Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್​ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ…?

|

Updated on: Jun 08, 2021 | 9:46 AM

Virender Sehwag: ಓಪನರ್ ವೀರೇಂದ್ರ ಸೆಹವಾಗ್ ಅಂದರೇನೆ ಸಾಹಸಮಯ, ಉತ್ಸಾಹಪೂರ್ಣ ಬ್ಯಾಟ್ಸ್​ಮನ್​ ಅಂತಾ ಗುರುತಿಸಿಕೊಂಡವರು. ಆತ ಎದುರಾಳಿಗಳಿಗೆ ಅಷ್ಟೇ ಅಪಾಯಕಾರಿ. ವಿರೋಧಿ ತಂಡಕ್ಕೆ ಸಿಂಹಸ್ವಪ್ನ ಬ್ಯಾಟ್ಸ್​ಮನ್ ಅವರು. ಸ್ಕ್ರೀಸ್​​ಗೆ ಬಂದು ನಿಂತಾ ಅಂದ್ರೆ ಬೌಂಡರಿಯೊಂದಿಗೇ ಓಂ ಪ್ರಥಮ ಅನ್ನೋರು. ಪಾಕಿಸ್ತಾನದ ವಿರುದ್ಧ ಆಡುತ್ತಾ ವೇಗದ ಬೌಲರ್ ರಾಣಾ ನವೇದ್ ಉಲ್ ಹಸನ್ ನನ್ನು ಹೇಗೆ ಗೋಳುಹೊಯ್ದುಕೊಂಡರು ಅಂದ್ರೆ...

Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್​ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ...?
Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್​ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ...?
Follow us on

ದೆಹಲಿ: ಭಾರತ ಕಂಡ ಸರ್ವಶ್ರೇಷ್ಠ ಆರಂಭಿಕ ಬ್ಯಾಟ್ಸ್​ಮನ್​ ಅಂದ್ರೆ ಅದು.. ವೀರೂ ಎಂದೇ ಆಪ್ತವಾಗಿ ಕರೆಸಿಕೊಳ್ಳುತ್ತಿದ್ದ ವೀರೇಂದ್ರ ಸೆಹವಾಗ್! ಇಂತಹ ವೀರೇಂದ್ರ ಸೆಹವಾಗ್ ಅದೊಮ್ಮೆ ಕೇವಲ ಎರಡೇ ಎರಡು ಎಸೆತಗಳಲ್ಲಿ ಬಾರಿಸಿದ್ದು 21 ರನ್! ಹಾಗೆ 21 ರನ್​ ಚಚ್ಚಿಸಿಕೊಂಡಿದ್ದು ಪಾಕಿಸ್ತಾನದ ಬೌಲರ್ ರಾಣಾ ನವೇದ್ ಉಲ್ ಹಸನ್​! ಯಾವಾಗ, ಹೇಗೆ ಎಂದು ತಿಳಿಯುವ ಕುತೂಹಲ ನಿಮ್ಮ ಮುಂದಿದೆಯೇ… ಹಾಗಾದರೆ ಇದನ್ನು ಪೂರ್ತಿ ಓದಿ.

ಓಪನರ್ ವೀರೇಂದ್ರ ಸೆಹವಾಗ್ ಅಂದರೇನೆ ಸಾಹಸಮಯ, ಉತ್ಸಾಹಪೂರ್ಣ ಬ್ಯಾಟ್ಸ್​ಮನ್​ ಅಂತಾ ಗುರುತಿಸಿಕೊಂಡವರು. ಆತ ಎದುರಾಳಿಗಳಿಗೆ ಅಷ್ಟೇ ಅಪಾಯಕಾರಿ. ವಿರೋಧಿ ತಂಡಕ್ಕೆ ಸಿಂಹಸ್ವಪ್ನ ಬ್ಯಾಟ್ಸ್​ಮನ್ ಅವರು. ಸ್ಕ್ರೀಸ್​​ಗೆ ಬಂದು ನಿಂತಾ ಅಂದ್ರೆ ಬೌಂಡರಿಯೊಂದಿಗೇ ಓಂ ಪ್ರಥಮ ಅನ್ನೋರು.

