.
.@klrahul11's fantastic knock comes to an end on 91.
Live – https://t.co/PhX8FyJiZZ #RRvPBKS #VIVOIPL pic.twitter.com/bkXP6vVdBt
— IndianPremierLeague (@IPL) April 12, 2021
ಕೆ.ಎಲ್. ರಾಹುಲ್ ಸಕಾರಿಯಾ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೊರಟು ವಿಕೆಟ್ ಒಪ್ಪಿಸಿದ್ದಾರೆ. ಬೌಂಡರಿ ಬಳಿಯಲ್ಲಿ ಸಿಕ್ಸರ್ ತಡೆದ ರಾಹುಲ್ ತೆವಾಟಿಯಾ ರಾಹುಲ್ರನ್ನು ಔಟ್ ಮಾಡಿದ್ದಾರೆ. ರಾಹುಲ್ 50 ಬಾಲ್ಗೆ 91 ರನ್ ಗಳಿಸಿ ನಿರ್ಗಮಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ 19 ಓವರ್ಗಳ ಅಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು 216 ರನ್ ದಾಖಲಿಸಿದೆ. ಕೆ.ಎಲ್. ರಾಹುಲ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ.
ದೀಪಕ್ ಹೂಡಾ ಬಳಿಕ ಕ್ರೀಸ್ಗೆ ಇಳಿದ ಪೂರನ್ ಸೊನ್ನೆ ಸುತ್ತಿದ್ದಾರೆ. ಮಾರಿಸ್ ಎಸೆತಕ್ಕೆ ಸಕಾರಿಯಾಗೆ ಕ್ಯಾಚ್ ನೀಡಿ ಬಂದಂತೆ ಹಿಂತಿರುಗಿದ್ದಾರೆ. ಶಾರುಖ್ ಖಾನ್ ಈಗ ಕೆ.ಎಲ್. ರಾಹುಲ್ಗೆ ಜೊತೆಯಾಗಿದ್ದಾರೆ.
ವಾಂಖೆಡೆ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ 200 ರನ್ ಗಡಿ ದಾಟಿದೆ. ಪಂಜಾಬ್ ತಂಡ 18 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿದೆ. ಈ ಮಧ್ಯೆ ಕೆ.ಎಲ್. ರಾಹುಲ್ 2000 ಐಪಿಎಲ್ ರನ್ ಪೂರೈಸಿದ್ದಾರೆ.
2⃣0⃣0⃣0⃣ runs in #IPL for KL Rahul ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ಪಂಜಾಬ್ ಕಿಂಗ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಹೂಡಾ, ಕ್ರಿಸ್ ಮಾರಿಸ್ಗೆ ವಿಕೆಟ್ ಒಪ್ಪಿಸಿದ್ದಾರೆ. 28 ಬಾಲ್ಗೆ 64 ಗಳಿಸಿ ಅವರು ನಿರ್ಗಮಿಸಿದ್ದಾರೆ. ಹೂಡಾ ಬಳಿಕ ಪೂರನ್ ಕ್ರೀಸ್ಗೆ ಇಳಿದಿದ್ದಾರೆ.
Hooda departs but not before hitting ?
6 sixes, 4 fours at a SR of 228.57 ?
Well played, #HurricaneHooda ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಸಕಾರಿಯಾ ಓವರ್ಗೆ ಹ್ಯಾಟ್ರಿಕ್ ಫೋರ್ ಬಾರಿಸಿದ್ದಾರೆ. 27 ಬಾಲ್ಗೆ 64 ರನ್ ಕಲೆಹಾಕಿ ಕ್ರೀಸ್ನಲ್ಲಿದ್ದಾರೆ. ಈ ಮೂಲಕ ತಂಡದ ಮೊತ್ತ 17 ಓವರ್ಗೆ 187/2 ಆಗಿದೆ.
ಸ್ಫೋಟಕ ಆಟವಾಡಿದ ದೀಪಕ್ ಹೂಡಾ 20 ಬಾಲ್ಗೆ 50 ರನ್ ದಾಖಲಿಸಿದ್ದಾರೆ. 6 ಸಿಕ್ಸರ್, 1 ಬೌಂಡರಿ ಸಹಿತ ಟೀಂ ಬೃಹತ್ ಮೊತ್ತ ತಲುಪುವಲ್ಲಿ ಸಹಕಾರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 16 ಓವರ್ಗೆ 172 ರನ್ ಗಳಿಸಿದ್ದು, 2 ವಿಕೆಟ್ ಕಳೆದುಕೊಂಡಿದ್ದಾರೆ. ರಾಜಸ್ಥಾನ್ ಬೌಲರ್ಸ್ ಪಂಜಾಬ್ ಆಟಕ್ಕೆ ಸುಸ್ತಾಗಿದ್ದಾರೆ.
