ಮರಳುಗಾಡಿನ ಮಹಾಯುದ್ಧದಲ್ಲಿ ಆರ್ಸಿಬಿ ಸದ್ಯ ಪ್ಲೇ ಆಫ್ನ ಎರಡು ಅವಕಾಶಗಳನ್ನ ಕೈ ಚೆಲ್ಲಿದೆ. ಒಂದು ಮುಂಬೈ ವಿರುದ್ಧ.. ಮತ್ತೊಂದು ಹೈದರಾಬಾದ್ ವಿರುದ್ಧ.. ಎರಡೂ ಪಂದ್ಯಗಳಲ್ಲಿ ಸೋತು, ಸುಲಭವಾಗಿ ಪ್ಲೇ ಆಫ್ ಅವಕಾಶವನ್ನ ಕೈ ಚೆಲ್ಲಿದೆ. ಹೀಗಾಗಿ ಇಂದು ಆರ್ಸಿಬಿ ಪ್ಲೇ ಆಫ್ ಏರಲು ಡೆಲ್ಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸತತ 3 ಪಂದ್ಯಗಳಲ್ಲಿ ಸೋಲು.. ಇಂದು ಸಿಡಿದೇಳಬೇಕು ಆರ್ಸಿಬಿ! ಲೀಗ್ನ ಆರಂಭದಿಂದ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋ ಮಹತ್ವದ ಮೂರು ಪಂದ್ಯಗಳಲ್ಲೇ ಮುಗ್ಗರಿಸಿದೆ. ಅದ್ರಲ್ಲೂ ಕಳೆದ ಸತತ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರೋದು ಆರ್ಸಿಬಿ ಆತ್ಮವಿಶ್ವಾಸಕ್ಕೆ ಧಕ್ಕೆಯಾಗೋ ಹಾಗೇ ಮಾಡಿದೆ.
ಸತತ 4 ಪಂದ್ಯಗಳಲ್ಲಿ ಸೋತು ಕಂಗಾಲಾಗಿದೆ ಡೆಲ್ಲಿ! ಆರ್ಸಿಬಿ ಕಳೆದ ಮೂರು ಪಂದ್ಯಗಳನ್ನ ಸೋತ್ರೆ, ಡೆಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತಿದೆ. ಸಹಜವಾಗೇ ಡೆಲ್ಲಿ ಆರ್ಸಿಬಿಗಿಂತ ಹೆಚ್ಚಿನ ಒತ್ತಡದಲ್ಲಿದೆ. ಹೀಗಾಗಿ ಆರಂಭದಲ್ಲೇ ಡೆಲ್ಲಿ ಆಟಗಾರರ ಮೇಲೆ ಒತ್ತಡ ಹೇರಿದ್ರೆ, ಆರ್ಸಿಬಿ ಸುಲಭವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸೋದಕ್ಕೆ ನೆರವಾಗುತ್ತೆ.
ಗೆಲುವು ನಿರ್ಧರಿಸಬೇಕು ಕ್ಯಾಪ್ಟನ್ ಕೊಹ್ಲಿ, ಎಬಿಡಿ! ಕಳೆದ ಮೂರ ಪಂದ್ಯಗಳಲ್ಲಿ ಆರ್ಸಿಬಿ ಸೋಲಿಗೆ ಕಾರಣವಾಗಿರೋದೇ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ಸ್ಲೋ ಬ್ಯಾಟಿಂಗ್. ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ, ಕ್ಯಾಪ್ಟನ್ ಕೊಹ್ಲಿ ಮತ್ತು ಎಬಿಡಿ ಬ್ಯಾಟಿಂಗ್ನಲ್ಲಿ ಆರ್ಸಿಬಿ ಗೆಲುವನ್ನು ನಿರ್ಧರಿಸಬೇಕಿದೆ.
ಡೆಲ್ಲಿ ವಿರುದ್ಧ ಸೋತ್ರೆ ಆರ್ಸಿಬಿ ಮುಂದಿರೋ ಮಾರ್ಗವೇನು? ಈಗಾಗಲೇ RCB ಡೆಲ್ಲಿ ಪಾಲಿಗೆ ಕಂಟಕವಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ನಿಂದ ಹೊರ ನಡೆದಿವೆ. ಒಂದು ವೇಳೆ ಬ್ಯಾಡ್ ಲಕ್ನಿಂದ RCBಡೆಲ್ಲಿ ವಿರುದ್ಧ ಸೋತ್ರೆ ಮುಂದಾಗೋದು ಮಿರಾಕಲ್. ಕೊಲ್ಕತ್ತಾ ಈಗಾಗಲೇ 14 ಪಾಯಿಂಟ್ ಪಡೆದು ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ. 12 ಪಾಯಿಂಟ್ ಪಡೆದಿರೋ ಹೈದರಾಬಾದ್ ನಾಳೆ ಮುಂಬೈ ವಿರುದ್ಧ ಸೋತ್ರೆ, RCBಡೆಲ್ಲಿ ವಿರುದ್ಧ ಸೋತ್ರೂ ಪ್ಲೇ ಆಫ್ಗೆ ಸುಲಭವಾಗಿ ಎಂಟ್ರಿ ಕೊಡಲಿದೆ.
ಸದ್ಯ RCBಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲ್ಲೋದನ್ನೇ ಟಾರ್ಗೆಟ್ ಮಾಡಬೇಕಿದೆ. ಒಂದು ವೇಳೆ ಮುಂಬೈ ವಿರುದ್ಧ ಹೈದರಾಬಾದ್ ಗೆದ್ರೆ, RCB ಕತೆ ಮುಗಿದಂತೆ. ಹೀಗಾಗಿ ಕೊಹ್ಲಿ ಹುಡುಗರು ಹೈದರಾಬಾದ್ ಫಲಿತಾಂಶವನ್ನ ಎದುರು ನೋಡದೇ ಇಂದೇ, ಡೆಲ್ಲಿ ಮಣಿಸಿ ಪ್ಲೇ ಆಫ್ಗೆ ಎಂಟ್ರಿ ಕೊಡೋದು ಉತ್ತಮ.