ಎಷ್ಟೇ ಸೂಪರ್ ಕಾರ್ಗಳ ಮಾಲೀಕನಾದ್ರೂ ಸಚಿನ್ ಹಾತೊರೆಯುವುದು ಆ ಒಂದು ಕಾರ್ಗೆ ಮಾತ್ರ
ಮುಂಬೈ: BMW, ಫೆರಾರಿ, ನಿಸ್ಸಾನ್, GTR ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸೂಪರ್ಕಾರ್ಗಳನ್ನು ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಬಹಳ ಇಷ್ಟಪಟ್ಟು ಖರೀದಿಸಿದ್ದಾರೆ.ಇವುಗಳಲ್ಲಿ ಆಗಾಗ ಲಾಂಗ್ ಡ್ರೈವ್ಗೆ ಹೋಗಿ ಸಚಿನ್ ಖುಷಿ ಪಡುವುದೂ ಉಂಟು.ಅಚ್ಚರಿಯ ಸಂಗತಿಯೆಂದರೆ,ಕಾರುಗಳ ಮೇಲೇ ಅವರಿಗೆ ಅತೀವ ವ್ಯಾಮೋಹವಿರುವುದು ಹಲವರಿಗೆ ಗೊತ್ತಿಲ್ಲ. ಆದರೆ, ಸಚಿನ್ ತುಂಬಾ ಆಸೆಪಟ್ಟು ಖರೀದಿಸಿದ್ದ ಕಾರು ಯಾವುದು ಗೊತ್ತಾ? ಮಾರುತಿ 800. ಹೌದು, ಸಚಿನ್ ವೃತ್ತಿಪರ ಕ್ರಿಕೆಟಿಗನಾದ ನಂತರ ತನ್ನ ಸ್ವಂತ ಹಣದಿಂದ ಖರೀದಿಸಿದ ಈ ಮೊದಲ ಕಾರಿನ […]
ಮುಂಬೈ: BMW, ಫೆರಾರಿ, ನಿಸ್ಸಾನ್, GTR ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸೂಪರ್ಕಾರ್ಗಳನ್ನು ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಬಹಳ ಇಷ್ಟಪಟ್ಟು ಖರೀದಿಸಿದ್ದಾರೆ.ಇವುಗಳಲ್ಲಿ ಆಗಾಗ ಲಾಂಗ್ ಡ್ರೈವ್ಗೆ ಹೋಗಿ ಸಚಿನ್ ಖುಷಿ ಪಡುವುದೂ ಉಂಟು.ಅಚ್ಚರಿಯ ಸಂಗತಿಯೆಂದರೆ,ಕಾರುಗಳ ಮೇಲೇ ಅವರಿಗೆ ಅತೀವ ವ್ಯಾಮೋಹವಿರುವುದು ಹಲವರಿಗೆ ಗೊತ್ತಿಲ್ಲ.
ಆದರೆ, ಸಚಿನ್ ತುಂಬಾ ಆಸೆಪಟ್ಟು ಖರೀದಿಸಿದ್ದ ಕಾರು ಯಾವುದು ಗೊತ್ತಾ? ಮಾರುತಿ 800. ಹೌದು, ಸಚಿನ್ ವೃತ್ತಿಪರ ಕ್ರಿಕೆಟಿಗನಾದ ನಂತರ ತನ್ನ ಸ್ವಂತ ಹಣದಿಂದ ಖರೀದಿಸಿದ ಈ ಮೊದಲ ಕಾರಿನ ಜೊತೆ ಈಗಲೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂಬುದು ಈಗ ಜಗತ್ ಜಾಹಿರ ಆಗಿದೆ.
ನಾನು ಮೊದಲು ಖರೀದಿಸಿದ್ದ ಮಾರುತಿ 800 ಕಾರ್ನ ಜೊತೆ ಭಾವನಾತ್ಮಕ ಸಂಬಂಧ ಹೊಂದಿದೆ. ಆದರೆ, ಕಾಲಕ್ರಮೇಣ ಆ ಕಾರನ್ನು ನಾನು ಮಾರಿಬಿಟ್ಟೆ. ಹೀಗಾಗಿ, ನನ್ನಿಂದ ಕಾರನ್ನು ಕೊಂಡುಕೊಂಡ ವ್ಯಕ್ತಿ ಇನ್ನೂ ಸಹ ಆ ಕಾರನ್ನು ಬಳಸುತ್ತಿದ್ದರೆ ದಯಮಾಡಿ ನನಗೆ ತಿಳಿಸಿ ಎಂದು ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Published On - 7:36 pm, Wed, 19 August 20