Take a bow, Deepak Hooda.
A FIFTY off just 20 deliveries ??
Live – https://t.co/WNSqxT6ygL #RRvPBKS #VIVOIPL pic.twitter.com/PgeEzncFz6
— IndianPremierLeague (@IPL) April 12, 2021
ಪಂಜಾಬ್ ಕಿಂಗ್ಸ್ ತಂಡ 15 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದ್ದಾರೆ. ರಾಹುಲ್ ಹಾಗೂ ಹೂಡಾ ಸ್ಫೋಟಕ ಆಟ ಆಡುತ್ತಿದ್ದಾರೆ. ಸಿಕ್ಸರ್ಗಳ ಸುರಿಮಳೆಗೈಯುತ್ತಿದ್ದಾರೆ. ಹೂಡಾ ಅರ್ಧಶತಕದ ಅಂಚಿನಲ್ಲಿದ್ದರೆ, ರಾಹುಲ್ ಶತಕದ ನಿರೀಕ್ಷೆ ಇದೆ.
KL Rahul di ik hor century pakki aaj? ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ದೀಪಕ್ ಹೂಡಾ ಆಗಮನದ ಬಳಿಕ ಪಂಜಾಬ್ ರನ್ ಗತಿ ವೇಗ ಪಡೆದುಕೊಂಡಿದೆ. ಪಂಜಾಬ್ ಪರ ರಾಹುಲ್ ಹಾಗೂ ಹೂಡಾ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. 14 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 150 ರನ್ ಭರ್ಜರಿ ಮೊತ್ತ ದಾಖಲಿಸಿದ್ದಾರೆ.
Deepak Hooda has been at it from the word go ??
And that's a 50-run partnership between @klrahul11 & Deepak Hooda.
Live – https://t.co/PhX8FyJiZZ #RRvPBKS #VIVOIPL pic.twitter.com/LlODVY2qZN
— IndianPremierLeague (@IPL) April 12, 2021
ಪಂಜಾಬ್ ದಾಂಡಿಗರು ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದಾರೆ. ದುಬೆ ಹಾಗೂ ಕೆ.ಎಲ್ ರಾಹುಲ್ ದುಬೆ ಎಸೆದ ಕೊನೆಯ ಓವರ್ನಲ್ಲಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ದೀಪಕ್ ಹೂಡಾ ವೇಗದ ಆಟಕ್ಕೆ ಇಳಿದಿದ್ದಾರೆ. 13 ಎಸೆತಗಳಲ್ಲಿ 32 ರನ್ ಕಲೆಹಾಕಿದ್ದಾರೆ.
1⃣6⃣1⃣6⃣0⃣6⃣
Shivam Dub-yeaaaayyyy taken to the cleaners ??#PBKS – 131/2 (13)#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
Going… going… Go(pal) goneeee ???
Deepak Hooda is on ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ಪಂಜಾಬ್ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದುಬೆ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ್ದಾರೆ. ಪಂಜಾಬ್ ಮೊತ್ತ 12.4 ಓವರ್ಗೆ 124/2 ಆಗಿದೆ. ರಾಹುಲ್ 31 ಬಾಲ್ಗೆ 53 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
FIFTY!@klrahul11 brings up his 22nd IPL half-century with a maximum!
Live – https://t.co/PhX8FyJiZZ #RRvPBKS #VIVOIPL pic.twitter.com/PCZOol0wYt
— IndianPremierLeague (@IPL) April 12, 2021
12 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 110 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದಾರೆ. ಪಂಜಾಬ್ ಪರ ರಾಹುಲ್ ಉತ್ತಮ ಆಟ ಆಡುತ್ತಿದ್ದಾರೆ. ಅರ್ಧಶತಕದ ಅಂಚಿನಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ 11 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 102 ಕಲೆಹಾಕಿ ಉತ್ತಮ ಆಟ ಆಡುತ್ತಿದ್ದಾರೆ. ಪಂಜಾಬ್ ಪರ ದೀಪಕ್ ಹೂಡಾ ಹಾಗೂ ಕೆ.ಎಲ್. ರಾಹುಲ್ ಬ್ಯಾಟ್ ಬೀಸುತ್ತಿದ್ದಾರೆ. ಕೊನೆಯ ಓವರ್ನಲ್ಲಿ ರಾಹುಲ್ ಸ್ಟ್ರೈಟ್ ಲಾಂಗ್ನತ್ತ ಸಿಕ್ಸರ್ ಬಾರಿಸಿದ್ದು, ರನ್ ವೇಗ ಹೆಚ್ಚಿಸಿದ್ದಾರೆ.
