India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ

ಕ್ರಿಕೆಟ್ ಈಗ ಹೊಸ ಪದ್ಧತಿಯೊಂದಿಗೆ ಅಂದರೆ ಪಂದ್ಯ ಮತ್ತು ಸರಣಿಗಳು ನಡೆಯುವ ಸಂದರ್ಭದಲ್ಲಿ ಆಟಗಾರರು ಬಯೊ-ಬಬಲ್​ನಲ್ಲೇ ಇರಬೇಕಿರುವುದರಿಂದ ಅದು ಅವರನ್ನು ಮಾನಸಿಕವಾಗಿಯೂ ದಣಿಸುತ್ತಿದೆ ಎಂದು ರವಿ ಹೇಳಿದ್ದಾರೆ.

India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ
ಟೀಮ್ ಇಂಡಿಯಾ ಹೆಡ್ ಕೋಚ್ ರವಿ ಶಾಸ್ತ್ರೀ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2021 | 9:50 PM

ಇಂಡಿಯನ್ ಪ್ರಿಮೀಯರ್ ಲೀಗ್ 2020 ರಿಂದ ಪ್ರಾರಂಭಗೊಂಡ ಭಾರತದ ಕ್ರಿಕೆಟ್​ ಶೆಡ್ಯೂಲ್ 2021ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಸಕ್ತ ಮತ್ತು ಮುಂದಿನ ವರ್ಷದಲ್ಲಿ ಸೀನಿಯರ್ ರಾಷ್ಟ್ರೀಯ ತಂಡದ ಆಟಗಾರರಿಗೆ ಬಿಡುವೇ ಇಲ್ಲದ ಸ್ಥಿತಿ ಎದುರಾಗಿರುವುದರಿಂದ 2021ರ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿಯ ನಂತರ ಸೀನಿಯರ್ ಆಟಗಾರರಿಗೆ ಬ್ರೇಕ್ ಒದಗಿಸುವ ಪ್ರಸ್ತಾಪವನ್ನು ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರೀ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎದುರಿಟ್ಟಿದ್ದಾರೆ.

ಕ್ರಿಕೆಟ್ ಈಗ ಹೊಸ ಪದ್ಧತಿಯೊಂದಿಗೆ ಅಂದರೆ ಪಂದ್ಯ ಮತ್ತು ಸರಣಿಗಳು ನಡೆಯುವ ಸಂದರ್ಭದಲ್ಲಿ ಆಟಗಾರರು ಬಯೊ-ಬಬಲ್​ನಲ್ಲೇ ಇರಬೇಕಿರುವುದರಿಂದ ಅದು ಅವರನ್ನು ಮಾನಸಿಕವಾಗಿಯೂ ದಣಿಸುತ್ತಿದೆ ಎಂದು ರವಿ ಹೇಳಿದ್ದಾರೆ. ಯುಎಈನಲ್ಲಿ ಐಪಿಎಲ್ ಮತ್ತು ಆಸ್ಟ್ರೇಲಿಯಾದಲ್ಲಿ ಜೈವಿಕ ಸುರಕ್ಷಾ ನಿಯಮಗಳಿಗೆ ಬದ್ಧರಾಗಿದ್ದ ಭಾರತೀಯ ಆಟಗಾರರು ಈಗ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲೂ ಆ ಶಿಷ್ಟಾಚಾರಕ್ಕೊಳಗಾಗಿದ್ದಾರೆ.

ಎರಡು ಸರಣಿಗಳ ಮಧ್ಯೆ ಕೇವಲ ಎರಡು ವಾರಗಳ ಬಿಡುವಿದ್ದು ಆ ಅವಧಿಯನ್ನೂ ಅವರು ಕ್ವಾರಂಟೈನ್​ನಲ್ಲಿ ಕಳೆಯಬೇಕಾಗಿದೆ. ಸರಣಿ ಶುರುವಾಗುತ್ತಿದ್ದಂತೆ ಅವರು ಮೈದಾನಕ್ಕಿಳಿಯಬೇಕು, ಕುಟುಂಬಗಳೊಂದಿಗೆ ಸಮಯ ವ್ಯಯಿಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ.

