ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಿಚ್‌ನ ಗುಣಮಟ್ಟವನ್ನು ಪ್ರಶ್ನಿಸಿದವರನ್ನು ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ಮೈಕೆಲ್ ವಾಘನ್ ಮತ್ತು ಮ್ಯಾಟ್ ಪ್ರಿಯರ್ ಅವರು ಚೆನ್ನೈ ಪಿಚ್ ಅನ್ನು ‘ರ್ಯಾಂಕ್ ಟರ್ನರ್’ ಮತ್ತು ‘ಡಸ್ಟ್‌ಬೌಲ್’ ಎಂದು ತೀವ್ರವಾಗಿ ಟೀಕಿಸಿದ್ದರು.
ಪಂದ್ಯದ ಮೊದಲ ದಿನದಿಂದಲೂ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗಿದ್ದೆ ಇವರ ಟೀಕೆಗೆ ಕಾರಣವಾಗಿದೆ. ರೋಹಿತ್ ಶರ್ಮಾ ಅವರ 161 ರನ್‌ಗಳ ಭರ್ಜರಿ ಆಟದ ನೆರವಿನಿಂದಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 329 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಭಾರತೀಯ ಸ್ಪಿನ್ನರ್‌ಗಳು ಬಹುಬೇಗನೇ ಆಲ್ಔಟ್ ಮಾಡುವಲ್ಲಿ ಯಶಸ್ವಿಯಾದರು.
ಭಾರತೀಯ ಪಿಚ್‌ಗಳೇ ಇತರರ ಕೆಂಗಣ್ಣೆಗೆ ಗುರಿಯಾಗುತ್ತವೆ..
ಚೆನ್ನೈ ಪಿಚ್ ಬಗ್ಗೆ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡ ಗಾವಸ್ಕರ್, ಪಿಚ್ ಮೊದಲನೇ ದಿನದಿಂದಲೂ ಟರ್ನ್ ಪಡೆಯಲೂ ಪ್ರಾರಂಭಿಸಿದರೆ ಮೊದಲು ಭಾರತೀಯ ಪಿಚ್‌ಗಳೆ ಇತರರ ಕೆಂಗಣ್ಣಿಗೆ ಗುರಿಯಾಗುತ್ತವೆ. ಅದೇ ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಪಿಚ್‌ಗಳನ್ನು ಸಿದ್ಧಪಡಿಸುವಾಗ ಯಾರ ಕಣ್ಣಿಗೂ ಸಹ ಇದು ಕಾಣಿಸುವುದಿಲ್ಲ ಎಂದರು.
ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಪಿಚ್ಗಳು ಇವೆ. ಆಸ್ಟ್ರೇಲಿಯಾ ತಂಡವನ್ನು 46 ರನ್ಗಳಿಗೆ ಆಲ್ಔಟ್ ಮಾಡಿದಾಗ ಯಾರೂ ಸಹ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಯಾವಾಗಲೂ ಭಾರತದ ಪಿಚ್‌ಗಳ ಬಗ್ಗೆ ಮತ್ತು ಚೆಂಡು ತಿರುಗಲು ಪ್ರಾರಂಭಿಸಿದಾಗ, ಜನರು ಈ ರೀತಿಯ ಟೀಕೆಗಳನ್ನು ಮಾಡುತ್ತಾರೆ ಎಂದು ಖಾರವಾಗಿಯೇ ಉತ್ತರಿಸಿದರು.
ಇದು ಸವಾಲಿನ ಪಿಚ್, ಆಡಲಾಗದಂತಹ ಪಿಚ್ ಏನಲ್ಲಾ. ಕ್ರಿಕೆಟ್ನಲ್ಲಿ ಇಂಥದ್ದೆಲ್ಲಾ ಇರಬೇಕು. ಮೊದಲ ಟೆಸ್ಟ್ನ ಮೊದಲ ಎರಡು ದಿನಗಳಲ್ಲಿ ಏನೂ ಆಗದಿದ್ದಾಗ ಜನರು ಹೇಳುತ್ತಿದ್ದರು, ಇದು ನೀರಸ, ಏನೂ ಆಗುತ್ತಿಲ್ಲ. ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಎಂದು. ಆದ್ದರಿಂದ, ಹೇಳುವ ವಿಷಯಗಳ ನಡುವೆ ಸ್ವಲ್ಪ ಸಮತೋಲನ ಇರಬೇಕು. ನೀವು ಎಲ್ಲ ಸಮಯದಲ್ಲೂ ದೂರಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ನಾಯಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
It didn’t do anywhere near as much for 2 sessions … Spun but not like what it’s doing now … India would have drawn the first Test if they had batted anything like in the 1st innings … This isn’t a good Test match pitch … https://t.co/HhK6dYLiHm
— Michael Vaughan (@MichaelVaughan) February 14, 2021
I have no problem at all with a pitch offering this much spin (hardly a surprise naturally). We prepare green pitches to suit our bowlers at home when deemed necessary so it’s fair game. We should be taking notes on how to excel from @ImRo45 @RishabhPant17 and @ashwinravi99
— Graeme Swann (@Swannyg66) February 14, 2021