ಸಚಿನ್ ಎಂದಿಗೂ ನಿಮ್ಮನ್ನು ಪ್ರಬಲ ಎದುರಾಳಿ ಎಂದು ಪರಿಗಣಿಸಲಿಲ್ಲ.. ಸಖತ್ ಟ್ರೋಲ್ ಆಗ್ತಿದೆ ಶೋಯೆಬ್ ಅಖ್ತರ್ ಟ್ವಿಟರ್ ಪೋಸ್ಟ್!
ಸಚಿನ್, ನಿನಗಿಂತಲೂ ಹೆಚ್ಚು ಭಯಂಕರವಾದ ವೇಗದ ಬೌಲರ್‌ಗಳನ್ನು ಎದುರಿಸಿದ್ದಾರೆ. ನೀವು ಕೇವಲ ವೇಗದ ಬೌಲರ್ ಅಷ್ಟೇ. ನಿಮ್ಮನ್ನು ಎಂದಿಗೂ ಸಚಿನ್ ಪ್ರಬಲ ಎದುರಾಳಿ ಎಂದು ಪರಿಗಣಿಸಲಿಲ್ಲ.
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ಪತ್ತೆಯಾದ ಗಣ್ಯರ ಸಾಲಿಗೆ ಈಗ ಸಚಿನ್ ತೆಂಡೂಲ್ಕರ್ ಸಹ ಸೇರ್ಪಡೆಯಾಗಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಕ್ರಿಕೆಟ್ ಸವ್ಯಸಾಚಿ ತೆಂಡೂಲ್ಕರ್, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನಗೆ ಕೊರೊನಾ ಸೋಂಕಿನ ಅಲ್ಪಸ್ವಲ್ಪ ಲಕ್ಷಣಗಳಿದ್ದು, ಮನೆಯ ಮಿಕ್ಕೆಲ್ಲರಿಗೂ ಕೊರೊನಾ ನೆಗೆಟಿವ್ ಬಂದಿದೆ. ಮುಂಜಾಗೃತಾ ಕ್ರಮವಾಗಿ ಹೋಂ ಕ್ವಾರಂಟೈನ್ ಆಗಿ ವೈದ್ಯರು ಸೂಚಿಸಿದ ಎಲ್ಲ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ. ಕೊರೊನೊ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯ ಸಮುದಾಯಕ್ಕೂ, ದೇಶದ ನನ್ನೆಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದರು.
ಸಚಿನ್ ಚೇತರಿಕೆಯ ಬಗ್ಗೆ ಟ್ವೀಟ್ ಸಚಿನ್ಗೆ ಕೊರೊನಾ ತಗುಲಿರುವುದನ್ನು ಅರಿತ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸಚಿನ್ ಚೇತರಿಕೆಯ ಬಗ್ಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಆದರೆ ಈಗ ಶೋಯೆಬ್ ಅಖ್ತರ್ ಮಾಡಿದ ಆ ಟ್ವೀಟ್ಟೆ ಅವರನ್ನು ಟ್ರೋಲಿಗರಿಗೆ ಬಾಯಿಗೆ ತುತ್ತಾಗಿಸಿದೆ. ಶೋಯೆಬ್ ಟ್ವೀಟ್ಗೆ ವ್ಯಾಪಾಕವಾಗಿ ಟ್ರೋಲ್ ಮಾಡುತ್ತಿರುವ ನೆಟ್ಟಿಗರು ಅಖ್ತರ್ಗೆ ಮಾತಿನ ಚೆಡಿ ಏಟು ನೀಡುತ್ತಿದ್ದಾರೆ. ಅಷ್ಟಕ್ಕೂ ಶೋಯೆಬ್ ಅಖ್ತರ್ ಮಾಡಿದ ಟ್ವೀಟ್ಟಾದರೂ ಏನು?
