ವಿಲಿಯಮ್ಸನ್​ಗೆ ಹೆಣ್ಣು ಮಗು, ಇನ್ಸ್​ಸ್ಟಾಗ್ರಾಮ್​ನಲ್ಲಿ ಸಂತಸ ಹಂಚಿಕೊಂಡ ಕಿವೀಸ್ ನಾಯಕ

|

Updated on: Dec 16, 2020 | 10:51 PM

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬಹಳ ಕುತೂಹಲದೊಂದಿಗೆ ನಿರೀಕ್ಷಿಸುತ್ತಿದ್ದ ದಿನ ಬಂದು ಬಿಟ್ಟಿದೆ, ಅವರ ಪತ್ನಿ ಸಾರಾ ಹೆಣ್ಣುಮಗೊವೊಂದಕ್ಕೆ ಜನ್ಮ ನೀಡಿದ್ದಾರೆ.

ವಿಲಿಯಮ್ಸನ್​ಗೆ ಹೆಣ್ಣು ಮಗು, ಇನ್ಸ್​ಸ್ಟಾಗ್ರಾಮ್​ನಲ್ಲಿ ಸಂತಸ ಹಂಚಿಕೊಂಡ ಕಿವೀಸ್ ನಾಯಕ
ಕೇನ್ ವಿಲಿಯಮ್ಸನ್ ಮಗು
Follow us on

ನ್ಯೂಜಿಲೆಂಡ್ ಕ್ರಿಕೆಟ್ ಟೀಮಿನ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅವರ ಪತ್ನಿ ಸಾರಾ ವಿಲಿಯಮ್ಸನ್ ಅವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಸಾರಾ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಶಿಶುವನ್ನು ತಮ್ಮ ಕೈಗಳಲ್ಲಿ ಎತ್ತಿಕೊಂಡಿರುವ ಚಿತ್ರವನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುವ ಮೂಲಕ ವಿಲಿಯಮ್ಸನ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

‘‘ನಮ್ಮ ಕುಟುಂಬದಲ್ಲಿ ಒಂದು ಹೊಸ ಹೆಣ್ಣುಮಗುವನ್ನು ಸ್ವಾಗತಿಸಿರುವ ನಾವು ಆನಂದ ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದೇವೆ,’’ ಎಂಬ ಶೀರ್ಷಿಕೆಯನ್ನು ವಿಲಿಯಮ್ಸನ್ ತಮ್ಮ ಪೋಸ್ಟ್​ಗೆ ನೀಡಿದ್ದಾರೆ.

ಪತ್ನಿ ಸಾರಾಳೊಂದಿಗೆ ಕೇನ್ ವಿಲಿಯಮ್ಸನ್

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯಂತೆ ಹೆರಿಗೆ ಸಮಯದಲ್ಲಿ ಪತ್ನಿಯೊಂದಿಗೆ ಇರಬಯಸಿ, ವಿಲಿಯಮ್ಸನ್ ಸಹ ಪಿತೃತ್ವದ ರಜೆ ಕೋರಿದ್ದರು. ಈ ಕಾರಣ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ ಟಾಮ್ ಲಾಥಮ್ ತಮ್ಮ ತಂಡಕ್ಕೆ ಸುಲಭ ಜಯ ದೊರಕಿಸಿಕೊಟ್ಟರು.

Published On - 10:18 pm, Wed, 16 December 20