AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: ಚೊಚ್ಚಲ ಪಂದ್ಯದ ವೇಳೆ ಸಚಿನ್ ನೀಡಿದ ಸಲಹೆ ನೆನೆದ ಗಂಗೂಲಿ! ಆ ದಿನಗಳ ಬಗ್ಗೆ ದಾದಾ ಹೇಳಿದಿಷ್ಟು

Sourav Ganguly: ನಾನು ಟೀಮ್ ಇಂಡಿಯಾ ನಾಯಕನಾಗಿ ಅಧಿಕಾರ ವಹಿಸಿಕೊಂಡೆ. ನಾನು ತಂಡವನ್ನು ಬಲಪಡಿಸಿದೆ. ಭಾರತಕ್ಕೆ ಒಳ್ಳೆಯ ಹೆಸರು ಸಿಕ್ಕಿತು.

Sourav Ganguly: ಚೊಚ್ಚಲ ಪಂದ್ಯದ ವೇಳೆ ಸಚಿನ್ ನೀಡಿದ ಸಲಹೆ ನೆನೆದ ಗಂಗೂಲಿ! ಆ ದಿನಗಳ ಬಗ್ಗೆ ದಾದಾ ಹೇಳಿದಿಷ್ಟು
ಸೌರವ್ ಗಂಗೂಲಿ, ಸಚಿನ್ ತೆಂಡಲ್ಕೂರ್
Follow us
ಪೃಥ್ವಿಶಂಕರ
|

Updated on: Jun 25, 2021 | 7:54 PM

ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ 25 ವರ್ಷಗಳಿಂದ ಕ್ರಿಕೆಟ್ ದುನಿಯಾದಲ್ಲಿ ಸಕ್ರಿಯಾರಾಗಿದ್ದಾರೆ. 1992 ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಗಂಗೂಲಿ 1996 ರ ಜೂನ್ 22 ರಂದು ತಮ್ಮ ಮೊದಲ ಟೆಸ್ಟ್ ಆಡಿದರು. ಆದಾಗ್ಯೂ, ಲಾರ್ಡ್ಸ್‌ನಲ್ಲಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರ ಎಂಬುದನ್ನು ಸಾಭೀತುಪಡಿಸಿದರು. ಇದು ಸಂಭವಿಸಿ 25 ವರ್ಷಗಳಾಗಿವೆ. ಅವರು ಈಗಾಗಲೇ ಈ ಸುದ್ದಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಹೋಗಿ ಸ್ವಲ್ಪ ಚಹಾ ಸೇವಿಸಿ ಮೊದಲ ಟೆಸ್ಟ್‌ನಲ್ಲಿ ಒಂದು ಶತಕ ಬಾರಿಸುವುದು ಸಂತೋಷದ ಸಂಗತಿಯಾಗಿದೆ. ಆದಾಗ್ಯೂ, ಆ ದಿನದ ಶತಕದ ನಂತರ ಸಚಿನ್ ಬಂದು ಅವರ ಬಳಿ ಹೇಳಿದ ಮಾತುಗಳನ್ನು ಅವರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಆ ಘಟನೆಯ ಬಗ್ಗೆ ಮಾತನಾಡಿದ ಗಂಗೂಲಿ, ಶತಕದ ನಂತರ ಆಯಾಸಗೊಂಡಿದ್ದ ನನ್ನ ಬಳಿ ಬಂದ ಸಚಿನ್ ಕೂಲ್ ಆಗಿರಿ, ಹಾಗೆಯೇ ಹೋಗಿ ಸ್ವಲ್ಪ ಚಹಾ ಸೇವಿಸಿ ಎಂದು ಸಲಹೆ ನೀಡಿದರಂತೆ.

ನಾನು ತಂಡವನ್ನು ಬಲಪಡಿಸಿದೆ ನಾನು ಬಿಸಿಸಿಐ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲುವುದು ನನ್ನು ಅದೃಷ್ಟ ಎಂದು ಗಂಗೂಲಿ ಹೇಳಿದರು. ನನ್ನ ವೃತ್ತಿಜೀವನವು ಅತ್ಯದ್ಭುತವಾಗಿತ್ತು. ಏಕದಿನ ಪಂದ್ಯಗಳಿಗೆ ಪ್ರವೇಶಿಸಿದ ನಾಲ್ಕು ವರ್ಷಗಳ ನಂತರ, ನಾನು ಟೆಸ್ಟ್ ಪಂದ್ಯದ ಅಖಾಡಕ್ಕೆ ಪ್ರವೇಶಿಸಿದೆ. ಪ್ರವೇಶ ಪಂದ್ಯದಲ್ಲಿ ಶತಕ ಬಾರಿಸಿದ ಹೆಮ್ಮೆ ಇದೆ. ಸ್ವಲ್ಪ ಸಮಯದ ನಂತರ, ನಾನು ಟೀಮ್ ಇಂಡಿಯಾ ನಾಯಕನಾಗಿ ಅಧಿಕಾರ ವಹಿಸಿಕೊಂಡೆ. ನಾನು ತಂಡವನ್ನು ಬಲಪಡಿಸಿದೆ. ಭಾರತಕ್ಕೆ ಒಳ್ಳೆಯ ಹೆಸರು ಸಿಕ್ಕಿತು. ಕೆಲವು ಅನಿರೀಕ್ಷಿತ ಸಂದರ್ಭಗಳಲ್ಲಿ ನಾಯಕತ್ವ ಕಳೆದುಹೋಯಿತು. ಇದೆಲ್ಲವುಗಳ ನಂತರ ನಾನು ಬಿಸಿಸಿಐ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ನನ್ನ ಇಡೀ ಪ್ರಯಾಣವು ಸುಗಮವಾಗಿ ನಡೆದಿದೆ ಎಂದು ಗಂಗೂಲಿ ಹೇಳಿದರು.

ಆ ಪಂದ್ಯದಲ್ಲಿ ಗಂಗೂಲಿ 131 ರನ್ ಗಳಿಸಿದರು. 301 ಎಸೆತಗಳಲ್ಲಿ 20 ಬೌಂಡರಿಗಳೊಂದಿಗೆ ಶತಕವನ್ನು ದಾಖಲಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 344 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 429 ಕ್ಕೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 9 ಕ್ಕೆ 278 ರನ್ ಗಳಿಸಿತು. ಆದರೆ ಐದು ದಿನಗಳ ಸಂಪೂರ್ಣ ಜಿದ್ದಾಜಿದ್ದಿನ ಆಟ ನಡೆದದರಿಂದ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.