WTC Final: ಜಡೇಜಾ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್

WTC Final: ಭಾರತ ಜಡೇಜಾನನ್ನು ಎಡಗೈ ಸ್ಪಿನ್‌ ಆಗಿ ಆಯ್ಕೆ ಮಾಡಲಾಗಿಲ್ಲ. ಅವರು ತಮ್ಮ ಬ್ಯಾಟಿಂಗ್‌ಗೆ ಆಯ್ಕೆಯಾದರು. ಆದ್ದರಿಂದ ಈ ಆಯ್ಕೆಯ ಬಗ್ಗೆ ನಾನು ಯಾವಾಗಲೂ ವಿರುದ್ಧವಾಗಿರುತ್ತೇನೆ ಎಂದಿದ್ದಾರೆ.

WTC Final: ಜಡೇಜಾ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್
ರವೀಂದ್ರ ಜಡೇಜಾ
Follow us
ಪೃಥ್ವಿಶಂಕರ
|

Updated on: Jun 25, 2021 | 5:44 PM

ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಆಗುವ ಉತ್ತಮ ಅವಕಾಶವನ್ನು ಭಾರತೀಯ ಕ್ರಿಕೆಟ್ ತಂಡ ಕಳೆದುಕೊಂಡಿತು. ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಆಟ ತೋರಿಸಿದರೂ ನ್ಯೂಜಿಲೆಂಡ್ ಜಯಗಳಿಸಿತು. ಭಾರತೀಯ ತಂಡದ ಸೋಲಿನ ನಂತರ, ಸೋಲಿಗೆ ಕಾರಣಗಳನ್ನು ಚರ್ಚಿಸಲಾಗುತ್ತಿದೆ. ಇದರಲ್ಲಿ ಪ್ರಮುಖ ಕಾರಣ ಭಾರತದ ಆಡುವ ಇಲೆವೆನ್, ಇದು ಮೊದಲಿನಿಂದಲೂ ಹೆಚ್ಚು ಚರ್ಚೆಯಾಗಿತ್ತು. ಈಗ ಪಂದ್ಯದ ಫಲಿತಾಂಶದ ನಂತರ ಮಾಜಿ ಕ್ರಿಕೆಟಿಗ ಮತ್ತು ನಿರೂಪಕ ಸಂಜಯ್ ಮಂಜ್ರೇಕರ್ ಈ ವಿಷಯವನ್ನು ಎತ್ತಿದ್ದಾರೆ ಮತ್ತು ರವೀಂದ್ರ ಜಡೇಜಾ ಅವರನ್ನು ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಜೂನ್ 18 ರಂದು ಪ್ರಾರಂಭವಾದ ಫೈನಲ್‌ಗೆ ಒಂದು ದಿನ ಮೊದಲು ಭಾರತ ತಂಡ ಇಡುವ ಇಲೆವೆನ್ ಘೋಷಿಸಿತ್ತು. ತಂಡದಲ್ಲಿ ಮೂವರು ವೇಗದ ಬೌಲರ್‌ಗಳು ಮತ್ತು ಇಬ್ಬರು ಸ್ಪಿನ್ನರ್-ಆಲ್‌ರೌಂಡರ್‌ಗಳು ಇದ್ದರು. ಇಎಸಿಪಿಎನ್-ಕ್ರಿಕ್ಇನ್‌ಫೊ ಜೊತೆ ಮಾತನಾಡಿದ ಮಂಜ್ರೇಕರ್, ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಮತ್ತು ಜಡೇಜಾ ಅವರನ್ನು ಬ್ಯಾಟ್ಸ್‌ಮನ್ ಓವರ್ ಸ್ಪಿನ್ನರ್ ಆಗಿ ಆಯ್ಕೆ ಮಾಡುವುದು ದೊಡ್ಡ ತಪ್ಪು, ಇದನ್ನು ತಪ್ಪಿಸಬೇಕಾಗಿತ್ತು ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮಂಜ್ರೇಕರ್, ಭಾರತ ತಮ್ಮ ಬ್ಯಾಟಿಂಗ್‌ಗಾಗಿ ಒಬ್ಬ ಆಟಗಾರನನ್ನು (ಸ್ಪಿನ್ನರ್) ಆಯ್ಕೆ ಮಾಡಿದರು, ಅದು ಜಡೇಜಾ ಆಗಿದ್ದರು. ಆದರೆ ಭಾರತ ಜಡೇಜಾನನ್ನು ಎಡಗೈ ಸ್ಪಿನ್‌ ಆಗಿ ಆಯ್ಕೆ ಮಾಡಲಾಗಿಲ್ಲ. ಅವರು ತಮ್ಮ ಬ್ಯಾಟಿಂಗ್‌ಗೆ ಆಯ್ಕೆಯಾದರು. ಆದ್ದರಿಂದ ಈ ಆಯ್ಕೆಯ ಬಗ್ಗೆ ನಾನು ಯಾವಾಗಲೂ ವಿರುದ್ಧವಾಗಿರುತ್ತೇನೆ ಎಂದಿದ್ದಾರೆ.

ಹನುಮಾ ವಿಹಾರಿ ಸೇರ್ಪಡೆ ವ್ಯತ್ಯಾಸ ತರುತ್ತಿತ್ತು ಟೆಸ್ಟ್ ಪಂದ್ಯಗಳಿಗೆ ವಿಶೇಷ ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ. ಹನುಮಾ ವಿಹಾರಿ ಅವರ ಉದಾಹರಣೆಯನ್ನು ನೀಡಿ, ಅವರು ಬ್ಯಾಟ್ಸ್‌ಮನ್‌ ಆಗಿ ಅವಕಾಶ ನೀಡಿದ್ದರೆ, ಪರಿಸ್ಥಿತಿ ವಿಭಿನ್ನವಾಗಿರಬಹುದು ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಮಂಜ್ರೆಕರ್, ಉದಾಹರಣೆಯಾಗಿ ಉತ್ತಮ ರಕ್ಷಣಾತ್ಮಕ ಆಟ ಆಡುವ ಹನುಮಾ ವಿಹಾರಿ ಅವರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ವಿಹಾರಿ ತಂಡದಲ್ಲಿದ್ದರೆ ಭಾರತ ಬಹುಶಃ 170 (ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಸ್ಕೋರ್) ರ ಬದಲು 220 ಅಥವಾ 225 ಅಥವಾ 230, ರನ್ ಗಳಿಸುವ ಅವಕಾಶವಿರುತ್ತಿತ್ತು ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಈ ತಪ್ಪು ಮಾಡಬೇಡಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಜಡೇಜಾ ಕೇವಲ 31 ರನ್ ಗಳಿಸಿದರೆ, ಇಡೀ ಪಂದ್ಯದಲ್ಲಿ ಕೇವಲ 15.2 ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿದರು, ಇದರಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂತಹ ತಪ್ಪು ಮಾಡಬೇಡಿ ಎಂದು ಮಂಜ್ರೇಕರ್ ಭಾರತೀಯ ತಂಡಕ್ಕೂ ಎಚ್ಚರಿಕೆ ನೀಡಿರುವುದು ಇದೇ ಕಾರಣ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಪ್ರಾರಂಭವಾಗಲಿದೆ.

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು