IPL ಪ್ಲೇ ಆಫ್​ಗೆ ಎಂಟ್ರಿ ಕೊಡಲು RCBಗೆ ಇರುವ ಚಾನ್ಸ್ ಎಷ್ಟು? ದೊಡ್ಡ ಗಣೇಶ್ ವಿಶ್ಲೇಷಣೆ..

|

Updated on: Nov 01, 2020 | 4:02 PM

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಈಗ ಭಾರೀ ಮಹತ್ವದ ಘಟ್ಟ ತಲುಪಿದ್ದು, ಪ್ಲೇ ಆಫ್‌ಗಾಗಿ ಅಗ್ರ ತಂಡಗಳು ಭಾರೀ ಕಸರತ್ತು ನಡೆಸಿವೆ. ಕೊನೆಯ ಪಂದ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಕೆಲ ತಂಡಗಳು ಮುಗ್ಗರಿಸಿದ ಪರಿಣಾಮ, ಟೂರ್ನಿಯ ಆರಂಭದಲ್ಲಿ ಸೋಲು ಕಂಡಿದ್ದ ತಂಡಗಳು ಈಗ ಪ್ಲೇ ಆಫ್‌ ಕನಸು ಕಾಣುತ್ತಿವೆ. ಹೀಗಾಗಿ ಐಪಿಎಲ್‌ನಲ್ಲಿ ಈಗ ಭಾರೀ ಲೆಕ್ಕಾಚಾರ ಶುರವಾಗಿದೆ. ಮುಂಬೈ ವಿರುದ್ಧ ಡೆಲ್ಲಿ ಸೋತ್ರೆ, ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋತಿದ್ದು, ಐಪಿಎಲ್ ಪಾಯಿಂಟ್ ಟೇಬಲ್ ಲೆಕ್ಕಾಚಾರವನ್ನೇ ಉಲ್ಟಾ ಪಲ್ಟಾ ಮಾಡಿದೆ. ಹಾಗಾದ್ರೂ ಹೈದರಾಬಾದ್ […]

IPL ಪ್ಲೇ ಆಫ್​ಗೆ ಎಂಟ್ರಿ ಕೊಡಲು RCBಗೆ ಇರುವ ಚಾನ್ಸ್ ಎಷ್ಟು? ದೊಡ್ಡ ಗಣೇಶ್ ವಿಶ್ಲೇಷಣೆ..
Follow us on

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಈಗ ಭಾರೀ ಮಹತ್ವದ ಘಟ್ಟ ತಲುಪಿದ್ದು, ಪ್ಲೇ ಆಫ್‌ಗಾಗಿ ಅಗ್ರ ತಂಡಗಳು ಭಾರೀ ಕಸರತ್ತು ನಡೆಸಿವೆ. ಕೊನೆಯ ಪಂದ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಕೆಲ ತಂಡಗಳು ಮುಗ್ಗರಿಸಿದ ಪರಿಣಾಮ, ಟೂರ್ನಿಯ ಆರಂಭದಲ್ಲಿ ಸೋಲು ಕಂಡಿದ್ದ ತಂಡಗಳು ಈಗ ಪ್ಲೇ ಆಫ್‌ ಕನಸು ಕಾಣುತ್ತಿವೆ. ಹೀಗಾಗಿ ಐಪಿಎಲ್‌ನಲ್ಲಿ ಈಗ ಭಾರೀ ಲೆಕ್ಕಾಚಾರ ಶುರವಾಗಿದೆ.

ಮುಂಬೈ ವಿರುದ್ಧ ಡೆಲ್ಲಿ ಸೋತ್ರೆ, ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋತಿದ್ದು, ಐಪಿಎಲ್ ಪಾಯಿಂಟ್ ಟೇಬಲ್ ಲೆಕ್ಕಾಚಾರವನ್ನೇ ಉಲ್ಟಾ ಪಲ್ಟಾ ಮಾಡಿದೆ. ಹಾಗಾದ್ರೂ ಹೈದರಾಬಾದ್ ವಿರುದ್ಧ ಮುಗ್ಗರಿಸಿರೋ ಆರ್‌ಸಿಬಿ ಪ್ಲೇ ಆಫ್ ಎಂಟ್ರಿಗೆ ಮಾರ್ಗಗಳಿವೆ.

ಡೆಲ್ಲಿ, ಆರ್‌ಸಿಬಿ ಪ್ಲೇ ಆಫ್‌ಗೆ ಬೇಕು ಇನ್ನೊಂದೇ ಗೆಲುವು!
ಸದ್ಯ ಐಪಿಎಲ್ ಪಾಯಿಂಟ್ ಟೇಬಲ್ನಲ್ಲಿ 14 ಪಾಯಿಂಟ್ಗಳನ್ನ ಹೊಂದಿರೋ ಆರ್‌ಸಿಬಿ ಮತ್ತು ಡೆಲ್ಲಿ ಪ್ಲೇ ಆಫ್ ಎಂಟ್ರಿಗೆ ಇನ್ನೊಂದೇ ಪಂದ್ಯ ಬಾಕಿಯಿದ್ದು, ಆ ಪಂದ್ಯದಲ್ಲಿ ಗೆಲ್ಲಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಳೆ ಇದೇ ಡೆಲ್ಲಿ ಮತ್ತು ಆರ್‌ಸಿಬಿ ನಡುವೆ ಪ್ಲೇ ಆಫ್ ಹಣಾಹಣಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಯಾರು ಗೆಲ್ತಾರೋ ಅವರು ಪ್ಲೇ ಆಫ್‌ಗೆ 2ನೇ ತಂಡವಾಗಿ ಎಂಟ್ರಿ ಕೊಡಲಿದ್ದಾರೆ.

ಡೆಲ್ಲಿ ವಿರುದ್ಧ ಸೋತ್ರೆ ಆರ್‌ಸಿಬಿ ಮುಂದಿರೋ ಮಾರ್ಗವೇನು?
ಒಂದು ವೇಳೆ ಬ್ಯಾಡ್ ಲಕ್ ಆಗಿ ಡೆಲ್ಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಸೋತ್ರೂ, ಆರ್‌ಸಿಬಿ ಪ್ಲೇ ಆಫ್ ಹಾದಿ ಅಂತ್ಯವಾಗೋದಿಲ್ಲ. ಯಾಕಂದ್ರೆ ಪಂಜಾಬ್ ಚೆನ್ನೈ ಮೇಲೆ, ಹೈದರಾಬಾದ್ ಮುಂಬೈ ಮೇಲೆ ಸೋತ್ರೆ, ಡೆಲ್ಲಿ ಮತ್ತು ಆರ್‌ಸಿಬಿ ಎರಡೂ ಪ್ಲೇ ಆಫ್‌ಗೆ ಎಂಟ್ರಿ ಕೊಡೋಕೆ ಅವಕಾಶವಿದೆ.

ಹೈದ್ರಾಬಾದ್, ಪಂಜಾಬ್ ಗೆದ್ರೆ ಆರ್‌ಸಿಬಿ ಗೆಲ್ಲಲೇಬೇಕು!
ಸದ್ಯ 12 ಪಾಯಿಂಟ್ ಹೊಂದಿರೋ ಪಂಜಾಬ್ ಮತ್ತು ಹೈದರಾಬಾದ್ ಗೆದ್ರೆ, ಆಗ ಆರ್‌ಸಿಬಿ ಡೆಲ್ಲಿ ವಿರುದ್ಧ ಗೆಲ್ಲಲೇಬೇಕು. ಇಲ್ಲಾ ಅಂದ್ರೆ ಆರ್‌ಸಿಬಿಯಷ್ಟೇ ಪಾಯಿಂಟ್ ಸಂಪಾದಿಸಿರೋ ಪಂಜಾಬ್ ಮತ್ತು ಹೈದರಾಬಾದ್ ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸ್ತಾರೆ.

ಕೊಲ್ಕತ್ತಾ- ರಾಜಸ್ಥಾನ್, ಆರ್‌ಸಿಬಿಗೆ ಕಟಂಕವಾಗಬಾರದು!
ಇಂದು ನಡೆಯೋ ಕೊಲ್ಕತ್ತಾ ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಯಾರೇ ಗೆದ್ರೂ 14 ಪಾಯಿಂಟ್ ಸಂಪಾದಿಸ್ತಾರೆ. ಆದ್ರೆ ನೆಟ್ ರನ್‌ ರೇಟ್‌ನಿಂದಾಗಿ ಆರ್‌ಸಿಬಿಯನ್ನ ಹಿಂದಿಕ್ಕಿಕ್ಕೋಕಾಗಲ್ಲ. ಹೀಗಾಗಿ ಆರ್‌ಸಿಬಿ ಡೆಲ್ಲಿ ವಿರುದ್ಧ ಸೋತ್ರೂ ಹೀನಾಯವಾಗಿ ಸೋಲದೇ ಪ್ಲಸ್ ರನ್ ರೇಟ್ ಕಾಪಾಡಿಕೊಂಡ್ರೆ, ಪ್ಲೇ ಆಫ್ ಪ್ರವೇಶಿಸೋದಕ್ಕೆ ಯಾವುದೇ ಆತಂಕವಿರೋದಿಲ್ಲ. ಹೀಗಾಗಿ ಆರ್‌ಸಿಬಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಪ್ಲೇಸ್ ಖಚಿತಪಡಿಸಿಕೊಳ್ಳಬೇಕು. ಇಲ್ಲಾ ಅಂದ್ರೆ ಬೇರೆಯವರ ಹೀನಾಯ ಸೋಲನ್ನ ಎದುರು ನೋಡೋ ಪರಿಸ್ಥಿತಿ ಎದುರಾಗಲಿದೆ.