‘ಡಬಲ್ ಗಿಫ್ಟ್‘​ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿಗೆ 32ನೇ ಹುಟ್ಟುಹಬ್ಬದ ಸಂಭ್ರಮ

|

Updated on: Nov 05, 2020 | 2:28 PM

ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ ಹಾಗೂ ರನ್ ಸಾಮ್ರಾಟ್ ವಿರಾಟ್ ಕೊಹ್ಲಿ 32ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಯಾವುದೇ ಪಿಚ್ ಆಗಿರಲಿ, ಬೌಲರ್ ಯಾರೇ ಆಗಿರಲಿ, ದಂಡಂ ದಶಗುಣಂ ಅಂತ ಚೆಂಡನ್ನ ದಂಡಿಸೋದೆ ದಾಖಲೆಗಳ ವೀರ ಕೊಹ್ಲಿಯ ಗುಣ. To the man who’s given blood, sweat and tears to the Red and Gold. To our Leader and Legend, Here’s wishing KING KOHLI a very Happy Birthday!! […]

‘ಡಬಲ್ ಗಿಫ್ಟ್‘​ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿಗೆ 32ನೇ ಹುಟ್ಟುಹಬ್ಬದ ಸಂಭ್ರಮ
Follow us on

ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ ಹಾಗೂ ರನ್ ಸಾಮ್ರಾಟ್ ವಿರಾಟ್ ಕೊಹ್ಲಿ 32ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಯಾವುದೇ ಪಿಚ್ ಆಗಿರಲಿ, ಬೌಲರ್ ಯಾರೇ ಆಗಿರಲಿ, ದಂಡಂ ದಶಗುಣಂ ಅಂತ ಚೆಂಡನ್ನ ದಂಡಿಸೋದೆ ದಾಖಲೆಗಳ ವೀರ ಕೊಹ್ಲಿಯ ಗುಣ.

1988ರ ನವೆಂಬರ್ 5ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ, 2008ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕ್ರೀಸ್​ಗೆ ಇಳಿದರೆ ಸಾಕು ಅಪ್ಪಟ ರನ್‌ ಮಷೀನ್‌ನಂತೆ ಬ್ಯಾಟ್‌ ಬೀಸುವ ವಿರಾಟ್‌, ಇದೀಗ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿಯೂ ಹೊರಹೊಮ್ಮಿದ್ದಾರೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್ ಬಳಿಕ ಟೀಮ್‌ ಇಂಡಿಯಾ ಕಂಡ ಬ್ರಿಲಿಯಂಟ್ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ. ಅಂದಹಾಗೆ ಸಚಿನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಶತಕಗಳ ಶತಕದ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಇರುವ ಬ್ಯಾಟ್ಸ್‌ಮನ್‌ ಆಗಿಯೂ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಕ್ಲಾಸಿಕ್‌ ಹೊಡೆತಗಳಿಗೆ ಹೆಸರುವಾಸಿಯಾದ ವಿರಾಟ್‌, ರನ್​ ಗಳಿಕೆಗೆ ಸಿಕ್ಸರ್‌ಗಳಿಗಿಂತಲೂ ಫೋರ್‌ಗಳ ಮೇಲೆ ಹೆಚ್ಚು ವಿಶ್ವಾಸ ಇಡುವಂತಹ ಬ್ಯಾಟ್ಸ್‌ಮನ್‌. ವಿರಾಟ್ ಕವರ್‌ ಡ್ರೈವ್‌ ಮತ್ತು ಫ್ಲಿಕ್‌ ಹೊಡೆತಗಳನ್ನು ನೋಡುವುದು ಕ್ರಿಕೆಟ್‌ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ. ದಶಕಗಳ ಕಾಲ ಕ್ರಿಕೆಟ್‌ ಪ್ರಿಯರನ್ನು ಮನಮೋಹಕ ಬ್ಯಾಟಿಂಗ್‌ ಪ್ರದರ್ಶನಗಳ ಮೂಲಕ ರಂಜಿಸಿರುವ ವಿರಾಟ್‌ ಕೊಹ್ಲಿ, ದಾಖಲೆಗಳ ವೀರನಾಗಿ ಮೆರೆದಾಡ್ತಿದ್ದಾರೆ. 32ನೇ ಹುಟ್ಟುಹಬ್ಬದ ದಿನದಂದು ಅವರ ಸಾಧನೆಯ ಪಟ್ಟಿಯಲ್ಲಿನ ಕೆಲ ಪ್ರಮುಖ ಹೈಲೈಟ್‌ಗಳ ಝಲಕ್‌ ಇಲ್ಲಿದೆ.

2008ರಲ್ಲಿ ಟೀಮ್‌ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಗಲೇ 86 ಪಂದ್ಯಗಳಿಂದ 7,240 ರನ್‌ಗಳನ್ನು ಬಾರಿಸಿ 53.62ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ.

-ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 11,867 ರನ್‌ಗಳನ್ನು ದಾಖಲಿಸಿದ್ದಾರೆ.

-ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಅತಿ ಹೆಚ್ಚು ರನ್‌ (2,794) ಬಾರಿಸಿದ ಕೀರ್ತಿ ಕಿಂಗ್‌ ಕೊಹ್ಲಿ ಅವರದ್ದು.

