ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಎರಡನೇ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಆರಂಭ: ಐಸಿಸಿ

| Updated By: Digi Tech Desk

Updated on: Jun 30, 2021 | 8:06 PM

ಟೆಸ್ಟ್​ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್​ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್​ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್​ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್​ಗಳಲ್ಲಿ ಭಾಗವಹಿಸಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಎರಡನೇ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಆರಂಭ: ಐಸಿಸಿ
ಜೋ ರೂಟ್​ ಮತ್ತು ವಿರಾಟ್​ ಕೊಹ್ಲಿ
Follow us on

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಮೊದಲ ಆವೃತ್ತಿಯು ನ್ಯೂಜಿಲೆಂಡ್​ ಪಟ್ಟ ಧರಿಸುವುದರೊಂದಿಗೆ ಕೊನೆಗೊಂಡಿದೆ. ಎರಡನೇ ಆವೃತ್ತಿ ಅಂದರೆ ದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಆವೃತ್ತಿಯ ಸೈಕಲನ್ನು ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ಐಸಿಸಿ) ಇಷ್ಟರಲ್ಲೇ ಪ್ರಕಟಿಸುವುದು ಎಂದು ಈ ಹಿಂದೆ ನಾವು ಚರ್ಚಿಸಿದ್ದು ಓದುಗರಿಗೆ ನೆನಪಿರಬಹುದು. ಅದರಂತೆ ಆಗಸ್ಟ್​ ತಿಂಗಳಲ್ಲಿ ಅರಂಭಗೊಳ್ಳುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿಯೊಂದಿಗೆ ವರಡನೇ ಡಬ್ಲ್ಯೂಟಿಸಿ ಸೈಕಲ್ ಶುರುವಾಗಲಿದೆಯೆಂದು ಐಸಿಸಿ ಬುಧವಾರ ತಿಳಿಸಿದೆ. ಮೂಲಗಳ ಪ್ರಕಾರ ಆಗಸ್ಟ್​ 2021 ರಿಂದ ಆರಂಭಗೊಂಡು ಜೂನ್ 2023ರವರಗೆ ನಡೆಯುವ ಎರಡನೇ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಕೇವಲ ಎರಡು ಮಾತ್ರ 5-ಪಂದ್ಯಗಳ ಟೆಸ್ಟ್ ಸರಣಿಗಳಾಗಿವೆ. ಮೊದಲನೆಯದ್ದು ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್​ನಲ್ಲಿ ಶುರುವಾಗುವ ಸರಣಿಯಾದರೆ ವರ್ಷಾಂತ್ಯದಲ್ಲಿ ನಡೆಯುವ ಌಶಸ್ ಎರಡನೇಯದ್ದು. ಹಾಗೆಯೇ, 2022 ರಲ್ಲಿ ಭಾರತ ಪ್ರವಾಸ ಮಾಡಲಿರುವ ಆಸ್ಟ್ರೇಲಿಯ 4-ಪಂದ್ಯಗಳ ಸರಣಿಯನ್ನಾಡಲಿದ್ದು, ಸದರಿ ಸರಣಿಯು ಎರಡನೇ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಆಯೋಜಿಸಲ್ಪಡುವ ಏಕಮಾತ್ರ 4-ಪಂದ್ಯಗಳ ಸರಣಿ ಆಗಲಿದೆ.

ಇವಲ್ಲದೆ, ಈ ಸೈಕಲ್​ನಲ್ಲಿ 3 ಪಂದ್ಯಗಳ 7 ಸರಣಿಗಳು ಮತ್ತು 2-ಪಂದ್ಯಗಳ 13 ಸರಣಿಗಳು ನಡೆಯಲಿವೆ. ಮೊದಲ ಸೈಕಲ್​ನಂತೆ ಡಬ್ಲ್ಯೂಟಿಸಿಯಲ್ಲಿ ಪಾಲ್ಗೊಳ್ಳುವ 9 ತಂಡಗಳು ಒಟ್ಟು 6 ಸರಣಿಗಳನ್ನು-3 ಸ್ವದೇಶದಲ್ಲಿ ಮತ್ತು 3 ವಿದೇಶಗಳಲ್ಲಿ ಆಡುವುದು ಮುಂದುವರಿಸಲಿವೆ.

ಆದರೆ ಟೆಸ್ಟ್​ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್​ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್​ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್​ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್​ಗಳಲ್ಲಿ ಭಾಗವಹಿಸಲಿದೆ.