ಪಾಕಿಸ್ತಾನದ ವಿರುದ್ಧ ಆಡುತ್ತಾ ವೇಗದ ಬೌಲರ್ ರಾಣಾ ನವೇದ್ ಉಲ್ ಹಸನ್ ನನ್ನು ಹೇಗೆ ಗೋಳುಹೊಯ್ದುಕೊಂಡರು ಅಂದ್ರೆ ಅದು ಮಾರ್ಚ್​ 13, 2004. ಪಾರಂಪರಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಕ ದಿನ ಪಂದ್ಯ ನಡೆಯುತ್ತಿತ್ತು. ವೇಗಿ ರಾಣಾ ಕಾನೂನುಬದ್ಧವಾಗಿ ಎಸೆದಿದ್ದ ಎರಡು ಬಾಲಿನಲ್ಲಿ 21 ರನ್​ ಬಾರಿಸಿದ್ದರು. ಹಾಗಂತ ಎಡರು ಬಾಲಿನಲ್ಲಿ ಅಷ್ಟು ರನ್​ ಬಾರಿಸೋಕ್ಕೆ ಛಾನ್ಸೇ ಇಲ್ಲ ಅನ್ನಬೇಡಿ. ಆ ವೇಗಿ ರಾಣಾ ಮಾಡಿದ ತಪ್ಪೇನಂದ್ರೆ ಎರಡೇ ಬಾಲು ಎಸೆದಿದ್ದ ರಾಣಾ ಅರೊಂದಿಗೆ ಇತರೆ ಲೆಕ್ಕದಲ್ಲಿ ಮತ್ತೆ ಮತ್ತೆ ಬೌಲಿಂಗ್ ಮಾಡುತ್ತಾ ಓಪನರ್ ವೀರೇಂದ್ರ ಸೆಹವಾಗ್​ಗೆ ದಾಖಲೆಯ 21 ರನ್​ ಬಾರಿಸಲು ಸಹಕರಿಸಿದರು!

ಭಾರತದ ಇನ್ನಿಂಗ್ಸ್​​ ನಡೆಯುತ್ತಿದ್ದಾಗ 11ನೇ ಓವರ್​ನಲ್ಲಿ ವೇಗಿ ರಾಣಾ ಬೌಲಿಂಗ್​ಗೆ ಇಳಿದರು. ಮೊದಲ ಬಾಲೇ ನೋಬಾಲ್​ ಆಗಿತ್ತು. ಸೆಹವಾಗ್ ದೂಸ್ರಾ ಮಾತೇ ಇಲ್ಲದೆ ಸೀದಾ ಬೌಂಡರಿ ಆಚೆಗೆ ಆ ಬಾಲನ್ನು ಗದುಮಿದರು. ಅದಾದ ಮೇಲೂ ವೇಗಿ ರಾಣಾ ಮತ್ತೆ ನೋ ಬಾಲ್​ ಎಸೆಯೋದಾ? ಸರಿ ಅದೂ ಸಹ ಸೆಹವಾಗ್ ಬ್ಯಾಟಿಂದ ಸೀದಾ ಬೌಂಡರಿಗೆ ನುಗ್ಗಿತು.​ ವೇಗಿ ರಾಣಾಗೆ ಅದೇನಾಗಿತ್ತೋ ತಮ್ಮ ಮೂರನೆಯ ಬಾಲನ್ನೂ ನೋ ಬಾಲ್​ ಎಸೆದು ಹ್ಯಾಟ್ರಿಕ್​ ನೋ ಬಾಲ್ಸ್​​ ಮಾಡಿಬಿಟ್ಟರು! ಆದರೆ ಸೆಹವಾಗ್​ ಆ ಮೂರನೆಯ ನೋ ಬಾಲ್​ನಲ್ಲಿ ರನ್​ ಬಾರಿಸದೆ ಡಿಫೆನ್ಸ್​ ಆಡಿದರು. ಅದಾದ ಮೇಲಷ್ಟೇ ವೇಗಿ ರಾಣಾ ಲೀಗಲ್​ ಬಾಲ್​ ಎಸೆದಿದ್ದು. ಆಗಲೂ ಸೆಹವಾಗ್​ ಅದನ್ನು ಗೌರವಯುತವಾಗಿ ಡಿಫೆನ್ಸ್​ ಆಡಿದರು.

