India vs Australia Test Series ನಾವು ಪಂತ್​ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ

|

Updated on: Jan 19, 2021 | 10:50 PM

ಪಂತ್ ಪ್ರತಿಭಾವಂತನಾಗಿದ್ದದರು ಉಡಾಫೆ ಮನೋಭಾವ, ಶಾಟ್ ಸೆಲೆಕ್ಷನ್​ನಲ್ಲಿ ಪದೇಪದೆ ಎಸಗುವ ಪ್ರಮಾದ ಮತ್ತು, ಅಷ್ಠೇನೂ ಉತ್ತಮವಲ್ಲದ ವಿಕೆಟ್​ಕೀಪಿಂಗ್​ನಿಂದ ಸದಾ ಟೀಕೆಗೊಳಗಾಗುತ್ತಿದ್ದರು.

India vs Australia Test Series ನಾವು ಪಂತ್​ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ
ರಿಷಭ್ ಪಂತ್
Follow us on

ಎಲ್ಲ ಭಾರತೀಯರ ನಾಲಗೆ ಮೇಲೆ ಇಂದು ಇಬ್ಬರ ಹೆಸರು; ಕೇವಲ 21ನೆ ವಯಸ್ಸಿಗೆ ಅಗಾಧವೆನಿಸುವ ಪ್ರಬುದ್ಧತೆಯೊಂದಿಗೆ ಅತ್ಯಾಕರ್ಷಕ ಮತ್ತು ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 9 ರನ್​ಗಳಿಂದ ಶತಕ ತಪ್ಪಿಸಿಕೊಂಡ ಶುಭ್​ಮನ್ ಗಿಲ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ರೋಮಾಂಚಕ ಜಯ ದೊರಕಿಸಿಕೊಟ್ಟ ರಿಷಭ್ ಪಂತ್.

ನಾವಿಲ್ಲಿ ಪಂತ್ ಬಗ್ಗೆ ಮಾತ್ರ ಚರ್ಚೆ ಮಾಡುವ. ಅಪಾರ ಪ್ರತಿಭಾವಂತನಾಗಿದ್ದದರು ಉಡಾಫೆ ಮನೋಭಾವ, ಶಾಟ್ ಸೆಲೆಕ್ಷನ್​ನಲ್ಲಿ ಪದೇಪದೆ ಎಸಗುವ ಪ್ರಮಾದ ಮತ್ತು, ಅಷ್ಟೇನೂ ಉತ್ತಮವಲ್ಲದ ವಿಕೆಟ್​ಕೀಪಿಂಗ್​ನಿಂದ ಸದಾ ಟೀಕೆಗೊಳಗಾಗುವ ದೆಹಲಿಯ 23 ವರ್ಷ ವಯಸ್ಸಿನ ಪೋರ, ಪ್ರಾಯಶಃ ತನ್ನ ಟೀಕಾಕಾರರ ಬಾಯಿಯನ್ನು ಇಂದು ಶಾಶ್ವತವಾಗಿ ಮುಚ್ಚಿದ್ದಾರೆ. ಬ್ರಿಸ್ಬೇನ್​ನಲ್ಲಿ ಅವರಾಡಿದ ಇನ್ನಿಂಗ್ಸ್ ಅಷ್ಟು ಅಮೋಘವಾಗಿತ್ತು.

ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರೀ ಹೇಳುವ ಹಾಗೆ ಪಂತ್ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ತುಂಬಾ ಶ್ರಮಪಡುತ್ತಿದ್ದಾರೆ. ಆ ಶ್ರಮವೇ ಅವರನ್ನಿವತ್ತು ಮ್ಯಾಚ್ ವಿನ್ನರ್ ಆಗಿ ಪರಿವರ್ತಿಸಿತು ಎಂದು ಶಾಸ್ತ್ರೀ ಹೇಳುತ್ತಾರೆ. ಅವರನ್ನು ಟೀಮ್ ಮ್ಯಾನೇಜ್ಮೆಂಟ್ ಯಾಕೆ ಅವರ ಬೆನ್ನಿಗೆ ನಿಲ್ಲುತ್ತದೆ ಅಂತಲೂ ಶಾಸ್ತ್ರೀ ಹೇಳಿದರು.

