BCCI 89th AGM: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆಯನ್ನೂ ಸೇರಿಸಲು ಬಿಸಿಸಿಐ ಮನವಿ, ಸಭೆಯ ವಿವರಗಳೇನು?
ಗುರುವಾರ ಎಜಿಎಂನ 89 ನೇ ವಾರ್ಷಿಕ ಸಭೆಯನ್ನು ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಬಿಸಿಸಿಐ 2022ರಿಂದ ಐಪಿಎಲ್‌ನಲ್ಲಿ 10 ತಂಡಗಳು ಭಾಗವಹಿಸಲು ಅನುಮೋದನೆ ನೀಡಿದೆ.
ಅಹಮದಾಬಾದ್: ಇಂದು ನಡೆದ 89 ನೇ ವಾರ್ಷಿಕ ಸಭೆಯಲ್ಲಿ ಬಿಸಿಸಿಐ 2022 ರಿಂದ ಐಪಿಎಲ್‌ನಲ್ಲಿ 10 ತಂಡಗಳು ಭಾಗವಹಿಸಲು ಅನುಮೋದನೆ ನೀಡಿದೆ. ಜೊತೆಗೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆಯನ್ನೂ ಸೇರಿಸಬೇಕೆಂಬ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈವರೆಗೂ ಐಪಿಎಲ್‌ನಲ್ಲಿ 8 ತಂಡಗಳಿಗೆ ಅವಕಾಶ ನೀಡಲಾಗಿತ್ತು. ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಹೆಚ್ಚುವರಿ ತಂಡಗಳಿಗೆ ಅವಕಾಶ ನೀಡಬೇಕೆಂಬ ಆಗ್ರಹ ಹೆಚ್ಚಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಿಸಿಸಿಐ ಇಂದು ನಡೆದ ಸಭೆಯಲ್ಲಿ ಹೆಚ್ಚುವರಿಯಾಗಿ 2 ತಂಡಗಳಿಗೆ ಅವಕಾಶ ನೀಡಲು ನಿರ್ಧಾರ ಮಾಡಿದೆ. ಜೊತೆಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆಯನ್ನೂ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನ ಬಿಸಿಸಿಐ ಸಹ ಎತ್ತಿಹಿಡಿದಿದ್ದು, ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆಯನ್ನೂ ಸೇರಿಸಬೇಕೆಂಬ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಿದೆ.
ಇದಕ್ಕೂ ಮೊದಲು 2011ರಲ್ಲಿ 10 ತಂಡಗಳು ಕಣಕ್ಕಿಳಿದಿದ್ದವು.. ಈ ಹಿಂದೆ ಐಪಿಎಲ್‌ನಲ್ಲಿ 2 ಹೊಸ ತಂಡಗಳನ್ನು ಸೇರಿಸಲು ಮಂಡಳಿಯ ಮುಂದೆ ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 11 ವರ್ಷಗಳ ನಂತರ ಅಂದರೆ 2022 ರಲ್ಲಿ 10 ತಂಡಗಳು ಮತ್ತೊಮ್ಮೆ ಐಪಿಎಲ್ ಆಡಲ್ಲಿವೆ. ಇದಕ್ಕೂ ಮೊದಲು 2011ರಲ್ಲಿ 10 ತಂಡಗಳು ಮೊದಲ ಮತ್ತು ಕೊನೆಯ ಬಾರಿಗೆ ಕಣಕ್ಕಿಳಿದಿದ್ದವು. ಅಂದು ಕೊಚ್ಚಿ ಟಸ್ಕರ್ಸ್ ಮತ್ತು ಸಹಾರಾ ಪುಣೆ ವಾರಿಯರ್ಸ್ 9 ಮತ್ತು 10 ನೇ ಹೊಸ ತಂಡಗಳಾಗಿ ಸೇರ್ಪಡೆಗೊಂಡಿದ್ದವು.
ನವೆಂಬರ್ 10, 2020 ರಂದು ದುಬೈನಲ್ಲಿ ನಡೆದ ಐಪಿಎಲ್‌ನ ಅಂತಿಮ ಪಂದ್ಯದ ನಂತರ 2 ಹೊಸ ತಂಡಗಳನ್ನು ಸೇರಿಸಬೇಕೆಂಬ ಚರ್ಚೆ ಪ್ರಾರಂಭವಾಗಿತ್ತು. ಆದಾಗ್ಯೂ, 2021 ರ ಆವೃತ್ತಿಯಿಂದಲೇ 10 ಹೊಸ ತಂಡಗಳೊಂದಿಗೆ ಲೀಗ್ ಅನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಬಹುದು ಎಂಬ ಊಹಾಪೋಹಗಳು ಶುರುವಾಗಿದ್ದವು. ಆದರೆ ಅನೇಕ ಫ್ರ್ಯಾಂಚೈಸ್ ಮಾಲೀಕರು ಇದನ್ನು ಒಪ್ಪಲಿಲ್ಲ.
