ಮಾತು ಉಳಿಸಿಕೊಂಡ ಬಿಸಿಸಿಐ; ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕೊನೆಗೂ ಸಿಗ್ತು ವಿಶ್ವಕಪ್ ಬಹುಮಾನದ ಹಣ
ಫೈನಲ್‌ಗೆ ತಲುಪಿದ್ದಕ್ಕಾಗಿ ಭಾರತೀಯ ತಂಡವು 5 ಲಕ್ಷ ಡಾಲರ್‌ಗಳನ್ನು ಅಂದರೆ ಸುಮಾರು 3.5 ಕೋಟಿ ರೂ.ಗಳನ್ನು ಬಹುಮಾನವಾಗಿ ಪಡೆದಿತ್ತು.
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಅವರು ಕೆಲವೇ ದಿನಗಳ ಹಿಂದೆ ಇಂಗ್ಲೆಂಡ್ ತಲುಪಿದ್ದರು. ಅಲ್ಲಿ ಟೆಸ್ಟ್ ಸೇರಿದಂತೆ ಏಕದಿನ ಮತ್ತು ಟಿ 20 ಸರಣಿಗಳನ್ನು ಆಡಬೇಕಾಗಿದೆ. ಆದರೆ ಈ ಸರಣಿಯ ಸ್ವಲ್ಪ ಮುಂಚೆ, ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ದೊಡ್ಡ ಬಹುಮಾನ ಒಂದು ಸಿಕ್ಕಿತು. ಬಿಸಿಸಿಐ, ಆಟಗಾರ್ತಿಯರಿಗೆ ನೀಡದೆ ಬಾಕಿ ಉಳಿಸಕೊಂಡಿದ್ದ ಎಲ್ಲಾ ಬಾಕಿಗಳನ್ನು ಪಾವತಿಸಿದೆ. ಏಳು ಎಂಟು ದಿನಗಳ ಹಿಂದೆ ಭಾರತೀಯ ಮಂಡಳಿ ಕಳೆದ ವರ್ಷದ ಟಿ 20 ವಿಶ್ವಕಪ್‌ನ ಬಾಕಿ ಹಣವನ್ನು ಆಟಗಾರರ ಖಾತೆಗೆ ಜಮಾ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ, ಮಾರ್ಚ್ 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪಂದ್ಯದ ಶುಲ್ಕವನ್ನು ಸಹ ಪಾವತಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಈ ಸುದ್ದಿಯನ್ನು ನೀಡಿದೆ.
ಸುಮಾರು 20 ಲಕ್ಷ ರೂಪಾಯಿಗಳು ಕಳೆದ ತಿಂಗಳು ಅಂದರೆ ಮೇ ತಿಂಗಳಲ್ಲಿ ಬಿಸಿಸಿಐ ಭಾರತೀಯ ಮಹಿಳಾ ತಂಡದ ಎಲ್ಲ ಆಟಗಾರರನ್ನು ಟಿ 20 ವಿಶ್ವಕಪ್ ಬಹುಮಾನದ ಹಣವನ್ನು ಸಂಗ್ರಹಿಸಲು ಬಿಲ್ ಕಳುಹಿಸುವಂತೆ ಕೇಳಿಕೊಂಡಿತ್ತು. ಆಟಗಾರರ ಬಿಲ್‌ಗಳು ಬಂದ ಕೂಡಲೇ, ಒಂದು ಅಥವಾ ಎರಡು ದಿನಗಳಲ್ಲಿ ಹಣವನ್ನು ನೀಡಲಾಗಿದೆ. ಮೂಲವೊಂದನ್ನು ಉಲ್ಲೇಖಿಸಿ, ಮಹಿಳಾ ಆಟಗಾರರಿಗೆ ತಲುಪಬೇಕಿದ್ದ ಎಲ್ಲಾ ಹಣವನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. 2020 ರ ಟಿ 20 ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಫೈನಲ್‌ಗೆ ತಲುಪಿತು. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಯಲ್ಲಿ ಆಡುವ ಆಟಗಾರರಿಗೆ ತಲಾ 26 ಸಾವಿರ ಡಾಲರ್ ಅಂದರೆ ಬಹುಮಾನದ ಹಣವಾಗಿ ಸುಮಾರು 20 ಲಕ್ಷ ರೂಪಾಯಿಗಳು ದೊರೆತಿತ್ತು.