ಪಂಜಾಬ್ ಪರ ಅಬ್ಬರಿಸುತ್ತಿದ್ದ ಕ್ರಿಸ್ ಗೈಲ್ ಔಟ್ ಆಗಿದ್ದಾರೆ. 28 ಬಾಲ್ಗೆ 4 ಬೌಂಡರಿ 2 ಸಿಕ್ಸರ್ ಸಹಿತ 40 ರನ್ಗಳಿಸಿ ನಿರ್ಗಮಿಸಿದ್ದಾರೆ. ರಿಯಾನ್ ಪರಾಗ್ ಬಾಲ್ನ್ನು ದಂಡಿಸಲು ಹೊರಟ ಗೈಲ್ ಸ್ಟೋಕ್ಸ್ ಕೈಗೆ ಕ್ಯಾಚ್ ನೀಡಿದ್ದಾರೆ. ತಂಡದ ಮೊತ್ತ 10 ಓವರ್ ಅಂತ್ಯಕ್ಕೆ 89 ಆಗಿದೆ. 2 ವಿಕೆಟ್ ಹೋಗಿದೆ. ಗೈಲ್ ಬಳಿಕ ಹೂಡ ಕಣಕ್ಕಿಳಿದಿದ್ದಾರೆ. ನಾಯಕ ರಾಹುಲ್ ಕ್ರೀಸ್ನಲ್ಲಿದ್ದಾರೆ.
??
Gayle looks to go big, but Stokes at long-on doesn't miss out this time ?#PBKS – 89/2 (9.5)#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ತೆವಾಟಿಯಾ ಬಾಲ್ಗೆ ಗೈಲ್ ಮತ್ತೊಂದು ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಪಂಜಾಬ್ ತಂಡದ ಮೊತ್ತ 9 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 82 ರನ್ ಆಗಿದೆ. ಗೈಲ್ 26 ಬಾಲ್ಗೆ 4 ಫೋರ್, 2 ಸಿಕ್ಸ್ ಸಹಿತ 39 ರನ್ ಗಳಿಸಿ ಕ್ರೀಸ್ನಲ್ಲಿ ಇದ್ದಾರೆ. ರಾಹುಲ್ 19 ಬಾಲ್ಗೆ 4 ಬೌಂಡರಿ ಸಹಿತ 26 ರನ್ ಗಳಿಸಿದ್ದಾರೆ.
ಪಂಜಾಬ್ ತಂಡ 8 ಓವರ್ಗೆ 1 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ಟೀಂ ಪರ ಗೈಲ್ 21 ಬಾಲ್ಗೆ 28 ಹಾಗೂ ರಾಹುಲ್ 18 ಬಾಲ್ಗೆ 25 ರನ್ ಸೇರಿಸಿದ್ದಾರೆ. ಕಳೆದ ಓವರ್ನಲ್ಲಿ ಸ್ಟೋಕ್ಸ್ ಬಾಲ್ಗೆ ಗೈಲ್ ಬಾರಿಸಿದ ಸಿಕ್ಸರ್ ವಿಂಡೀಸ್ ಬಲಾಢ್ಯನ 350ನೇ ಸಿಕ್ಸರ್ ಆಗಿದೆ.
First six of the season for us ✔️
350th six for Chris Gayle ✔️BOSS-like! ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ಸ್ಟೋಕ್ಸ್ ಓವರ್ನ 3ನೇ ಎಸೆತವನ್ನು ಕ್ರಿಸ್ ಗೈಲ್ ಸಿಕ್ಸರ್ಗೆ ಅಟ್ಟಿದ್ದಾರೆ. ಗೈಲ್ ಈ ಪಂದ್ಯದ ಹಾಗೂ ಟೂರ್ನಿಯ ಮೊದಲ ಸಿಕ್ಸ್ ಬಾರಿಸಿದ್ದಾರೆ.
Match 4. 7.3: B Stokes to C Gayle, 6 runs, 69/1 https://t.co/WNSqxSOXpd #RRvPBKS #VIVOIPL #IPL2021
— IndianPremierLeague (@IPL) April 12, 2021
ಪವರ್ಪ್ಲೇ ಬಳಿಕ ರಾಜಸ್ಥಾನ್ ಪರ ಸ್ಪಿನ್ನರ್ಗಳು ದಾಳಿಗೆ ಇಳಿದಿದ್ದಾರೆ. ಶ್ರೇಯಸ್ ಗೋಪಾಲ್ ಬೌಲ್ ಮಾಡಿದ್ದಾರೆ. ಕೊನೆಯ ಓವರ್ನಲ್ಲಿ 2 ಬೌಂಡರಿ ಸಿಡಿಸಿರುವ ಬ್ಯಾಟಿಂಗ್ ಜೋಡಿ ತಂಡದ ಮೊತ್ತವನ್ನು 7 ಓವರ್ಗೆ 58ಕ್ಕೆ ಏರಿಸಿಕೊಂಡಿದೆ.
6 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ ತಂಡ 46 ರನ್ ಕಲೆಹಾಕಿದೆ.
That's the end of the powerplay and #PBKS are 46/1
Live – https://t.co/PhX8FyJiZZ #RRvPBKS #VIVOIPL pic.twitter.com/cF5SUmJvQG
— IndianPremierLeague (@IPL) April 12, 2021
ಪಂಜಾಬ್ ಕಿಂಗ್ಸ್ ತಂಡ 5 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 39 ರನ್ ಪೇರಿಸಿದ್ದಾರೆ. ಗೇಲ್ ಹಾಗೂ ರಾಹುಲ್ ಕ್ರೀಸ್ನಲ್ಲಿದ್ದಾರೆ. ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡದ ಸರಾಸರಿ ಮೊತ್ತ 166 ಆಗಿದೆ.
ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ 4ನೇ ಓವರ್ ಬೌಲ್ ಮಾಡಿದ್ದಾರೆ. 4 ಓವರ್ ಅಂತ್ಯಕ್ಕೆ 31 ರನ್ ದಾಖಲಿಸಿರುವ ಗೇಲ್ 1 ವಿಕೆಟ್ ಕಳೆದುಕೊಂಡಿದ್ದಾರೆ. ಗೇಲ್ ಆಟದ ಮೇಲೆ ಭಾರೀ ನಿರೀಕ್ಷೆ ಇದೆ.
Universe Boss is the next man in! ?#SaddaPunjab #PunjabKings #IPL2021 #RRvPBKS
— Punjab Kings (@PunjabKingsIPL) April 12, 2021
ಮೊದಲ ಎರಡು ಓವರ್ಗಳಲ್ಲಿ ವೇಗದ ಆಟವಾಡಿದ್ದ ಪಂಜಾಬ್ ಕಿಂಗ್ಸ್ ಒಂದು ವಿಕೆಟ್ ಕಳೆದುಕೊಂಡು ನಿಧಾನವಾಗಿದೆ. ಮಯಾಂಕ್ ಅಗರ್ವಾಲ್ ಔಟ್ ಆಗಿದ್ದಾರೆ. ಕ್ರಿಸ್ ಗೇಲ್ ಕಣಕ್ಕಿಳಿದಿದ್ದಾರೆ. ಪಂಜಾಬ್ ತಂಡ 3 ಓವರ್ಗೆ 1 ವಿಕೆಟ್ ಕಳೆದುಕೊಂಡು 22 ರನ್ ಸೇರಿಸಿದೆ. ಸಕಾರಿಯಾ ತಾವು ಎಸೆದ ಎರಡನೇ ಓವರ್ ಕಂಟ್ರೋಲ್ ಮಾಡಿದ್ದಾರೆ.
ಪಂಜಾಬ್ ಪರ ಅಬ್ಬರಿಸುತ್ತಿದ್ದ ಮಯಾಂಕ್ ಅಗರ್ವಾಲ್ ಆಟ 14 ರನ್ಗಳಿಗಷ್ಟೇ ಸೀಮಿತವಾಗಿದೆ. 9 ಬಾಲ್ಗೆ 14 ರನ್ ಗಳಿಸಿದ ಮಯಾಂಕ್ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದ್ದಾರೆ. ಕೆ.ಎಲ್. ರಾಹುಲ್ ಕ್ರೀಸ್ನಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್ವಾಲ್ ವೇಗದ ಆಟ ಆರಂಭಿಸಿದ್ದಾರೆ. ಮೊದಲ ಓವರ್ನಲ್ಲಿ 1 ಫೋರ್ ಬಾರಿಸಿದ್ದ ಮಯಾಂಕ್, ಮುಸ್ತಫಿಜುರ್ ರಹಮಾನ್ ಎಸೆದ 2ನೇ ಓವರ್ನಲ್ಲಿ ಮತ್ತೆ ನಾಲ್ಕು ರನ್ ಕಲೆಹಾಕಿದ್ದಾರೆ. ತಂಡದ ಮೊತ್ತ 2 ಓವರ್ಗೆ ವಿಕೆಟ್ ನಷ್ಟವಿಲ್ಲದೆ 21 ರನ್ ಕೂಡಿಸಿದೆ.
ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 1 ಓವರ್ ಅಂತ್ಯಕ್ಕೆ ಪಂಜಾಬ್ ತಂಡ 10 ರನ್ ಕಲೆಹಾಕಿದೆ. ಮೊದಲ ಓವರ್ ಬೌಲಿಂಗ್ ಮಾಡಿದ ಚೇತನ್ ಸಕಾರಿಯಾ ಎರಡು ಬೌಂಡರಿ ಸಹಿತ 10 ರನ್ ಬಿಟ್ಟುಕೊಟ್ಟಿದ್ದಾರೆ.
ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೈ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್
Sadde 3️⃣ de?????ants ?#SaddaPunjab #PunjabKings #IPL2021 #RRvPBKS pic.twitter.com/71TYu8N5fi
— Punjab Kings (@PunjabKingsIPL) April 12, 2021
ಜೋಸ್ ಬಟ್ಲರ್, ಮನನ್ ವೊಹ್ರಾ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿವಮ್ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್
4️⃣ Royals to make their debut in our season opener! ?
Your thoughts? ??#HallaBol | #RRvPBKS | #RoyalsFamily | @Dream11 pic.twitter.com/9406GP4e7o
— Rajasthan Royals (@rajasthanroyals) April 12, 2021
ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯಾಟಗಳಲ್ಲೂ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ದುಕೊಂಡಿದ್ದವು. ಚೇಸಿಂಗ್ನಲ್ಲಿ ಯಶಸ್ವಿ ಕಂಡಿದ್ದವು. ಅದಲ್ಲದೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಚೇಸಿಂಗ್ಗೆ ಉತ್ತಮ ಪಿಚ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.
Match 4. Rajasthan Royals win the toss and elect to field https://t.co/WNSqxSOXpd #RRvPBKS #VIVOIPL #IPL2021
— IndianPremierLeague (@IPL) April 12, 2021
ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾದ ಪಂದ್ಯಗಳ ಪೈಕಿ, ರಾಜಸ್ಥಾನ್ 12 ಮ್ಯಾಚ್ ಗೆದ್ದಿದೆ. ಪಂಜಾಬ್ ತಂಡ 9 ಪಂದ್ಯಗಳನ್ನು ಜಯಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲೋರು ಯಾರು ಎಂದು ಕಾದುನೋಡಬೇಕಿದೆ.
Hello and welcome to Match 4 of #VIVOIPL.@IamSanjuSamson led #RR will take on @klrahul11's @PunjabKingsIPL ??#RRvPBKS pic.twitter.com/7gdcjM9xQF
— IndianPremierLeague (@IPL) April 12, 2021
ಐಪಿಎಲ್ ಘಟಾನುಘಟಿಗಳನ್ನು ಹೊಂದಿರುವ ತಂಡ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಹೀಗೆ ಮಾತನಾಡಿದ್ದಾರೆ..
“We’ve always been a team that has entertained for sure!” ?
We couldn’t agree more, skip! ??#SaddaPunjab #PunjabKings #IPL2021 #RRvPBKS #CaptainPunjab @klrahul11 pic.twitter.com/rk6MwWSD64
— Punjab Kings (@PunjabKingsIPL) April 12, 2021
ಐಪಿಎಲ್ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ತಂಡ ನಂತರ ಇದುವರೆಗೂ ಗೆಲುವು ಪಡೆಯಲಾಗಲಿಲ್ಲ. ಈ ಬಾರಿ ಟೂರ್ನಿ ಶುಭಾರಂಭ ನಿರೀಕ್ಷೆಯಲ್ಲಿ ಆರ್ಆರ್ ತಂಡ
??????????. ?
Let’s #HallaBol.#RoyalsFamily | #IPL2021 | #RRvPBKS pic.twitter.com/AVFGTmNOLB
— Rajasthan Royals (@rajasthanroyals) April 12, 2021
Published On - 11:45 pm, Mon, 12 April 21