
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಣ ಸಾಂಪ್ರದಾಯಿಕ ಚೊಚ್ಚಲ ಟೆಸ್ಟ್ ಕ್ರಿಕೆಟ್ ವಿಶ್ವ ಚಾಂಪಿಯನ್‌ಶಿಪ್ ಮಳೆಯಲ್ಲಿ ಕೊಚ್ಚಿ ಹೋಗುವುದು ಬಹುತೇಕ ಖಚಿತವಾಗಿದೆ. ಇಂದು ಪಂದ್ಯದ ಕೊನೆಯ ದಿನ. ಮಳೆರಾಯನಿಂದಾಗಿ ಹೆಚ್ಚು‘ವರಿ’ಯಾಗಿ ನಾಳೆಯೂ ಟೆಸ್ಟ್ ಮ್ಯಾಚ್ ಮುಂದುವರಿದ್ದೇ ಆದರೆ… ನಾಳೆಯೂ ಆಟ ನಡೆಯಲಿದೆ. ಸೌಥಾಂಪ್ಟನ್ನಲ್ಲಿ ಮಳೆಗಾಲದ ಆಟ ಜೋರಾಗಿದ್ದರೂ ಇಂದು ಮತ್ತು ನಾಳೆ ಇಲ್ಲಿ ಅಷ್ಟಾಗಿ ಮಳೆ ಬರುವುದಿಲ್ಲ ಅನ್ನುತ್ತಿದೆ ಇಲ್ಲಿನ ಹವಾಮಾನ ವರದಿಗಳು.
ಸೌಥಾಂಪ್ಟನ್ ಕ್ರಿಕೆಟ್ ಮೈದಾನದ (Ageas Bowl, Southampton) ಆಜುಬಾಜು ನಾಲ್ಕೈದು ದಿನಗಳಿಂದ ಮಳೆಯೋ ಮಳೆ. ಕ್ರೀಡಾಂಗಣ ತೊಯ್ದುತೊಪ್ಪೆಯಾಗಿದೆ. ಅದರ ಮಧ್ಯೆಯೇ ಎರಡೂ ತಂಡಗಳು ಒಂದು ಇನ್ನಿಂಗ್ಸ್ ಆಡುವ ಶಾಸ್ತ್ರ ಮಾಡಿವೆ ಅಷ್ಟೆ. ಸೌಥಾಂಪ್ಟನ್ ಹವಾಮಾನ ವರದಿ ಹೇಗಿದೆಯೆಂದರೆ ಇಂದು ಮತ್ತು ನಾಳೆ ಮಳೆ ಆಗುವುದಿಲ್ಲವಂತೆ. ಅಲ್ಲಿಗೆ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಕೊನೆಯ ಎರಡು ದಿನಗಳ ಆಟಕ್ಕೆ ಯಾವುದೇ ಬಾಧೆಯಿಲ್ಲ ಎನ್ನಬಹುದು.
Southampton Weather Today Live Update, WTC Final, India vs New Zealand: What’s in store for us today. Here’s what the expected weather would be like.
?️ #Southampton Light rain for the hour 14°C with rain, Possible drizzle until this afternoon with highs of 15°C #MyWeather
— ?️ Southampton Weather (@MyWeather_SOU) June 22, 2021
ಕನಿಷ್ಠ 196 ಓವರ್ಗಳ ಆಟ ನಡೆಯುವ ಸಾಧ್ಯತೆಯಿದೆ ಹೆಚ್ಚಾಗಿದೆ…
ಇಂದು ಮತ್ತು ನಾಳೆಯ ಹವಾಮಾನ ಕ್ರಿಕೆಟ್ ಆಟಕ್ಕೆ ಆಶಾದಾಯಕವಾಗಿದ್ದು. ಕನಿಷ್ಠ 196 ಓವರ್ಗಳ ಆಟ ನಡೆಯುವ ಸಾಧ್ಯತೆಯಿದೆ ಹೆಚ್ಚಾಗಿದೆ. ಅಂದ್ರೆ ಟೆಸ್ಟ್ ಪಂದ್ಯದ ಫಲಿತಾಂಶ ಬರುವುದು ಖಚಿತವಾ? ಎಂದು ಕ್ರಿಕೆಟ್ ಪ್ರೇಮಿಗಳು ಕೇಳುವಂತಾಗಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಕೂಡ ಮಳೆಯ ಕಾರಣದಿಂದ ನಾಲ್ಕನೆಯ ದಿನವಾದ ನಿನ್ನೆಯೂ ರದ್ದಾಗಿತ್ತು. ಮೊನ್ನೆ (ಜೂನ್ 20) ಭಾರತ 217 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆ ಬಳಿಕ, ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿತ್ತು. ಇಂದು ಒಂದು ಬಾಲ್ ಆಟ ಕೂಡ ನಡೆಯದ ಕಾರಣ ಮೂರನೇ ದಿನದಾಟದ ರನ್ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲ ದಿನದಾಟ ಮಳೆಯ ಕಾರಣದಿಂದ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಮೂರನೇ ದಿನವಾದ ನಿನ್ನೆ ಮಳೆಯಿಂದ ಸ್ವಲ್ಪ ಅಡ್ಡಿಯಾದರೂ ಬಹುತೇಕ ಪೂರ್ತಿ ದಿನ ಪಂದ್ಯ ನಡೆದಿತ್ತು.
(Southampton Weather Update Rain until tomorrow afternoon no rains possibility of WTC Final test play)
Published On - 9:51 am, Tue, 22 June 21