ಆಸ್ಟ್ರೇಲಿಯಾ ಒಂದು ತಿಂಗಳಲ್ಲಿ ಹಣವನ್ನು ವಿತರಿಸಿತ್ತು ಕಳೆದ ತಿಂಗಳು, ಬ್ರಿಟಿಷ್ ಪತ್ರಿಕೆ ವರದಿ ಮಾಡಿದ್ದು, ಒಂದು ವರ್ಷದ ನಂತರವೂ ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಹಣ ನೀಡಿಲ್ಲ. ಫೈನಲ್‌ಗೆ ತಲುಪಿದ್ದಕ್ಕಾಗಿ ಭಾರತೀಯ ತಂಡವು 5 ಲಕ್ಷ ಡಾಲರ್‌ಗಳನ್ನು ಅಂದರೆ ಸುಮಾರು 3.5 ಕೋಟಿ ರೂ.ಗಳನ್ನು ಬಹುಮಾನವಾಗಿ ಪಡೆದಿತ್ತು ಎಂದು ಹೇಳಲಾಗಿತ್ತು. ವರದಿಯ ಪ್ರಕಾರ, ಯಾವುದೇ ಐಸಿಸಿ ಕಾರ್ಯಕ್ರಮದ ನಂತರ, ಅಂತಾರಾಷ್ಟ್ರೀಯ ಸಂಸ್ಥೆಯಿಂದ ಬಹುಮಾನದ ಹಣವನ್ನು ಒಂದು ವಾರದೊಳಗೆ ಸಂಬಂಧಪಟ್ಟ ತಂಡದ ಕ್ರಿಕೆಟ್ ಮಂಡಳಿಗೆ ನೀಡಲಾಗುತ್ತದೆ.
ಅವರ ಬಹುಮಾನದ ಹಣವನ್ನು ಒಂದು ತಿಂಗಳೊಳಗೆ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ವಿತರಿಸಲಾಯಿತು. ಆಸ್ಟ್ರೇಲಿಯಾಕ್ಕೆ ಸುಮಾರು 7 ಕೋಟಿ ರೂಪಾಯಿಗಳು ($ 1 ಮಿಲಿಯನ್) ಸಿಕ್ಕಿತು. ಇದರಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪರವಾಗಿ 4 ಕೋಟಿ ರೂ. ಹೆಚ್ಚು ಹಣವನ್ನು ಸೇರಿಸಿ ಆಟಗಾರ್ತಿಯರಿಗೆ ಹಂಚಿತ್ತು. ಈ ಮೊತ್ತವನ್ನು 2018 ರ ಪುರುಷರ ಟಿ 20 ವಿಶ್ವಕಪ್‌ನ ಬಹುಮಾನದ ಮೊತ್ತಕ್ಕೆ ಸಮನಾಗಿ 2020 ರ ಏಪ್ರಿಲ್‌ನಲ್ಲಿ ತನ್ನ ತಂಡಕ್ಕೆ ವಿತರಿಸಿತ್ತು. ಇದರ ನಂತರ ಬಿಸಿಸಿಐ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದವು. ಈ ಸುದ್ದಿಯ ನಂತರ, ಭಾರತೀಯ ಮಂಡಳಿ ಕ್ರಮ ಕೈಗೊಂಡು ಆಟಗಾರರ ಹಣವನ್ನು ಹಂಚಿಕೆ ಮಾಡಿದೆ.