WTC Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಿರೀಟ ಯಾರ ಮುಡಿಗೆ? ಭವಿಷ್ಯ ನುಡಿದ ಯುವರಾಜ್; ಕೊಹ್ಲಿ ಪಡೆಗೆ ನಡುಕ!
WTC Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರಲಿದೆ. ಟೀಮ್ ಇಂಡಿಯಾಕ್ಕಿಂತ ನ್ಯೂಜಿಲೆಂಡ್ಗೆ ಹೆಚ್ಚು ಅನುಕೂಲ.
ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನೆರೆಡೇ ವಾರ ಬಾಕಿಯಿದೆ. ಆಂಗ್ಲರ ನೆಲದಲ್ಲಿರುವ ಕೊಹ್ಲಿ ಪಡೆ, ಫೈನಲ್ ಪೈಟ್ನಲ್ಲಿ ಕಿವೀಸ್ ಕಿವಿ ಹಿಂಡುವ ಆತ್ಮವಿಶ್ವಾಸದಲ್ಲಿದ್ದಾರೆ. ಆದ್ರೀಗ ಯುವರಾಜ್ ಸಿಂಗ್ ಆಡಿದ ಅದೊಂದು ಮಾತು, ಕ್ವಾರಂಟೈನ್ನಲ್ಲಿರುವ ಕೊಹ್ಲಿ ಪಡೆಗೆ ನಡುಕ ಹುಟ್ಟಿಸಿದೆ. ಜೂನ್ 18ರಂದು ಇಂಗ್ಲೆಂಡ್ನ ಸೌಂತಾಂಪ್ಟನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಿರೀಟವನ್ನ ಯಾರು ಮುಡಿಗೇರಿಸಿಕೊಳ್ತಾರೆ ಅನ್ನೋ ಕುತೂಹಲ, ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈಗಾಗಲೇ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ತೆರಳಿದ್ದು ಕ್ವಾರಂಟೈನ್ ನಿಯಮವನ್ನ ಪಾಲಿಸುತ್ತಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಆಂಗ್ಲರ ನೆಲದಲ್ಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡ್ತಿದೆ. ಈ ಮಧ್ಯೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಿಕ್ಸರ್ ಕಿಂಗ್ ಯುವರಾಜ್ ಅವರು ಕೊಹ್ಲಿ ಪಡೆ ಬೆಚ್ಚಿ ಬೀಳುವಂತ ಹೇಳಿಕೆಯೊಂದನ್ನ ನೀಡಿದ್ದಾರೆ..
3 ಪಂದ್ಯಗಳ ಸರಣಿ ಆಡಿಸಿದ್ರೆ ಕೊಹ್ಲಿ ಪಡೆಗೆ ಲಾಭವಾಗ್ತಿತ್ತು! ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವಿಜೇತರನ್ನ ಒಂದು ಪಂದ್ಯದಲ್ಲಿ ನಿರ್ಧರಿಸುವ ಬದಲು, ಮೂರು ಪಂದ್ಯಗಳ ಮೂಲಕ ನಿರ್ಧರಿಸಬಹುದಿತ್ತು ಎಂದಿದ್ರು. ಶಾಸ್ತ್ರಿ ಮಾತಿಗೆ ಬೆಂಬಲ ಸೂಚಿಸಿರುವ ಯುವರಾಜ್ ಸಿಂಗ್, ಕೊಹ್ಲಿ ಪಡೆಗಾಗುವ ಹಿನ್ನಡೆಯನ್ನ ಬಿಚ್ಚಿಟ್ಟಿದ್ದಾರೆ.
ನ್ಯೂಜಿಲೆಂಡ್ಗೆ ಅನುಕೂಲ ಹೆಚ್ಚು ನನ್ನ ಪ್ರಕಾರ 3 ಪಂದ್ಯಗಳಿರಬೇಕಿತ್ತು. ಯಾಕಂದ್ರೆ ಮೊದಲ ಪಂದ್ಯವನ್ನ ಸೋತ್ರೆ, ಉಳಿದೆರಡು ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡಬಹುದು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರಲಿದೆ. ಟೀಮ್ ಇಂಡಿಯಾಕ್ಕಿಂತ ನ್ಯೂಜಿಲೆಂಡ್ಗೆ ಹೆಚ್ಚು ಅನುಕೂಲ. ಹಾಗೇ ಇಂಗ್ಲೆಂಡ್ ಪಿಚ್ನ ಸ್ವರೂಪ ಕಿವೀಸ್ ಆಟಗಾರರಿಗೆ ತಿಳಿಯಲಿದೆ. ಆದ್ರೆ ಟೀಮ್ ಇಂಡಿಯಾ ನೇರವಾಗಿ ಆಡೋದ್ರಿಂದ, ಅನಾನೂಕೂಲ ಹೆಚ್ಚಾಗಿರಲಿದೆ. – ಯುವರಾಜ್ ಸಿಂಗ್, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ
ನಿಜ.. ಯುವರಾಜ್ ಸಿಂಗ್ ಹೇಳಿರೋ ಪ್ರಕಾರ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಿ ಆಂಗ್ಲರ ನೆಲದಲ್ಲಿ ಲಯ ಕಂಡುಕೊಂಡಿದೆ. ಇನ್ನು ಟೀಮ್ ಇಂಡಿಯಾ ಮೂರು ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯವನ್ನಾಡ್ತಿದೆ. ಹೀಗಾಗಿ ಕೇನ್ ವಿಲಿಯಮ್ಸನ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ, ಕೊಹ್ಲಿ ಪಡೆಗಿಂತ ಹೆಚ್ಚಿನ ರಿದಮ್ ಹೊಂದಿರಲಿದೆ.
ಟೀಮ್ ಇಂಡಿಯಾ ಕ್ವಾರಂಟೈನ್ ಮುಗಿದ ಬಳಿಕ 8 ರಿಂದ 10 ಪ್ರಾಕ್ಟೀಸ್ ಸೆಷನ್ಗಳನ್ನ ಮಾತ್ರ ಮಾಡಲಿದೆ. ಆದ್ರಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ, ನ್ಯೂಜಿಲೆಂಡ್ಗೆ ಸಿಕ್ಕಿರುವ ಅನುಭವಕ್ಕಿಂತ ಕಡಿಮೆಯೇ. ಯುವಿ ಲೆಕ್ಕಾಚಾರ ಸರಿಯಾಗೇ ಇದ್ದು, ಕ್ವಾರಂಟೈನ್ನಲ್ಲಿರುವ ಕೊಹ್ಲಿ ಪಡೆಗೆ ಒಳಗೊಳಗೆ ನಡುಕ ಶುರುವಾಗಿದೆ.
ಇದನ್ನೂ ಓದಿ: ನಾಯಕತ್ವ ವಿಚಾರದಲ್ಲಿ ಕೊಹ್ಲಿ, ಸರ್ಫರಾಜ್ ನಡುವೆ ಸಾಮ್ಯತೆ ಇದೆ.. ಆದರೆ ಧೋನಿ ಹಾಗಲ್ಲ; ಫಾಫ್ ಡು ಪ್ಲೆಸಿಸ್
WTC Final: ವಿಶ್ವ ಟೆಸ್ಟ್ ಚಾಂಪಿಯನ್ ಆಗುವ ತಂಡವನ್ನು ಹೆಸರಿಸಿದ ಬ್ರೆಟ್ ಲೀ; ಗೆಲುವಿಗೆ ನೀಡಿದ ಕಾರಣವೇನು ಗೊತ್ತಾ?