ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತದ ಮೇಲೆ ದಾಳಿ; ವೈರಲ್ ಆಯ್ತು ಶೋಯೆಬ್ ಅಖ್ತರ್​ ಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 1:18 PM

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು. ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ ನಂತರ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತದ ಮೇಲೆ ದಾಳಿ; ವೈರಲ್ ಆಯ್ತು ಶೋಯೆಬ್ ಅಖ್ತರ್​ ಮಾತು
ಶೋಯೆಬ್ ಅಖ್ತರ್
Follow us on

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭಾರತದ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದು. ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ ನಂತರ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು ಶೋಯೆಬ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ಸಾಮ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ಹಳೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ಭಾರತ ಮತ್ತು ಕಾಶ್ಮೀರದ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿದವರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮೊದಲಿನವರಾಗಿಲ್ಲ. ಶೋಯೆಬ್ ಅಖ್ತರ್​ಗೆ​ ಮುಂಚೆಯೇ, ಪಾಕಿಸ್ತಾನ ಕ್ರಿಕೆಟ್ ತಂಡದ ಅನೇಕ ಆಟಗಾರರು ಭಾರತದ ಬಗ್ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವರಲ್ಲಿ ಶಾಹಿದ್ ಅಫ್ರಿದಿ, ಜಾವೇದ್ ಮಿಯಾಂದಾದ್ ಅವರ ಹೆಸರುಗಳು ಸೇರಿವೆ.

ಶೋಯೆಬ್ ವಿವಾದ ಇದೆ ಮೊದಲೆನಲ್ಲಾ..
ಶೋಯೆಬ್ ಅಖ್ತರ್ ವಿವಾದಗಳೊಂದಿಗೆ ಸದಾ ನಂಟು ಹೊಂದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಇತರ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಅವರು ಆಗಾಗ್ಗೆ ವಿವಾದತ್ಮಾಕ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಆದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಅವರ ಗಜ್ವಾ-ಎ-ಹಿಂದ್ (ಭಾರತವನ್ನು ಸಂಪೂರ್ಣ ಗೆಲ್ಲುವುದು) ಉಲ್ಲೇಖದ ವಿಡಿಯೋ ವೈರಲ್ ಆಗುತ್ತಿದ್ದು, ಅವರ ಚಿಂತನೆಗಳು ತೀವ್ರ ಟೀಕೆಗೆ ಗುರಿಯಾಗುತ್ತಿವೆ.