ಅಂಗಳದಲ್ಲಿ ನನ್ನ ನೆಚ್ಚಿನ ಎದುರಾಳಿಗಳಲ್ಲಿ ಒಬ್ಬರು 1999-2000ನೇ ಇಸವಿಯ ಪಂದ್ಯವೊಂದರ ವಿಶೇಷ ಫೋಟೋವನ್ನು ಹಂಚಿಕೊಂಡ ಶೋಯೆಬ್ ಅಖ್ತರ್. ಸಚಿನ್ ತೆಂಡೂಲ್ಕರ್ ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಶೋಯೆಬ್ ಅಖ್ತರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಶೋಯೆಬ್ ಅಖ್ತರ್ ಟ್ವೀಟ್ಟರ್ನಲ್ಲಿ ಹಂಚಿಕೊಂಡಿರುವ ಫೋಟೋ ಹಾಗೂ ನೀಡಿರುವ ಅಡಿಬರಹ ನೆಟ್ಟಿಗರ ಕಣ್ಣನ್ನು ಕೆಂಪಾಗಾಗಿಸಿದೆ. ಶೋಯೆಬ್ ಹಂಚಿಕೊಂಡಿರುವ ಫೋಟೋ, 1999-2000ನೇ ಇಸವಿಯಲ್ಲಿನ ಭಾರತ-ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ತ್ರಿಕೋನ ಸರಣಿಯ ಫೋಟೋ ಇದಾಗಿದ್ದು. ಸಚಿನ್ ಹಾಗೂ ಶೋಯೆಬ್ ಅಖ್ತರ್ ಮುಖಾಮುಖಿಯಾಗುವ ಚಿತ್ರವಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಶೋಯೆಬ್ ಅಖ್ತರ್, ಅಂಗಳದಲ್ಲಿ ನನ್ನ ನೆಚ್ಚಿನ ಎದುರಾಳಿಗಳಲ್ಲಿ ಒಬ್ಬರು ಎಂದು ಬರೆದುಕೊಂಡಿದ್ದಾರೆ.
One of my favorite rivalries on the ground. Get well soon buddy @sachin_rt pic.twitter.com/mAleuepcwM
— Shoaib Akhtar (@shoaib100mph) March 30, 2021
ಅಖ್ತರ್ ಅವರ ಈ ಹೇಳಿಕೆಯನ್ನು ಗಮನಿಸಿದ ಅನೇಕ ನೆಟ್ಟಿಗರು, ಶೋಯೆಬ್ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅಖ್ತರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಸಚಿನ್, ನಿನಗಿಂತಲೂ ಹೆಚ್ಚು ಭಯಂಕರವಾದ ವೇಗದ ಬೌಲರ್‌ಗಳನ್ನು ಎದುರಿಸಿದ್ದಾರೆ. ನೀವು ಕೇವಲ ವೇಗದ ಬೌಲರ್ ಅಷ್ಟೇ. ನಿಮ್ಮನ್ನು ಎಂದಿಗೂ ಸಚಿನ್ ಪ್ರಬಲ ಎದುರಾಳಿ ಎಂದು ಪರಿಗಣಿಸಲಿಲ್ಲ. ಅವರು ಆಂಬ್ರೋಸ್, ಮೆಕ್‌ಗ್ರಾತ್, ವಾಸಿಮ್, ವಾಕರ್, ವಾಸ್, ಡೊನಾಲ್ಡ್, ಸ್ಟೇನ್ ಕ್ಯಾಡಿಕ್ ಲೀ ಮತ್ತು ಇನ್ನೂ ಅನೇಕ ಘಾತಕ ಬೌಲರ್‌ಗಳನ್ನ ಎದುರಿಸಿದ್ದಾರೆ ಜೊತೆಗೆ ಸರಿಯಾಗಿಯೇ ದಂಡಿಸಿದ್ದಾರೆ ಎಂದಿದ್ದಾರೆ.
