ಸಚಿನ್ DRS ವಿರೋಧಿ, ಯಾಕೆ ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್​ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್​ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ. DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಚೆಂಡು ಯಾವ ಶೇಕಡಾ […]

ಸಚಿನ್ DRS ವಿರೋಧಿ, ಯಾಕೆ ಗೊತ್ತಾ?
Follow us
KUSHAL V
|

Updated on:Jul 14, 2020 | 3:14 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್​ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್​ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ.

DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಚೆಂಡು ಯಾವ ಶೇಕಡಾ ಆಧಾರದಲ್ಲಿ ಸ್ಟಂಪ್​ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. DRS​ನಲ್ಲಿ ಬಾಲ್ ಸ್ಟಂಪ್​ಗೆ ಬಡಿದಿದ್ದು ಕಂಡುಬಂದರೆ ಆನ್ ಫೀಲ್ಡ್ ಅಂಪೈರ್ DRS ತೆಗೆದುಕೊಳ್ಳದೆ ಬ್ಯಾಟ್ಸ್​ಮನ್ ಔಟ್ ಆಗಿದ್ದಾನೆ ಎಂದು ತೀರ್ಪು ನೀಡಬೇಕು. DRS​ನಲ್ಲಿ ಈ ಬದಲಾವಣೆಯನ್ನು ತಂದರೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿದಂತಾಗುತ್ತದೆ. ಮನುಷ್ಯರಂತೆ ತಂತ್ರಜ್ಞಾನವೂ ಯಾವಾಗಲೂ ಕರೆಕ್ಟ್​​​ ಆಗಿರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ಈ ಪರಿಕಲ್ಪನೆ ದೋಷಪೂರಿತವಾಗಿದೆ ಎಂದಿದ್ದಾರೆ. ICCಯೊಂದಿಗೆ ನಾನು ಒಪ್ಪದ ವಿಷಯದಲ್ಲಿ ಅದೂ ಇದೆ ಎಂದು ಬ್ರಿಯಾನ್ ಲಾರಾ ಬಳಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.

ಈ DRS ಅಂದ್ರೆ ಏನು? DRS ಅಂದ್ರೆ ಡಿಸೀಷನ್ ರಿವ್ಯೂ ಸಿಸ್ಟಮ್. ಬ್ಯಾಟ್ಸ್​ಮನ್​ ಔಟ್​ ಆಗಿದ್ದಾನೋ ಅನ್ನೋ ಅನುಮಾನವನ್ನ ಪರಿಹರಿಸಿಕೊಳ್ಳೋದಕ್ಕೆ ಈ ತಂತ್ರಜ್ಞಾನವನ್ನ ಬಳಸಿಕೊಳ್ಳಲಾಗುತ್ತೆ. LBW ಸಮಯದಲ್ಲಿ ಬಾಲ್ ಶೇಕಡಾ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ಟಂಪ್​ಗೆ ಬಡಿದಿದ್ರೆ, ಆಗ ಡಿಸೀಷನ್ ರಿವ್ಯೂ ಸಿಸ್ಟಮ್ ಅನ್ನ ಬಳಸಿಕೊಳ್ಳಲಾಗುತ್ತೆ. ಆದ್ರೆ ಇದರಿಂದ ಅನರ್ಥಗಳಾಗೋದೇ ಹೆಚ್ಚು ಅನ್ನೋದು ಸಚಿನ್ ವಾದ. ಸಚಿನ್ ಹೇಳಿರೋದ್ರಲ್ಲಿ ತಪ್ಪೇನು ಇಲ್ಲ. ಆಗಾಗ DRSಬಳಸಿ ಉಂಟಾಗೋ ಲೋಪಗಳಿಂದ ಮ್ಯಾಚ್​​ಗಳಲ್ಲಿ ವಿವಾದಗಳು ಆಗ್ತಾನೇ ಇರುತ್ತೆ.

Published On - 3:13 pm, Tue, 14 July 20

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