ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ರಕ್ಷಣಾತ್ಮಕ ಧೋರಣೆ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ರನ್ನು ಚಕಿತಗೊಳಿಸಿದೆ. 241ರನ್ಗಳ ಮೊದಲ ಇನ್ನಿಂಗ್ಸ್ ಪಡೆದ ನಂತರ ಜೋ ರೋಟ್ ತಂಡ ಕ್ಷಿಪ್ರಗತಿಯಲ್ಲಿ ರನ್ ಗಳಿಸಿ ಬಾರತದ ಎದುರು ಒಂದು ದೊಡ್ಡ ಮೊತ್ತದ ಸವಾಲನ್ನಿಟ್ಟು ಡಿಕ್ಲೇರ್ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಹಾಗೆ ಮಾಡದೆ ರಕ್ಷಣಾತ್ಮಕ ಧೋರಣೆ ಅನುಸರಿಸಿದರು. ಅವರ ಮೂಲ ಉದ್ದೇಶ ಪಂದ್ಯವನ್ನು ಸೋಲಬಾರದು ಎನ್ನುವುದಾಗಿತ್ತು ಎಂದು ವಾರ್ನ್ ಹೇಳಿದ್ದಾರೆ.
ಪಂದ್ಯದ ನಾಲ್ಕನೇ ದಿನವಾಗಿದ್ದ ಸೋಮವಾರ ಭಾರತವನ್ನು 337 ರನ್ಗಳಿಗೆ ಔಟ್ ಮಾಡಿದ ಇಂಗ್ಲೆಂಡ್, ಫಾಲೋ ಆನ್ ಹೇರದೆ, ಎರಡನೆ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಲು ನಿರ್ಧರಿಸಿತು. ಇನ್ನಿಂಗ್ಸ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಪ್ರವಾಸಿಗರು ಒತ್ತಡಕ್ಕೆ ಸಿಲುಕಿ ರಕ್ಷಣಾತ್ಮಕ ಧೋರಣೆಯನ್ನು ಅನುಸರಿಸಿದರು ಅಂತ ವಾರ್ನ್ ಹೇಳಿದ್ದಾರೆ.
ಭಾರತದ ಬೌಲರ್ಗಳು ಸಹ ಉತ್ಕೃಷ್ಟಮಟ್ಟದ ಬೌಲಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡನ್ನು ಕೇವಲ 178 ರನ್ಗಳಿಗೆ ಆಲೌಟ್ ಮಾಡಿದರು.
ಗೆಲ್ಲಲು 420 ರನ್ ಗಳಿಸಬೇಕಿರುವ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದು ದಿನದಾಟ ಮುಗಿದಾಗ ಓಪನರ್ ರೋಹಿತ್ ಶರ್ಮ ಅವರ ವಿಕೆಟ್ ಕಳೆದುಕೊಂಡು 39ರನ್ ಗಳಿಸಿದೆ.
ಇಂಗ್ಲೆಂಡ್ ತಂಡದ ಅಪ್ರೋಚ್ ವಾರ್ನ್ರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಅವರು ಹೇಳುವಂತೆ ಲೀಡ್ 400 ರನ್ ತಲುಪಿದಾಕ್ಷಣ ರೂಟ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಬೇಕಿತ್ತು. ಸರಣಿ ಟ್ವೀಟ್ಗಳ ಮೂಲಕ ಅವರು ಭಾರತದ ವಿರುದ್ಧ ಆಸ್ಟ್ರೇಲಿಯಾ ಅನುಸರಿಸಿದ ರಕ್ಷಣಾತ್ಮಕ ಧೋರಣೆಯನ್ನೇ ಇಂಗ್ಲೆಂಡ್ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಈ ಟೆಸ್ಟ್ ಗೆಲ್ಲಲು ನಮಗೆಷ್ಟು ರನ್ಗಳ ಲೀಡಿನ ಅವಶ್ಯಕತೆಯಿದೆ ಮತ್ತು ಮತ್ತು ಎಷ್ಟು ಓವರ್ಗಳಲ್ಲಿ ಇಂಡಿಯನ್ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಬಹುದು ಅಂತ ಲೆಕ್ಕಾಚಾರ ಮಾಡುವ ಬದಲು, ಇಂಗ್ಲೆಂಡ್ ತಂಡ ಈ ಟೆಸ್ಟ್ ಸೋಲಬಾರದೆಂಬ ಮನಸ್ಥಿತಿಯೊಂದಿಗೆ ಆಡುತ್ತಿದೆ. ನಾಲ್ಕನೇ ದಿನ ಸುದೀರ್ಘ ಅವಧಿಯವರೆಗೆ ಬ್ಯಾಟ್ ಮಾಡಿದ್ದು ಅವರ ಬೌಲರ್ಗಳ ಮೇಲೆ ಒತ್ತಡವನ್ನು ಹೇರಲಿದೆ ಎಂದು ಅವರು ಹೇಳಿದ್ದಾರೆ.