ಐಪಿಎಲ್ ಟ್ರೋಫಿ

ಸ್ಟಾರ್ ಸ್ಪೋರ್ಟ್ಸ್ ಚ್ಯಾನೆಲ್​ನೊಂದಿಗೆ ಮಾತಾಡಿದ ರವಿ, ಬಬಲ್​ನಿಂದ ಬಬಲ್ ಬದುಕು ಆಟಗಾರರನ್ನು ಹೈರಾಣಾಗಿಸುತ್ತಿದೆ. ಹಾಗಾಗಿ, 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿದಾಕ್ಷಣ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಕ್ರಿಕೆಟ್ ಅಡುವಾಗ ಯಾವೂದೋ ಇಂದು ಹಂತದಲ್ಲಿ ಬ್ರೇಕ್​ ಬೇಕೇಬೇಕು ಎಂದು ನಾನು ಬಲವಾಗಿಪ್ರತಿಪಾದಿಸುತ್ತೇನೆ. ಇಂಗ್ಲೆಂಡ್ ಸರಣಿಯ ನಂತರ ಅವರು ಐಪಿಎಲ್ ಆಡುತ್ತಾರೆ. ಐಪಿಎಲ್ ನಂತರ ಕನಿಷ್ಠ ಎರಡು ವಾರಗಳ ಬ್ರೆಕ್ ಅವರಿಗೆ ಖಂಡಿತವಾಗಿಯೂ ಬೇಕು. ಕೊವಿಡ್-19 ಪಿಡುಗಿಗೆ ಸಂಬಂಧಿಸಿದ ನಿಯಮಾವಳಿಗಳು ಆಟಗಾರರನ್ನು ಮಾನಸಿಕವಾಗಿ ತುಂಬಾ ದಣಿಸುತ್ತಿವೆ. ಅವರೂ ಮನುಷ್ಯರೇ ತಾನೆ?,’ ಎಂದು ರವಿ ಹೇಳಿದ್ದಾರೆ.

ಈಗಿರುವ ಶೆಡ್ಯೂಲ್ ಪ್ರಕಾರ ಇಂಗ್ಲೆಂಡ್ ಸರಣಿಯ ನಂತರ ಅಟಗಾರರು ಐಪಿಎಲ್​ನಲ್ಲಿ ಆಡಲು ತಯಾರಾಗಬೇಕಾಗುತ್ತದೆ. ಇಂಗ್ಲೆಂಡ್​ ವಿರುದ್ಧದ ಸರಣಿಯ ಕೊನೆಯ ಪಂದ್ಯ (ಒಡಿಐ) ಮಾರ್ಚ್ 28ರಂದು ನಡೆಯಲಿದೆ.

ಈಗಾಗಲೇ ವರದಿಯಾಗಿರುವ ಪ್ರಕಾರ, ಈ ಸಾಲಿನ ಐಪಿಎಲ್ ಏಪ್ರಿಲ್ ಎರಡನೇ ವಾರದಿಂದ ಆರಂಭಗೊಂಡು ಮೇ ಆಂತ್ಯದವರೆಗೆ ನಡೆಯಲಿದೆ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಈ ವರ್ಷ ನಡೆಯುಲಿರುವ ಕೆಲವು ದೊಡ್ಡ ಟೂರ್ನಿಗಳಲ್ಲಿ ಭಾರತ ಭಾಗವಹಿಸಬೇಕಿದೆ. ಇಂಥ ಬಿಡುವಿಲ್ಲದ ಶೆಡ್ಯೂಲ್​ನಲ್ಲಿ ಆಟಗಾರರಿಗೆ ಬ್ರೇಕ್ ನೀಡುವುದು ಬಿಸಿಸಿಐ ಎದುರಿರುವ ಅತಿದೊಡ್ಡ ಸವಾಲಾಗಿದೆ.

India Cricket Schedule 2021-23: ಭಾರತೀಯ ಸೀನಿಯರ್ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ ಪ್ರಕಟಿಸಿದ ಬಿಸಿಸಿಐ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