ಗುರುವಾರದಿಂದ ಮೊದಲ ಟೆಸ್ಟ್​: ಭಾರತದ ಪ್ಲೇಯಿಂಗ್​ 11 ಪ್ರಕಟ; ಕನ್ನಡಿಗ ಕೆಎಲ್​ ರಾಹುಲ್​​ ಔಟ್​!

ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ನ ನಾಯಕತ್ವ ವಹಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಉಪನಾಯಕರಾಗಿದ್ದಾರೆ. ಕನ್ನಡಿಗ ಕೆಎಲ್​ ರಾಹುಲ್​ಗೆ ವಿಶ್ರಾಂತಿ ನೀಡಲಾಗಿದೆ.

ಗುರುವಾರದಿಂದ ಮೊದಲ ಟೆಸ್ಟ್​: ಭಾರತದ ಪ್ಲೇಯಿಂಗ್​ 11 ಪ್ರಕಟ; ಕನ್ನಡಿಗ ಕೆಎಲ್​ ರಾಹುಲ್​​ ಔಟ್​!
ವಿರಾಟ್ ಕೊಹ್ಲಿ
Follow us
ರಾಜೇಶ್ ದುಗ್ಗುಮನೆ
|

Updated on:Dec 16, 2020 | 6:51 PM

ನಾಳೆಯಿಂದ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಮೊದಲ ಟೆಸ್ಟ್​ಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟ ಮಾಡಿದೆ. ಕನ್ನಡಿಗ ಕೆಎಲ್​ ರಾಹುಲ್​ ಅವರನ್ನು ತಂಡದಿಂದ ಹೊರಗಿಡಲಾಗಿದೆ.

ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ನ ನಾಯಕತ್ವ ವಹಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಉಪನಾಯಕರಾಗಿದ್ದಾರೆ. ಮಯಾಂಕ್​ ಅಗರ್​ವಾಲ್​, ಪೃಥ್ವಿ ಶಾ, ಚೇತೇಶ್ವರ ಪೂಜಾರಾ​, ಹನುಮ ವಿಹಾರಿ, ವೃದ್ಧಿಮಾನ್​ ಸಾಹಾ, ರವಿಚಂದ್ರನ್​ ಅಶ್ವಿನ್​, ಉಮೇಶ್​ ಯಾದವ್​, ಮೊಹ್ಮದ್​ ಶಮಿ ಹಾಗೂ ಜಸ್ಪ್ರೀತ್​ ಬೂಮ್ರಾ ಪ್ಲೇಯಿಂಗ್​ 11 ನಲ್ಲಿದ್ದಾರೆ.

ಇನಅಇದ

ಶುಭ್​ ಮನ್ ಗಿಲ್, ಕೆ.ಎಲ್. ರಾಹುಲ್, ಕುಲದೀಪ್ ಯಾದವ್, ರಿಷಭ್ ಪಂತ್, ನವದೀಪ್ ಸೈನಿ, ಮೊಹ್ಮದ್​ ಸಿರಾಜ್, ರವೀಂದ್ರ ಜಡೇಜಾ ಬೆಂಚ್​ನಲ್ಲಿರುವ ಆಟಗಾರರಾಗಿದ್ದಾರೆ.

ಕನ್ನಡಿಗ ಕೆಎಲ್​ ರಾಹುಲ್​ ಮೊದಲ ಟೆಸ್ಟ್​ನಲ್ಲಿ ಹೊರಗುಳಿದಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಕೆಲ್​ ರಾಹುಲ್​ ಆಡಿದ್ದಾರೆ. ಹೀಗಾಗಿ ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯತೆ ಇದೆ. ಅಲ್ಲದೆ, ಎರಡನೇ ಟೆಸ್ಟ್​ನಿಂದ ವಿರಾಟ್​ ಕೊಹ್ಲಿ ಅಲಭ್ಯರಾಗಲಿದ್ದಾರೆ. ಈ ಕಾರಣಕ್ಕೆ ಮೊದಲ ಟೆಸ್ಟ್​ನಲ್ಲಿ ವಿಶ್ರಾಂತಿ ಕೊಡಲು ನಿರ್ಧರಿಸಲಾಗಿದೆ.

ಮೊದಲ ಟೆಸ್ಟ್​ಗೆ ಮಾತ್ರ ವಿರಾಟ್​ ಕೊಹ್ಲಿ ಆಡಲಿದ್ದಾರೆ. ಎರಡನೇ ಟೆಸ್ಟ್​ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ರೋಹಿತ್​ ಶರ್ಮಾ ಫಿಟ್​ ಎಂದು ಘೋಷಣೆ ಆಗಿದ್ದು, ಮೂರನೇ ಟೆಸ್ಟ್​​ಗೆ ಅವರು ಮರಳುವ ಸಾಧ್ಯತೆ ಇದೆ. ಏಕದಿನ ಸರಣಿ ಆಸ್ಟ್ರೇಲಿಯಾ ಪಾಲಾದರೆ, ಟಿ-20 ಕಪ್​ಅನ್ನು ಭಾರತ ಎತ್ತಿದೆ.

Published On - 2:38 pm, Wed, 16 December 20