Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್

| Updated By: ಝಾಹಿರ್ ಯೂಸುಫ್

Updated on: Jul 22, 2021 | 2:54 PM

Tokyo Olympics 2021: ವಿಶ್ವ ಮಹಿಳಾ ಬಾಕ್ಸಿಂಗ್‌ಶಿಪ್‌ನಲ್ಲಿ 6 ಚಿನ್ನದ ಪದಕಗಳನ್ನು ಗೆದ್ದಿರುವ ಮೇರಿ ಕೋಮ್‌ 2 ವಿಶ್ವ ದಾಖಲೆಗಳನ್ನು ಕೂಡ ಬರೆದಿದ್ದಾರೆ. ಅವುಗಳೆಂದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್‌ ಎಂಬ ದಾಖಲೆ ಮೇರಿ ಕೋಮ್ ಹೆಸರಿನಲ್ಲಿದೆ.

Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್
Mary Kom
Follow us on

ಟೋಕಿಯೋ ಒಲಿಂಪಿಕ್ಸ್​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕೂಡ ಹಲವು ನಿರೀಕ್ಷೆಗಳೊಂದಿಗೆ 125 ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಪದಕಕ್ಕಾಗಿ ಪೈಪೋಟಿ ನೀಡಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತ ತಂಡವನ್ನು ನಾಲ್ವರು ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ. ಅವರಲ್ಲಿ ಎಂ ಮೇರಿ ಕೋಮ್ ಕೂಡ ಇರುವುದು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದೆ. 38 ವರ್ಷದ ಮೇರಿ ಕೋಮ್ ಎರಡನೇ ಒಲಿಂಪಿಕ್ ಪದಕದ ಮೇಲೆ ಕಣ್ಣೀಟ್ಟಿದ್ದಾರೆ. ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅವರು ಅಪಾರ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕಾಗಿ ಟೋಕಿಯೋದಲ್ಲಿ ಕಠಿಣ ಅಭ್ಯಾಸಕ್ಕಾಗಿ ಅಣಿಯಾಗುತ್ತಿದ್ದಾರೆ.

ಈ ನಡುವೆ ಮೋರಿ ಕೋಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಆಹಾರದ ಮುಂದೆ ಪ್ರಾರ್ಥಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಲೆಜೆಂಡ್ ಬಾಕ್ಸರ್ ಇದು ಬೇಕ್​​ಫಾಸ್ಟ್ ಸಮಯ ಎಂಬ ಶೀರ್ಷಿಕೆ ನೀಡಿದ್ದಾರೆ. ಇದೀಗ ಮೇರಿ ಕೋಮ್ ಅವರು ಶೇರ್ ಮಾಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲೇ ಹೋದರೂ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದೀರಾ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮೇರಿ ಕೋಮ್ ಅವರ ಆರೋಗ್ಯಕರ ಉಪಾಹಾರದ ಫೋಟೋದಲ್ಲಿ ತಾಜಾ ಕಿತ್ತಳೆ ಹಣ್ಣು, ಬೇಯಿಸಿದ ಮೊಟ್ಟೆಗಳು, ಸಾಸೇಜ್‌ಗಳು ಮತ್ತು ಬೇಯಿಸಿದ ತರಕಾರಿಗಳು ಸೇರಿವೆ. ಹಾಗೆಯೇ ಸಾಂಪ್ರದಾಯಿಕ ಮಿಸೊ ಸೂಪ್ ಬೌಲ್ ಅನ್ನು ಸಹ ನಾವು ಗುರುತಿಸಬಹುದು, ಇದು ಜಪಾನ್‌ನಲ್ಲಿ ತಿನ್ನುವ ವಿಶಿಷ್ಟ ಉಪಹಾರ ಭಕ್ಷ್ಯವಾಗಿದೆ.

ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆಯದಿರೋಣ..ಜಪಾನ್ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೇರಿ ಕೋಮ್ ಊಟಕ್ಕೆ ಕೈ ಮುಗಿಯುತ್ತಿರುವ ದೃಶ್ಯ ಇದು. ಮೇರಿ ಕೋಮ್ ಅವರು ಪದಕದೊಂದಿಗೆ ಭಾರತಕ್ಕೆ ಹಿಂತಿರುಗಲಿ, ನಮ್ಮ ದೇಶದ ಸಂಸ್ಕೃತಿಯನ್ನು ಹಾಗೂ ಕೀರ್ತಿ ಪತಾಕೆಯನ್ನು ಜಪಾನ್​ನಾದ್ಯಂತ ಹಾರಿಸಲಿ ಎಂದು ಹಲವರು ಹಾರೈಸಿದ್ದಾರೆ.

ವಿಶ್ವ ಮಹಿಳಾ ಬಾಕ್ಸಿಂಗ್‌ಶಿಪ್‌ನಲ್ಲಿ 6 ಚಿನ್ನದ ಪದಕಗಳನ್ನು ಗೆದ್ದಿರುವ ಮೇರಿ ಕೋಮ್‌ 2 ವಿಶ್ವ ದಾಖಲೆಗಳನ್ನು ಕೂಡ ಬರೆದಿದ್ದಾರೆ. ಅವುಗಳೆಂದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್‌ ಎಂಬ ದಾಖಲೆ ಮೇರಿ ಕೋಮ್ ಹೆಸರಿನಲ್ಲಿದೆ. ಅದರ ಜೊತೆ ಒಟ್ಟು 6 ಚಿನ್ನ 1 ಬೆಳ್ಳಿ ಗೆದ್ದಿರುವ ಮೇರಿ ಅತಿಹೆಚ್ಚು ಪದಕಗಳನ್ನು ಗೆದ್ದ ಮಹಿಳಾ ಬಾಕ್ಸರ್‌ ಎನಿಸಿಕೊಂಡಿದ್ದಾರೆ. 38 ವರ್ಷದ ಮೇರಿ ಕೋಮ್ ಮೇಲೆ ಟೋಕಯೋ ಒಲಿಂಪಿಕ್ಸ್​ನಲ್ಲಿ ಅಪಾರ ನಿರೀಕ್ಷೆಗಳಿದ್ದು, ಈ ನಿರೀಕ್ಷೆಗಳನ್ನು ಮೆಟ್ಟಿ ನಿಂತು ಚಿನ್ನದ ಪದಕಗಳೊಂದಿಗೆ ಅವರು ಹಿಂತಿರುಗಲಿ ಎಂದು ಹಾರೈಸೋಣ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

 

ಇದನ್ನೂ ಓದಿ: Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