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಕೇವಲ 13 ಟೆಸ್ಟ್​ಗಳನ್ನಾಡಲಿದೆ. ಪಾಕಿಸ್ತಾನ ಕಿವಿಗಳಿಗಿಂತ ಒಂದು ಟೆಸ್ಟ್ ಕಡಿಮೆ ಆಡಲಿದ್ದರೆ, ವೆಸ್ಟ್​ ಇಂಡೀಸ್ ಮತ್ತು ಶ್ರೀಲಂಕಾ ಸಹ ತಲಾ 13 ಟೆಸ್ಟ್​ಗಳನ್ನಾಡಲಿವೆ.

ಡಬ್ಲ್ಯೂಟಿಸಿ 2ಕ್ಕೆ ಹೊಸ ಪಾಯಿಂಟ್ಸ್ ಪದ್ಧತಿ

ಐಸಿಸಿ ಎಲ್ಲ ಟೆಸ್ಟ್​ ಪಂದ್ಯಗಳಿಗೆ ಒಂದೇ ತೆರನಾದ ಪಾಯಿಂಟ್ಸ್​ ನೀಡುವ ನಿರ್ಧಾರ ತೆಗೆದುಕೊಂಡಿದೆ. ಟೆಸ್ಟ್​ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ 12 ಅಂಕಗಳು ಸಿಗಲಿವೆ. ಪಂದ್ಯ ಡ್ರಾ ಆದರೆ ಎರಢೂ ತಂಡಗಳಿಗೆ ತಲಾ 4 ಪಾಯಿಂಟ್ಸ್​ಗಳನ್ನು ಹಂಚಲಾಗುವುದು. ಒಂದು ಪಕ್ಷ ಪಂದ್ಯ ಟೈನಲ್ಲಿ ಅಂತ್ಯ ಕಂಡರೆ ಟೀಮುಗಳು ತಲಾ 6 ಅಂಕಗಳನ್ನು ಹಂಚಿಕೊಳ್ಳಲಿವೆ.

ಹಾಗೆಯೇ, ನಿಧಾನ ಗತಿಯ ಓವರ್​ ರೇಟ್​​ಗಳಿಗೆ ಪೆನಾಲ್ಟಿ ವಿಧಿಸುವ ನಿರ್ಧಾರವನ್ನು ಐಸಿಸಿ ತೆಗೆದುಕೊಂಡಿದೆ. ನಿಗದಿತ ಓವರ್ ರೇಟ್​ ಕಾಯ್ದುಕೊಳ್ಳದ ತಂಡಕ್ಕೆ ಅದರ ಪಾಯಿಂಟ್ಸ್ ಟ್ಯಾಲಿಯಿಂದ 1 ಅಂಕವನ್ನು ಕಡಿತಗೊಳಿಸಲಾಗುವುದು. ಶೆಡ್ಯೂಲ್ ಮತ್ತು ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಐಸಿಸಿ ಹೇಳಿದೆ.

ಮೊದಲ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಸರಣಗಳಿಗೆ ಏಕರೂಪದ ಅಂಕಗಳನ್ನು ನೀಡಲಾಗಿತ್ತು, ಟೆಸ್ಟ್​ಗಳಿಗಲ್ಲ. ‘ಹಾಗೆ ಮಾಡಿದ ಹಿಂದಿನ ಉದ್ದೇಶ, ತಂಡಗಳು ಬೇರೆ ಬೇರೆ ಸಂಖ್ಯೆಯ ಸರಣಿ ಮತ್ತು ಟೆಸ್ಟ್ ಪಂದ್ಯಗಳನ್ನಾಡಿದ್ದರೂ. ಸೈಕಲ್​ನ ಯಾವುದೇ ಹಂತದಲ್ಲಿ ಟೀಮುಗಳ ಪಾಯಿಂಟ್ಸ್ ಟ್ಯಾಲಿಯನ್ನು ಹೋಲಿಸುವುದಕ್ಕೆ ಸಾಧ್ಯವಾಗುವ ಹಾಗೆ ಸರಳೀಕರಿಸುವ ಪ್ರಯತ್ನ ಮಾಡಲಾಗಿತ್ತು,’ ಎಂದು ಐಸಿಸಿಯ ಹಂಗಾಮಿ ಮುಖ್ಯ ಕಾರ್ಯ ನಿರ್ವವಹಣಾಧಿಕಾರಿ ಜೆಫ್ ಅಲ್ಲರ್​ಡೈಸ್ ಹೇಳಿದರೆಂದು ಕ್ರೀಡಾ ವೆಬ್​ಸೈಟ್​ ವರದಿ ಮಾಡಿದೆ.

ಇದನ್ನೂ ಓದಿ: WTC Final: ಜಡೇಜಾ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್

Published On - 4:41 pm, Wed, 30 June 21