ಆದರೆ ವೇಗಿ ರಾಣಾಗೆ ಅಂದು ನಸೀಬು ಕೆಟ್ಟಿತ್ತು. 5ನೆಯ ಬಾಲನ್ನು ಮತ್ತೆ ನೋ ಬಾಲ್​ ಎಸೆದರು. ಇನ್ನು ಸೆಹವಾಗ್ ಸಹ ಅಷ್ಟೇ ಬುಲೆಟ್​ ಶಾಟ್​ ಬಾರಿಸಿ, ಅದನ್ನೂ ಬೌಂಡರಿಗೆ ಅಟ್ಟಿದರು. ಸೆಹವಾಗ್​ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದನ್ನು ಕಂಡು ದಿಕ್ಕೆಟ್ಟವನಂತೆ ವೇಗಿ ರಾಣಾ ಮತ್ತೂ ನೋ ಬಾಲ್​ ಎಸೆದನಷ್ಟೇ! ಇವಯ್ಯ ಸೆಹವಾಗ್​… ನೋ ಮರ್ಸಿ ಅನ್ನುತ್ತಾ… ಸೀದಾ ಫೋರ್​ ಎತ್ತಿದ್ದರು. ಅದಾದ ಮೇಲೆ ಸ್ಥಿಮಿತಕ್ಕೆ ಬಂದವನಂತೆ ಪಾಕಿಸ್ತಾನದ ವೇಗಿ ರಾಣಾ ನವೇದ್ ಉಲ್ ಹಸನ್ ಸಾಕಿನ್ನು ಲೀಗಲ್​ ಬಾಲ್​ ಎಸೆದು ನನ್ನ ಓವರ್​ ಮುಗಿಸಿಕೊಳ್ಳುವೆ ಎಂದು ಸರಳವಾದ ಬಾಲ್​ ಬಿಟ್ಟರು. ಸದ್ಯ ಅದು ನೋ ಬಾಲ್​ ಆಗಲಿಲ್ಲ. ಮತ್ತು ಸೆಹವಾಗ್​ ಸಹ ಬೌಂಡರಿಗೆ ಅಟ್ಟುವ ಮನಸು ಮಾಡಲಿಲ್ಲ. ಯಪ್ಪಾ ನಿನ್ನ ಸೆಹವಾಸ ಸಾಕು ಎಂದು ಸೆಹವಾಗ್​​ಗೆ ಕೈಮುಗಿದಿದ್ದರು. ಆದರೆ ಅಷ್ಟೊತ್ತಿಗಾಗಲೇ ಸೆಹವಾಗ್​ ಪಾಕಿಸ್ತಾನಕ್ಕೆ ಸರಿಯಾಗಿಯೇ ಡ್ಯಾಮೇಜ್​ ಮಾಡಿದ್ದರು. ಒಟ್ಟು 2 ಲೀಗಲ್​ ಬಾಲ್​, 5 ನೋ ಬಾಲ್​ ಲೆಕ್ಕದಲ್ಲಿ ನಾಲ್ಕು ಬೌಂಡರಿ ಅಂದ್ರೆ 16 ರನ್​ ಮತ್ತು 5 ನೋ ಬಾಲ್​ಗಳಿಂದ 5 ರನ್​ ಕಲೆ ಹಾಕಿ 21 ರನ್​ ಸಂಗ್ರಹಿಸಿದ್ದರು. ಅದಾದ ಮೇಲೂ ಆ ಓವರ್​ನಲ್ಲಿ ಬೇಗಿ ರಾಣಾ ಮೂರು ರನ್​ ನೀಡಿ, ಅದೊಂದೇ ಓವರ್​ನಲ್ಲಿ ಒಟ್ಟು 24 ರನ್​​ ನೀಡಿ, ಓವರ್​ ಮುಗಿಸಿದ್ದರು.

ಇಲ್ಲಿ ಮತ್ತೊಂದು ದಾಖಲೆಯೂ ಇದೆ…! ವೇಗಿ ರಾಣಾ ಸತತವಾಗಿ ನೋ ಬಾಲ್​ಗಳನ್ನು ಎಸೆಯುತ್ತಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದರಲ್ಲಿ ಒಂದೇ ಬಾಲ್​ನಲ್ಲಿ 17 ರನ್​ ಬಾರಿಸಿದ ದಾಖಲೆಯನ್ನೂ ಸೆಹವಾಗ್​ ತಮ್ಮ ಹೆಸರಿಗೆ ಸೇರ್ಪಡೆ ಮಾಡಿಕೊಂಡರು.

(Throwback!Virender Sehwag bagged 21 runs off 2 balls against Pakistan fast bowler Rana Naved ul Hasan who bowled 5 no balls)