AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2021: ಕ್ರಿಕೆಟಿಗರಿಗೆ ನೀಡುವ ಬೆಂಬಲವನ್ನು ನಮ್ಮ ಒಲಿಂಪಿಕ್ಸ್ ಕ್ರೀಡಾಪಟುಗಳಿಗೂ ನೀಡಿ: ಕ್ರೀಡಾ ಸಚಿವ ಕಿರೆನ್ ರಿಜಿಜು

Tokyo Olympics 2021: ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಆಟಗಾರರನ್ನು ಎಲ್ಲರೂ ಕ್ರಿಕೆಟಿಗರ ಮೇಲೆ ಹೇಗೆ ಅಭಿಮಾನ ತೋರಿಸುತ್ತಾರೋ ಅದೇ ರೀತಿ ಗೌರವಿಸಬೇಕು ಎಂದು ಕ್ರೀಡಾ ಸಚಿವರು ಮನವಿ ಮಾಡಿದ್ದಾರೆ.

Tokyo Olympics 2021: ಕ್ರಿಕೆಟಿಗರಿಗೆ ನೀಡುವ ಬೆಂಬಲವನ್ನು ನಮ್ಮ ಒಲಿಂಪಿಕ್ಸ್ ಕ್ರೀಡಾಪಟುಗಳಿಗೂ ನೀಡಿ: ಕ್ರೀಡಾ ಸಚಿವ ಕಿರೆನ್ ರಿಜಿಜು
ಕ್ರೀಡಾ ಸಚಿವ ಕಿರೆನ್ ರಿಜಿಜು
ಪೃಥ್ವಿಶಂಕರ
|

Updated on: Jun 26, 2021 | 8:44 PM

Share

ಭಾರತೀಯ ಕ್ರೀಡಾ ಸಚಿವ ಕಿರೆನ್ ರಿಜಿಜು ದೇಶದ ಜನರಿಗೆ ಮಹತ್ವದ ಮನವಿ ಮಾಡಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಆಟಗಾರರನ್ನು ಎಲ್ಲರೂ ಕ್ರಿಕೆಟಿಗರ ಮೇಲೆ ಹೇಗೆ ಅಭಿಮಾನ ತೋರಿಸುತ್ತಾರೋ ಅದೇ ರೀತಿ ಗೌರವಿಸಬೇಕು ಎಂದು ಕ್ರೀಡಾ ಸಚಿವರು ಮನವಿ ಮಾಡಿದ್ದಾರೆ. ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಸಿಐಐ ಸ್ಪೋರ್ಟ್ಸ್ಕಾಮ್ ಇಂಡಸ್ಟ್ರಿ ಕಾನ್ಫೆಡರೇಶನ್‌ನಲ್ಲಿ ಮಾತನಾಡಿದ ರಿಜಿಜು, ಒಲಿಂಪಿಕ್ ಆಂದೋಲನ ಮತ್ತು ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿರಬೇಕೆಂದು ನಾನು ಬಯಸುತ್ತೇನೆ. ಕ್ರೀಡೆ ದೇಶದ ದೊಡ್ಡ ಮೃದು ಶಕ್ತಿಯಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ತುಕಡಿಯಿಂದ ಉತ್ತಮ ಸಾಧನೆ ತೋರಬಹುದೆಂದು ಆಶಿಸಿರುವ ಕ್ರೀಡಾ ಸಚಿವ ಕಿರೆನ್ ರಿಜಿಜು, ದೇಶದ ಕ್ರಿಕೆಟಿಗರಂತೆ ಒಲಿಂಪಿಯನ್‌ಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಬೇಕು ಎಂದಿದ್ದಾರೆ

ಸಮ್ಮೇಳನದಲ್ಲಿ ಅನೇಕ ಅನುಭವಿಗಳು ಭಾಗವಹಿಸಿದ್ದರು ಸಮ್ಮೇಳನದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ತರಬೇತುದಾರ ಪುಲ್ಲೆಲಾ ಗೋಪಿಚಂದ್, ತಂಡದ ಪ್ರತಿಯೊಬ್ಬ ಸದಸ್ಯರು ತಮ್ಮ ಅತ್ಯುತ್ತಮ ರೂಪದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಪದಕಗಳನ್ನು ಗೆಲ್ಲಬಹುದು ಎಂದು ಇಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಅವರು ಪದಕಗಳನ್ನು ತರಲು ಅಥವಾ ಪ್ರದರ್ಶನ ನೀಡಲು ವಿಫಲವಾದರೆ, ಅವರು ತುಂಬಾ ನಿರಾಶೆಗೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ.

ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಉತ್ತಮ ಪ್ರದರ್ಶನ ನೀಡಲಿವೆ ಎಂದು ಮಾಜಿ ಹಾಕಿ ಆಟಗಾರ್ತಿ ಎಂ.ಎ.ಸೌಮ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ಹಾಕಿಯಲ್ಲಿ ವಿಶ್ವದ ಅತ್ಯುತ್ತಮ ತರಬೇತುದಾರರನ್ನು ಹೊಂದಿದ್ದೇವೆ ಮತ್ತು ಪ್ರಸ್ತುತ ನಮ್ಮ ಪುರುಷರ ಮತ್ತು ಮಹಿಳಾ ತಂಡದ ನಾಯಕತ್ವ ಸರಿಯಾದ ಕೈಯಲ್ಲಿದೆ ಎಂದು ಸೌಮ್ಯಾ ಹೇಳಿದರು. ಅಧಿವೇಶನದಲ್ಲಿ 2016 ರಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ದೀಪಾ ಮಲಿಕ್ ಮತ್ತು 2012 ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಇತರರು ಭಾಗವಹಿಸಿದ್ದರು.

ಭಾರತವನ್ನು ಕ್ರೀಡೆಯಲ್ಲಿ ಸೂಪರ್ ಪವರ್ ಮಾಡಲು ಕಿರೆನ್ ರಿಜಿಜು ಪ್ರಯತ್ನ ಕಿರೆನ್ ರಿಜಿಜು ಈಗಾಗಲೇ ಭಾರತವನ್ನು ಕ್ರೀಡಾ ಮಹಾಶಕ್ತಿಯನ್ನಾಗಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಜುಲೈ 23 ರಿಂದ ಪ್ರಾರಂಭವಾಗುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಒಂದು ತಿಂಗಳ ಮೊದಲು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಅವರು, ಕ್ರಿಕೆಟ್ ಹೊರತುಪಡಿಸಿ ಭಾರತವು ಯಾವುದೇ ಕ್ರೀಡೆಯಲ್ಲಿ ಮಹಾಶಕ್ತಿಯಾಗಿರಲಿಲ್ಲ ಮತ್ತು ಐದು ದಶಕಗಳ ಹಿಂದೆ ಹಾಕಿ ಆ ಸ್ಥಾನದಲ್ಲಿತ್ತು. ನಮ್ಮದು ಅಷ್ಟು ದೊಡ್ಡ ದೇಶ ಮತ್ತು ಇಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಆದರೆ ಒಲಿಂಪಿಕ್ಸ್‌ನಲ್ಲಿ ನಮಗೆ ಅನೇಕ ಪದಕಗಳು ಸಿಗುತ್ತಿಲ್ಲ.

ಟೋಕಿಯೊ ಒಲಿಂಪಿಕ್ಸ್‌ನ ಸಿದ್ಧತೆಗಳ ಬಗ್ಗೆ ನನಗೆ ತೃಪ್ತಿ ಇದೆ ಮತ್ತು ಆಟಗಾರರಿಗೆ ತಯಾರಿಗಾಗಿ ಉತ್ತಮ ಅವಕಾಶಗಳನ್ನು ನೀಡಲಾಗಿದೆ. ನಾಲ್ಕು ವರ್ಷಗಳಲ್ಲಿ ವಾರ್ಷಿಕ ಅಭ್ಯಾಸ ಮತ್ತು ಸ್ಪರ್ಧೆಯ ಕ್ಯಾಲೆಂಡರ್ (ಎಸಿಟಿಟಿಸಿ) ಅಡಿಯಲ್ಲಿ 1100 ಕೋಟಿ ಖರ್ಚು ಮಾಡಲಾಗಿದೆ. ನಾವು ಪೂರ್ಣ ಸಿದ್ಧತೆಯೊಂದಿಗೆ ದೊಡ್ಡ ತಂಡವನ್ನು ಕಳುಹಿಸುತ್ತಿದ್ದೇವೆ ಮತ್ತು ಪ್ರದರ್ಶನವು ಎಂದೆಂದಿಗೂ ಉತ್ತಮವಾಗಿರುತ್ತದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