ಇನ್ನೂ ಕೆಲವು ಬಳಕೆದಾರರು ಆಶ್ಚರ್ಯಪಡುತ್ತಾ, ಅಖ್ತರ್ ತೆಂಡೂಲ್ಕರ್ ಅವರಿಗೆ ಶೀಘ್ರವಾಗಿ ಗುಣಮುಖರಾಗಬೇಕೆಂದು ಬಯಸಿದಾಗ ಜನರು ಏಕೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಆಶ್ಚರ್ಯಪಟ್ಟರು.
Shoaib bhai, U were just fast and never considered you as his rivalry.He had played and smashed more legendary bowlers like Ambrose , McGrath, Wasim , Waqar, Vaas, Donald , Steyn Caddick Lee and many more .
U were just another bowler nothing more..
— A₹pit?? (@tweet2api) March 31, 2021
to be honest ..sachin ki rivalary app se nahi akram or yunus se banti thi..
— mohsin (@kharasach000) March 30, 2021
Put the hatred on side guys and appreciate that he wished him a recovery message. Being nice is not too hard.
— Sagar Khurmi (@khurmi_sagar) March 31, 2021
ರಸ್ತೆ ಸುರಕ್ಷತೆ ವಿಶ್ವ ಟಿ20 ಸರಣಿ ಸಚಿನ್ ಅವರಿಗೆ ಕೊರೊನಾ ಧೃಡಪಟ್ಟಿರುವುದರಿಂದ ಈಗ ಟೀಂ ಇಂಡಿಯಾದ ಮಾಜಿ ಆಟಗಾರರಿಗೆ ಆತಂಕ ಶುರುವಾಗಿದೆ. ಏಕೆಂದರೆ ಕೆಲವು ದಿನಗಳ ಹಿಂದಷ್ಟೇ ಸಚಿನ್ ನೇತೃತ್ವದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ರಸ್ತೆ ಸುರಕ್ಷತೆ ವಿಶ್ವ ಟಿ 20 ಸರಣಿಯನ್ನು ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಹೆಸರಾಂತ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಪಠಾಣ್ ಬ್ರದರ್ಸ್ ಮುಂತಾದ ಆಟಗಾರರು ಸಹ ಇದ್ದರು. ಇವರಲ್ಲದೆ ವಿದೇಶಿ ಆಟಗಾರರು ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸಚಿನ್ ಅವರಿಗೆ ಈಗ ಕೊರೊನಾ ಸೋಂಕು ತಗುಲಿರುವುದರಿಂದ ಆ ಎಲ್ಲಾ ಆಟಗಾರರಿಗೆ ಆತಂಕ ಶುರುವಾಗಿದೆ.
ರಸ್ತೆ ಸುರಕ್ಷತೆ ವಿಶ್ವ ಟಿ 20 ಸರಣಿ ಮುಗಿದ ನಂತರವೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಕೊರೊನಾ ಪರೀಕ್ಷೆಯನ್ನು ಮಾಡಿಸಿದ್ದರು. ಇದರಲ್ಲಿ ಅವರ ಫಲಿತಾಂಶವು ಸಕಾರಾತ್ಮಕವಾಗಿದೆ. ಹೀಗಾಗಿ ಆಟದ ವೇಳೆ ಎದುರಾಳಿ ತಂಡದ ಆಟಗಾರ ಔಟ್ ಆದ ವೇಳೆ ತಂಡದ ಆಟಗಾರರೆಲ್ಲ ಸಚಿನ್ ಒಟ್ಟಗೂಡಿ ಸಂಭ್ರಮಿಸಿದ್ದರು. ಜೊತೆಗೆ ತಂಡ ಗೆದ್ದಾಗಲೂ ಸಹ ತಂಡದ ಆಟಗಾರರೆಲ್ಲ ತಬ್ಬಿ ಸಂಭ್ರಮಿಸಿದ್ದರು. ಆದರಿಂದ ಸಚಿನ್ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರಿಗೂ ಈಗ ಕೊರೊನಾ ತಗುಲುವ ಆತಂಕ ಶುರುವಾಗಿದೆ.
Published On - 2:58 pm, Thu, 1 April 21