AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunil Chhetri: ನಿವೃತ್ತಿ ಘೋಷಿಸಿದ ಫುಟ್​ಬಾಲ್ ಲೆಜೆಂಡ್ ಸುನಿಲ್ ಛೆಟ್ರಿ

Sunil Chhetri: ಭಾರತದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ತಿಳಿಸಿದ್ದಾರೆ.

Sunil Chhetri: ನಿವೃತ್ತಿ ಘೋಷಿಸಿದ ಫುಟ್​ಬಾಲ್ ಲೆಜೆಂಡ್ ಸುನಿಲ್ ಛೆಟ್ರಿ
Sunil Chhetri
ಝಾಹಿರ್ ಯೂಸುಫ್
|

Updated on:May 16, 2024 | 10:43 AM

Share

ಭಾರತೀಯ ಫುಟ್​ಬಾಲ್ ದಂತಕಥೆ ಸುನಿಲ್ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಇಂಟರ್​ನ್ಯಾಷನಲ್​ ಫುಟ್​ಬಾಲ್​ಗೆ ವಿದಾಯ ಹೇಳುವುದಾಗಿ ಛೆಟ್ರಿ ತಿಳಿಸಿದ್ದಾರೆ. 39 ವರ್ಷ ವಯಸ್ಸಿನ ಸುನಿಲ್, ಭಾರತದ ಪರ ಈವರೆಗೆ 150 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ನಾನು ಎಂದಿಗೂ ಮರೆಯದ ಮತ್ತು ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯದ ದಿನ. ಅದು ನಂಬಲಸಾಧ್ಯವಾಗಿತ್ತು. ಅಂದು ಬೆಳಿಗ್ಗೆ ರಾಷ್ಟ್ರೀಯ ತಂಡದ ಕೋಚ್ ಸುಖಿ ಸರ್, ನನ್ನ ಬಳಿಗೆ ಬಂದು ನೀವು ಆಡುತ್ತೀರಿ ಎಂದರು. ಆ ಅನುಭವವನ್ನು ಹೇಳಲಾಸಾಧ್ಯ. ನಾನು ನನ್ನಜೆರ್ಸಿಯನ್ನು ತೆಗೆದುಕೊಂಡೆ. ಅಲ್ಲದೆ ಅದರ ಮೇಲೆ ಸ್ವಲ್ಪ ಸುಗಂಧ ದ್ರವ್ಯವನ್ನು ಸಿಂಪಡಿಸಿದೆ. ಏಕೆ ಎಂಬುದು ನಿಜಕ್ಕೂ ನನಗೆ ತಿಳಿದಿಲ್ಲ.

ಆ ದಿನ, ನನ್ನ ಚೊಚ್ಚಲ ಪಂದ್ಯದಲ್ಲಿ ನನ್ನ ಮೊದಲ ಗೋಲು… ಬಹುಶಃ ನಾನು ಎಂದಿಗೂ ಮರೆಯುವುದಿಲ್ಲ. ಅಲ್ಲದೆ ನನ್ನ ರಾಷ್ಟ್ರೀಯ ತಂಡದ ಪ್ರಯಾಣದ ಅತ್ಯುತ್ತಮ ದಿನಗಳನ್ನು ಸಹ ಮರೆಯಲಾರೆ ಎಂದು ಸುನಿಲ್ ಛೆಟ್ರಿ ಹೇಳಿದ್ದಾರೆ.

ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ. ನಾನು ದೇಶಕ್ಕಾಗಿ ಹಲವು ಪಂದ್ಯಗಳನ್ನಾಡಿದ್ದೇನೆ. ಕೆಲವೊಮ್ಮೆ ಉತ್ತಮ ಅಥವಾ ಕೆಟ್ಟ ಫಲಿತಾಂಶ ನೋಡಿದ್ದೇನೆ. ಇದಾಗ್ಯೂ ಕಳೆದ ಒಂದೂವರೆ, ಎರಡು ತಿಂಗಳು ನನಗೆ ತುಂಬಾ ವಿಚಿತ್ರವಾಗಿತ್ತು.

ಹೀಗಾಗಿಯೇ ನಾನು ಇದುವೇ ನನ್ನ ಕೊನೆಯ ಆಟ ಎಂದು ಭಾವಿಸಲು ಪ್ರಾರಂಭಿಸಿದೆ. ಇದು ತುಂಬಾ ವಿಚಿತ್ರವಾಗಿತ್ತು. ಈ ತರಬೇತುದಾರ, ಆ ತರಬೇತುದಾರ, ಆ ತಂಡ, ಆ ಸದಸ್ಯ, ಆ ಮೈದಾನ, ಆ ವಿದೇಶಿ ಪಂದ್ಯ, ಈ ಉತ್ತಮ ಆಟ, ಆ ಕೆಟ್ಟ ಆಟ, ನನ್ನ ವೈಯಕ್ತಿಕ ಪ್ರದರ್ಶನಗಳು, ಎಲ್ಲವೂ ಕಣ್ಮುಂದೆ ಬಂದವು. ಎಲ್ಲವನ್ನೂ ಯೋಚಿಸಲು ಪ್ರಾರಂಭಿಸಿದೆ. ಹೀಗಾಗಿ ನಿವೃತ್ತಿಗೆ ಇದುವೇ ಸಕಾಲ ಎಂದು ಭಾವಿಸಿದೆ.

ಈ ಬಗ್ಗೆ ತಂದೆ-ತಾಯಿಗೆ, ಹೆಂಡತಿ ಮತ್ತು ಕುಟುಂಬದವರಿಗೆ ತಿಳಿಸಿದೆ. ಇದನ್ನು ಕೇಳಿ ತಾಯಿ ಮತ್ತು ನನ್ನ ಹೆಂಡತಿ ಅಳಲು ಪ್ರಾರಂಭಿಸಿದರು. ಅಂತಿಮವಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ನಿರ್ಧಾರದಿಂದ ದುಃಖಿತನಾಗಿದ್ದೀರಾ? ಎಂದು ಕೇಳಿದ್ರೆ ಖಂಡಿತವಾಗಿಯೂ ಬೇಸರವಿದೆ. ಏಕೆಂದರೆ 19 ವರ್ಷಗಳ ಆಟ, ಎಲ್ಲವೂ ಮುಗಿಯಲಿದೆ.

ಆದರೆ ಅದಕ್ಕೂ ಮುನ್ನ ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ. ಕುವೈತ್ ವಿರುದ್ಧದ ಪಂದ್ಯದ ಈ ಪಂದ್ಯದೊಂದಿಗೆ ವಿದಾಯ ಹೇಳುತ್ತಿದ್ದೇನೆ.

ಇದನ್ನೂ ಓದಿ: 90 ಅಂತರರಾಷ್ಟ್ರೀಯ ಗೋಲ್: ಸುನಿಲ್ ಛೆಟ್ರಿ ವಿಶೇಷ ಸಾಧನೆ

ನಿಜ ಹೇಳಬೇಕೆಂದರೆ, ನನ್ನ ದೇಶದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ತಿಳಿಸಿದ್ದಾರೆ.

Published On - 10:17 am, Thu, 16 May 24

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್