England’s mindset is let’s not lose this test match – rather than, what’s the best way to win this test match and how many overs could we need ! This batting on decision is now putting a lot of pressure on England’s bowlers and particularly their spinners !
— Shane Warne (@ShaneWarne) February 8, 2021
ಹಾಗೆಯೇ, ಇಂಗ್ಲೆಂಡ್ ಮಾಜಿ ಆಟಗಾರ ಮೈಕೆಲ್ ವಾನ್ ಅವರ ಟ್ವೀಟೊಂದಕ್ಕೆ ಉತ್ತರಿಸಿರುವ ವಾರ್ನ್, ಆಸ್ಟ್ರೇಲಿಯಾದಲ್ಲಿ ಇಂಡಿಯಾ ಪರಾಕ್ರಮಶಾಲಿ ಮತ್ತು ದಿಟ್ಟತನದಿಂದ ಆಡಿತು. ಅವರು ತೋರಿದ ಪದರ್ಶನ ಅದ್ಭುತವಾಗಿತ್ತು. ಆಸ್ಟ್ರೇಲಿಯಾ ಪುಕ್ಕಲುತನ ಮತ್ತು ಎಚ್ಚರಿಕೆಯ ಆಟವಾಡಿ ಸರಣಿ ಸೋತಿತು. ಇಂಗ್ಲೆಂಡ್ ಸಹ ಆಸ್ಟ್ರೇಲಿಯಾದಂತೆ ಎಚ್ಚರಿಕೆ ಕ್ರಿಕೆಟ್ ಆಡುತ್ತಿದೆ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
.@MichaelVaughan In Australia India played courageous and brave cricket – was awesome to watch ! Australia played timid and cautious cricket & Australia lost the series. England are playing cautious and timid cricket………..
— Shane Warne (@ShaneWarne) February 8, 2021
ಆದರೆ, ವಾಸ್ತವದಲ್ಲಿ ರೂಟ್ ಆಕ್ರಮಣಕಾರಿ ಆಟವಾಡಿ 32 ಎಸೆತಗಳಲ್ಲಿ 40 ರನ್ ಬಾರಿಸಿದರು. ಚೆನೈನ ಈ ಪಿಚ್ನಲ್ಲಿ ಚೆಂಡು ಬಹಳ ಸ್ಪಿನ್ ಆಗುತ್ತಿರುವುದರಿಂದ ಕೊನೆಯ ದಿನದ 90 ಓವರ್ಗಳಲ್ಲಿ ಭಾರತದ ಬ್ಯಾಟ್ಸ್ಮನ್ಗಳನ್ನು ಔಟ್ಮಾಡಬಹುದೆಂದು ಅವರು ಭಾವಿಸಿರಬಹುದು.
ಇಂಗ್ಲೆಂಡ್ ಸ್ಪಿನ್ನರ್ಗಳು-ಜಾಕ್ ಲೀಚ್ ಮತ್ತು ಡಾಮ್ ಬೆಸ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಪ್ರಮುಖ ಬ್ಯಾಟ್ಸ್ಮನ್ಗಳಿಗೆ ತೊಂದರೆ ನೀಡಿರುವುದರಿಂದ ಅವರಿಂದ ಮತ್ತೇ ಅದೇ ತೆರನಾದ ಪ್ರದರ್ಶನವನ್ನು ರೂಟ್ ನಿರೀಕ್ಷಿಸುತ್ತಿರಬಹುದು.
India vs England Test Series: ಚೆನೈ ಟೆಸ್ಟ್ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್
Published On - 10:23 pm, Mon, 8 February 21