ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟಿಗ ಶೊಯಬ್ ಮಲ್ಲಿಕ್ರನ್ನ ಮದುವೆಯಾಗಿದ್ದಾರೆ. ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಕೂಡ ಈಗ ಕ್ರಿಕೆಟರ್ನೊಬ್ಬನ ಮದುವೆಯಾಗಿದ್ದಾರೆ. ಅಜರುದ್ದೀನ್ ಎರಡನೇ ಮಗನ ಜೊತೆ ಅಸಾದುದ್ದೀನ್ ಶಾದೀ ನಡೆದಿದೆ.
ಕುದುರೆ ಏರಿ ಬಂದ ವರ. ಮಿರ ಮಿರ ಮಿಂಚಿದ ವಧು!
ಹೈದರಾಬಾದ್ನಲ್ಲಿ ಅಸಾದುದ್ದೀನ್ ಮತ್ತು ಅನಮ್ ಮಿರ್ಜಾ ಶಾದಿ ಕಾರ್ಯಕ್ರಮ ನಡೀತು. ಮದುವೆಯಲ್ಲಿ ವರ ಅಸಾದುದ್ದೀನ್ ಕುದುರೆ ಏರಿ ಬಂದ್ರು. ಮದುವೆಗೆ ಬಂದಿದ್ದ ಸಂಬಂಧಿಕರು ವಿವಾಹದಲ್ಲಿ ಡ್ಯಾನ್ಸ್ ಮಾಡಿದ್ರು. ಇನ್ನು ಅಜರುದ್ದೀನ್ ಮಗ ವರ ಅಸಾದುದ್ದೀನ್ ಸಹ ಡ್ಯಾನ್ಸ್ ಮಾಡಿದ್ರು. ವಧು ಅನಮ್ ಮಿರ್ಜಾ ಮೆಹಂದಿ ಹಾಕಿಸಿಕೊಂಡು ಮಿರ ಮಿರ ಮಿಂಚುತ್ತಿದ್ರು. ಸಾನಿಯಾ ತಂಗಿ ಅನಮ್ ಮಿರ್ಜಾ ಕೂಡ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿದ್ರು.
ತಂಗಿ ಎರಡನೇ ಮದ್ವೇಲಿ ಸಾನಿಯಾ ಮಿರ್ಜಾ ಸೂಪರ್ ಡ್ಯಾನ್ಸ್!
ಅನಮ್ ಮಿರ್ಜಾ 2016ರಲ್ಲಿ ಹೈದ್ರಾಬಾದ್ ಉದ್ಯಮಿ ರಶೀದ್ ಎಂಬುವರನ್ನ ಮದುವೆಯಾಗಿದ್ಳು. ನಂತರ ಇವರಿಬ್ಬರ ದಾಂಪತ್ಯ 2 ವರ್ಷದಲ್ಲಿ ಮರಿದುಬಿದ್ದಿತ್ತು. ಈಗ ಅನಮ್ ಮಿರ್ಜಾ 2ನೇ ಬಾರಿಗೆ ಮದುವೆಯಾಗಿದ್ದು, ಭಾರತ ತಂಡದ ಮಾಜಿ ನಾಯಕ ಅಜರುದ್ದೀನ್ ಮಗನಾದ ಅಸಾದುದ್ದೀನ್ ಜೊತೆ ವಿವಾಹವಾಗಿದ್ದಾರೆ.
ಅಸಾದುದ್ದೀನ್ ಜೊತೆ ಮದುವೆಯಾಗುವ ವಿಚಾರವನ್ನ ಅನಮ್ ಮಿರ್ಜಾ ಈ ಹಿಂದೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ರು. ಬ್ರೈಡ್ ಟು ಬಿ ಎಂದು ಬರೆದುಕೊಂಡಿದ್ದ ಅನಮ್, ಸ್ಟೈಲ್ ಮಾಡಿ ನಿಂತಿದ್ದ ಫೋಟೋ ಶೇರ್ ಮಾಡಿದ್ರು. ಮದುವೆಗೂ ಮುನ್ನ ಪ್ಯಾರಿಸ್ ಪ್ರವಾಸಕ್ಕೆ ತೆರಳಿದ್ದ ಈ ಜೋಡಿ ಅನಮ್ ಮಿರ್ಜಾ ಜೊತೆ ಅಸಾದುದ್ದೀನ್ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು.
ಒಂದು ಟೆನಿಸ್ ಕುಟುಂಬ ಮತ್ತೊಂದು ಕ್ರಿಕೆಟ್ ಕುಟುಂಬದ ಜೊತೆ ವೈವಾಹಿಕ ಸಂಬಂಧ ಬೆಳೆಸುತ್ತಿದೆ. ಅಸಾದುದ್ದೀನ್ ಅನಮ್ ಮಿರ್ಜಾ ಈ ಕಲರ್ಫುಲ್ ಶಾದಿಗೆ ಗಣ್ಯಾತಿಗಣ್ಯರ ದಂಡೇ ಸಾಕ್ಷಿಯಾಗಿತ್ತು.
Published On - 1:00 pm, Fri, 13 December 19