-ಟೆಸ್ಟ್‌, ಒಡಿಐ ಮತ್ತು ಟಿ20 ಮೂರೂ ಮಾದರಿಗಳಲ್ಲಿ 50ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಹೊಂದಿರುವ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಆಗಿದ್ದಾರೆ.

-2016ರವರೆಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ಕೂಡ ದ್ವಿಶತಕ ಬಾರಿಸಿರಲಿಲ್ಲ. ಆದರೆ, 2017ರ ಅಂತ್ಯಕ್ಕೆ ಒಟ್ಟು 6 ದ್ವಿಶತಕ ಬಾರಿಸಿದ್ದರು.

-ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರು 254 ರನ್‌ ತಮ್ಮ ಟೆಸ್ಟ್‌ ವೃತ್ತಿ ಬದುಕಿನ ಶ್ರೇಷ್ಠ ಸ್ಕೋರ್‌.

-ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಸದ್ಯ ಆರನೇ ಸ್ಥಾನದಲ್ಲಿದ್ದಾರೆ.

-ಏಕದಿನ ಕ್ರಿಕೆಟ್​ನಲ್ಲಿ ಸಚಿನ್‌ (49) ಶತಕ ಬಾರಿಸಿದ್ರೆ, ವಿರಾಟ್‌ ಕೊಹ್ಲಿ 43 ಸೆಂಚುರಿ ದಾಖಲಿಸಿದ್ದಾರೆ.

-ಟಿ20 ಕ್ರಿಕೆಟ್‌ನಲ್ಲೂ ಕೊಹ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಒಟ್ಟು 295 ಪಂದ್ಯಗಳಿಂದ 41.41ರ ಬ್ಯಾಟಿಂಗ್‌ ಸರಾಸರಿಯಲ್ಲಿ 9,360 ರನ್‌ಗಳನ್ನು ಗಳಿಸಿದ್ದಾರೆ.

-ಐಪಿಎಲ್‌ ಒಂದರಲ್ಲೇ 5 ಶತಕಗಳ ಸಹಿತ 5,872 ರನ್‌ಗಳನ್ನು ಪಡೆದಿದ್ದಾರೆ.

-ಭಾರತ ಟೆಸ್ಟ್ ತಂಡವನ್ನು ಯಶಸ್ಸಿನ ಪಥದಲ್ಲಿ ನಡೆಯುವಂತೆ ಮಾಡಿರುವ ಕೊಹ್ಲಿ, 33 ಪಂದ್ಯಗಳಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತದ ಅತ್ಯಂತ ಯಶಸ್ವಿ ಟೆಸ್ಟ್‌ ನಾಯಕ ಎನಿಸಿಕೊಂಡಿದ್ದಾರೆ.

-ಒಡಿಐ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಕ್ರಮವಾಗಿ 62 ಮತ್ತು 22 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.

ಈ ಬಾರಿ ಡಬಲ್ ಗಿಫ್ಟ್​ ನಿರೀಕ್ಷೆ:
ಈ ಬಾರಿಯ ಬರ್ತ್ ಡೇ ಕೊಹ್ಲಿಗೆ ಎರಡು ಕಾರಣದಿಂದಾಗಿ ವಿಶೇಷವಾಗಿದೆ. ವೈಯಕ್ತಿಕವಾಗಿ ಅಪ್ಪನಾಗುತ್ತಿರುವ ಖುಷಿಯಿದ್ದರೆ, ಇನ್ನೊಂದೆಡೆ ವೃತ್ತಿ ಜೀವನದಲ್ಲೂ ಈ ಬಾರಿ ಆರ್​ಸಿಬಿ ಪ್ಲೇ ಆಫ್ ಹಂತಕ್ಕೆ ಬಂದಿದ್ದು, ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಇದೆಲ್ಲವೂ ಸಾಕಾರಗೊಂಡರೆ ಕೊಹ್ಲಿಗೆ ಪರ್ಫೆಕ್ಟ್ ಬರ್ತ್ ಡೇ ಗಿಫ್ಟ್ ಆಗಲಿದೆ. ಎನಿವೇ ವಿರಾಟ್ ಈ ವರ್ಷ ಆರ್​ಸಿಬಿಗೆ ಕಪ್ ತಂದುಕೊಡಲಿ ಅನ್ನೋದೇ ಕೋಟ್ಯಂತರ ಅಭಿಮಾನಿಗಳ ಆಶಯವಾಗಿದೆ. ಒನ್ಸ್ ಆಗೇನ್ ವಿಷ್ಯು ಹ್ಯಾಪಿ ಬರ್ತ್ ಡೇ ವಿರಾಟ್..
-ವಿನಾಯಕ್

ಇದನ್ನೂ ಓದಿ: ವಿರಾಟ್ ಗೆ 31ರ ಸಂಭ್ರಮ, ಹುಟ್ಟುಹಬ್ಬ ಆಚರಿಸಲು ಪತ್ನಿ ಜೊತೆ ಭೂತಾನ್ ಗೆ ಪಯಣ

Published On - 1:08 pm, Thu, 5 November 20