ಈಗ ಎಜಿಎಂನಲ್ಲಿ ಮಂಡಳಿಯ ನಿರ್ಧಾರದ ನಂತರ ಎಲ್ಲಾ ರೀತಿಯ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ಜೊತೆಗೆ 2022 ರ ಆವೃತ್ತಿಯಿಂದ 10 ತಂಡಗಳೊಂದಿಗೆ ಲೀಗ್ ಅನ್ನು ಆಯೋಜಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಈ ಕಾರಣದಿಂದಾಗಿ ಐಪಿಎಲ್‌ನ ಅತಿದೊಡ್ಡ ಹರಾಜು (ಮೆಗಾ ಹರಾಜು) ಸಹ 2022 ರ ಆವೃತ್ತಿಗೂ ಮುಂಚಿತವಾಗಿ ನಡೆಯಲಿದೆ. ಹೀಗಾಗಿ ಮಂಡಳಿಯು 2021 ರ ಆವೃತ್ತಿಯಲ್ಲಿ ಸಣ್ಣ ಹರಾಜನ್ನು ಆಯೋಜಿಸುವ ನಿರೀಕ್ಷೆಗಳಿವೆ.
ಅಲ್ಲದೆ ಈ ಸಭೆಯಲ್ಲಿ ಎಲ್ಲಾ ರಾಜ್ಯ ಸಂಘಗಳ ಪ್ರತಿನಿಧಿಗಳು, ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಷಾ ಅವರ ಸಮ್ಮುಖದಲ್ಲಿ ಅಹಮದಾಬಾದ್‌ನ ಹೊಸ ಮೊಟೆರಾ ಕ್ರೀಡಾಂಗಣದಲ್ಲಿ ಸಭೆ ನಡೆಸಿದರು. ಇದರಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಎಜಿಎಂನಲ್ಲಿ ತೆಗೆದುಕೊಂಡ ನಿರ್ಧಾರಗಳು ಹೀಗಿವೆ.. ಐಪಿಎಲ್‌ನಲ್ಲಿ 2 ಹೊಸ ತಂಡಗಳಿಗೆ ಅನುಮೋದನೆ ನೀಡಲಾಯಿತು. ಇದರೊಂದಿಗೆ, ಲೀಗ್‌ನಲ್ಲಿನ ತಂಡಗಳ ಸಂಖ್ಯೆ 8 ರಿಂದ 10 ಕ್ಕೆ ಏರಿಕೆಯಾಗಲಿದೆ.
– ಕೊರೊನಾ ವೈರಸ್‌ನಿಂದಾಗಿ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿವೆ. ಇದರಿಂದಾಗಿ ದೇಶೀಯ ಕ್ರಿಕೆಟಿಗರಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ. ಹಾಗಾಗಿ ದೇಶಿಯ ಪುರುಷ ಮತ್ತು ಮಹಿಳಾ ಆಟಗಾರರಿಗೆ ಸರಿಯಾದ ಪರಿಹಾರ ನೀಡಲಾಗುವುದು ಎಂದು ಎಜಿಎಂನಲ್ಲಿ ನಿರ್ಧರಿಸಲಾಗಿದೆ.
– 2021 ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮತ್ತು 2023 ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗಾಗಿ ಐಸಿಸಿಗೆ ತೆರಿಗೆ ವಿನಾಯಿತಿ ನೀಡುವಂತೆ ಮಂಡಳಿಯ ಕಾರ್ಯದರ್ಶಿ ಜೈ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರು ಭಾರತ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ.
– 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಲು ಇನ್ನೂ ಹೆಚ್ಚಿನ ಚರ್ಚೆ ನಡೆಸಲು ಮಂಡಳಿ ನಿರ್ದರಿಸಿದೆ. ಮಂಡಳಿಯು ಇದಕ್ಕಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ನೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ ಆದಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಿದೆ.
– ಮಂಡಳಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಮಾರ್ಕೆಟಿಂಗ್ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.
– ರಾಜೀವ್ ಶುಕ್ಲಾ ಅವರು ಮಂಡಳಿಯ ಉಪಾಧ್ಯಕ್ಷರಾಗಿ ಔಪಚಾರಿಕವಾಗಿ ಆಯ್ಕೆಯಾಗಿದ್ದಾರೆ.
Published On - 4:00 pm, Thu, 24 December 20