ಅಪ್ಪನಾದ ಸ್ಟಾರ್​ ಆಟಗಾರ: ಐಪಿಎಲ್​ ಹರಾಜಿನಿಂದ ಅರ್ಧಕ್ಕೆ ಹೊರನಡೆದ ಇಂಗ್ಲೆಂಡ್​ ವೇಗಿ

|

Updated on: Feb 18, 2021 | 6:37 PM

Seamer Mark Wood: ಸೀಮರ್​ ಇತ್ತೀಚಗಷ್ಟೇ ತಂದೆ ಆಗಿದ್ದರು. ಹೀಗಾಗಿ, ಕುಟುಂಬದ ಜತೆ ಮತ್ತಷ್ಟು ಸಮಯ ಕಳೆಯಲು ಅವರು ಬಯಸಿದ್ದಾರೆ.

ಅಪ್ಪನಾದ ಸ್ಟಾರ್​ ಆಟಗಾರ: ಐಪಿಎಲ್​ ಹರಾಜಿನಿಂದ ಅರ್ಧಕ್ಕೆ ಹೊರನಡೆದ ಇಂಗ್ಲೆಂಡ್​ ವೇಗಿ
ಸೀಮರ್​ ಮಾರ್ಕ್​ ವುಡ್
Follow us on

ಐಪಿಎಲ್​ 2021 ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕ್ರಿಸ್​ ಮಾರಿಸ್​ ಅತ್ಯಂತ ಹೆಚ್ಚು ಬೆಲೆಗೆ ಅಂದರೆ 16.25 ಕೋಟಿ ರೂಪಾಯಿಗೆ ರಾಜಸ್ಥಾನ್​ ರಾಯಲ್ಸ್​ ಪಾಲಾಗಿದ್ದಾರೆ. ಈ ಮಧ್ಯೆ, ಇಂಗ್ಲೆಂಡ್​ ವೇಗಿ ಸೀಮರ್​ ಮಾರ್ಕ್​ ವುಡ್​ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. 31 ವರ್ಷದ ಸೀಮರ್​ ಮಾರ್ಕ್​ ಮೂಲ ಬೆಲೆ 2 ಕೋಟಿ ರೂಪಾಯಿ ಆಗಿತ್ತು. ಆದರೆ, ಕೊನೆಯ ಘಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿರುವ ಸೀಮರ್​, ಹರಾಜಿನಿಂದ ದೂರ ಉಳಿದಿದ್ದಾರೆ.

ಸೀಮರ್​ ಇತ್ತೀಚಗಷ್ಟೇ ತಂದೆ ಆಗಿದ್ದರು. ಹೀಗಾಗಿ, ಕುಟುಂಬದ ಜತೆ ಮತ್ತಷ್ಟು ಸಮಯ ಕಳೆಯಲು ಅವರು ಬಯಸಿದ್ದಾರೆ. ಈ ಕಾರಣಕ್ಕೆ ಐಪಿಎಲ್​ ಆಡದಿರಲು ಅವರು ನಿರ್ಧರಿಸಿದ್ದಾರೆ.

ಸೀಮರ್​ ಭಾರತದ ವಿರುದ್ಧದ ಸರಣಿಗೆ ಇಂಗ್ಲೆಂಡ್​ ಪರ ಸೀಮರ್​ ಆಡಬೇಕಿತ್ತು. ಆದರೆ, ಅವರು ಟೆಸ್ಟ್​ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಕೊನೆಯ ಎರಡು ಟೆಸ್ಟ್​​ನಲ್ಲಿ ವುಡ್​ ಇಂಗ್ಲೆಂಡ್​ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ದಾಖಲೆ ಬರೆದ ಕ್ರಿಸ್​ ಮಾರಿಸ್​..

2021ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್​ ಮೊರಿಸ್​ 16.25 ಕೋಟಿ ರೂಪಾಯಿಗೆ ರಾಜಸ್ಥಾನ್​ ರಾಯಲ್ಸ್​ ಪಾಲಾಗಿದ್ದಾರೆ. ಈ ಮೂಲಕ ಅವರು ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್​ ಮೊರಿಸ್​ ಮೂಲ ಬೆಲೆ 75 ಲಕ್ಷ ರೂಪಾಯಿ ಇತ್ತು. ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್​ 2020ರಲ್ಲಿ ಆರ್​ಸಿಬಿ ಪರ ಆಡಿದ್ದರು. ಗಾಯದ ಸಮಸ್ಯೆಯಿಂದ ಕೆಲ ಮ್ಯಾಚ್​ಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ಆಡಿದ ಕೆಲವೇ ಮ್ಯಾಚ್​ಗಳಲ್ಲಿ ಅವರು ಮಿಂಚಿದ್ದರು. ಆದಾಗ್ಯೂ, ಆರ್​ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಕ್ರಿಸ್​ ಮೊರಿಸ್​ಗೆ ಮುಂಬೈ ಇಂಡಿಯನ್ಸ್​​ ಮೊದಲ ಬಾರಿಗೆ ಬಿಡ್​ ಮಾಡಿತ್ತು. ಆರ್​ಸಿಬಿ ಕೂಡ ಇಂದಿನ ಪಂದ್ಯದಲ್ಲಿ ಬಿಡ್​ ಮಾಡಿತ್ತು. ಆರ್​ಸಿಬಿ ಕ್ರಿಸ್​ ಮಾರಿಸ್​ಗೆ 12.75 ಕೋಟಿ ರೂಪಾಯಿವರೆಗೆ ಬಿಡ್​ ಮಾಡಿತ್ತು. ಮೊರಿಸ್​ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್​ ಹಾಗೂ ರಾಜಸ್ಥಾನ ರಾಯಲ್ಸ್​ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಮಧ್ಯೆ ಪಂಜಾಬ್​ ಕೂಡ ಹರಾಜಿನಲ್ಲಿ ಸೇರಿಕೊಂಡು 16 ಕೋಟಿ ರೂಪಾಯಿ ಕೂಗಿತ್ತು. ಕೊನೆಗೆ ರಾಜಸ್ಥಾನ್​ ರಾಯಲ್ಸ್​ 16.25 ಕೋಟಿ ರೂಪಾಯಿಗೆ ಖರೀದಿಸಿತು.

ಇದನ್ನೂ ಓದಿ: IPL 2021 Auction: ಐಪಿಎಲ್ 2021 ಹರಾಜಿನಲ್ಲಿದ್ದಾರೆ 14 ಕನ್ನಡಿಗರು, ಕರ್ನಾಟಕದವರಿಗೆ ಆದ್ಯತೆ ಕೊಡುತ್ತಾ RCB

Published On - 5:21 pm, Thu, 18 February 21