ರವಿ ಶಾಸ್ತ್ರೀ ಮತ್ತು ರಿಷಭ್ ಪಂತ್

‘ನಾವು ಪಂತ್​ರನ್ನು ಯಾಕೆ ಆಡಿಸಲು ಬಯಸುತ್ತೇವೆಂದರೆ, ನಿಸ್ಸಂದೇಹವಾಗಿ ಅವರೊಬ್ಬ ಮ್ಯಾಚ್ ವಿನ್ನರ್. ಅವರು ವಿಕೆಟ್​ಕೀಪಿಂಗ್ ಚೆನ್ನಾಗಿ ಮಾಡದಿದ್ದರೆ ಜನ ಅವರನ್ನು ಟೀಕಿಸುತ್ತಾರೆ. ಆದರೆ ಅವರು ಟೀಮಿಗೆ ಪಂದ್ಯಗಳನ್ನು ಗೆದ್ದುಕೊಡಬಲ್ಲ ಸಾಮರ್ಥ್ಯದ ಆಟಗಾರರಾಗಿದ್ದಾರೆ. ಸಿಡ್ನಿಯಲ್ಲಿ ಇನ್ನೂ ಸ್ವಲ್ಪ ಹೊತ್ತು ಆಡಿದ್ದರೆ ಆ ಪಂದ್ಯವನ್ನೂ ಭಾರತಕ್ಕೆ ಗೆದ್ದುಕೊಡುತ್ತಿದ್ದರು, ಅವರೊಬ್ಬ ಉತ್ಕೃಷ್ಟ ಬ್ಯಾಟ್ಸ್​ಮನ್​ ಆಗಿರುವುದರಿಂದ ನಾವು ಅವರ ಬೆನ್ನಿಗೆ ನಿಲ್ಲುತ್ತೇವೆ,’ ಎಂದು ಶಾಸ್ತ್ರೀ ಬ್ರಿಸ್ಬೇನ್​ನಲ್ಲಿ ಇಂದು ಪಂದ್ಯ ಮುಗಿದ ನಂತರ ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಮಾತಾಡುವಾಗ ಹೇಳಿದರು.

ಟೀಮಿನ 6-7 ಪ್ರಮುಖ ಆಟಗಾರರ ಅನುಪಸ್ಥಿತಯಲ್ಲೂ ಭಾರತೀಯ ಟೀಮು ತೋರಿದ ಪ್ರದರ್ಶನವನ್ನು ಶಾಸ್ತ್ರೀ ಪ್ರಶಂಸಿದರು.

‘ನಮ್ಮ ಹುಡುಗರ ಮನಸ್ಥೈರ್ಯ, ಶೌರ್ಯ ಮತ್ತು ಸಂಕಲ್ಪಗಳ ಬಗ್ಗೆ ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಅಡಿಲೇಡ್​ನಲ್ಲಿ ಕೇವಲ 36 ರನ್​​ಗಳಿಗೆ ಔಟಾದ ನಂತರ ಅವರು ತೋರಿದ ಪರಾಕ್ರಮ ಅಭೂತಪೂರ್ವವಾದದ್ದು. ಈ ಟೀಮನ್ನು ರಾತ್ರೋರಾತ್ರಿ ಕಟ್ಟಿದ್ದಲ್ಲ. ವಿರಾಟ್ ಭೌತಿಕವಾಗಿ ನಮ್ಮೊಂದಿಗಿರದಿದ್ದರೂ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅವರು ಮೈದಾನದಲ್ಲಿ ತೋರುವ ತೀವ್ರತೆಯನ್ನು ಉಳಿದ ಆಟಗಾರರೂ ಮೈಗೂಡಿಸಿಕೊಂಡಿದ್ದಾರೆ. ಅಜಿಂಕ್ಯಾ ರಹಾನೆ ನೋಡಲು ಮೃದುವಾಗಿ ಕಾಣಬಹುದು, ಆದರೆ ಆಂತರಿಕವಾಗಿ ಅವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ,’ ಎಂದು ಶಾಸ್ತ್ರೀ ಹೇಳಿದರು.