AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಕೊವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಪ್ರತಿ ದೇಶದ ಕೆಲವು ಅಥ್ಲೀಟ್​ಗಳಿಗೆ ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರ ಮೇರಿ ಕೋಮ್ ಮತ್ತು ಮನ್ಪ್ರೀತ್​ ಸಿಂಗ್ ತಿರಂಗವನ್ನು ಹಿಡಿಯಲಿದ್ದಾರೆ ಮತ್ತು ಅವರಿಬ್ಬರು ಮೈದಾನದಲ್ಲಿ ಪ್ರತ್ಯಕ್ಷರಿರುತ್ತಾರೆ.

Tokyo Olympics: ಕೊವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಪ್ರತಿ ದೇಶದ ಕೆಲವು ಅಥ್ಲೀಟ್​ಗಳಿಗೆ ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ
ಮೇರಿ ಕೋಮ್ ಮತ್ತು ಮನ್ಪ್ರೀರ್ ಸಿಂಗ್
TV9 Web
| Updated By: ಆಯೇಷಾ ಬಾನು|

Updated on: Jul 23, 2021 | 8:56 AM

Share

ವಿಶ್ವದ ಅತ್ಯುನ್ನತ, ಮೆಗಾ ಕ್ರೀಡಾಕೂಟ ಟೊಕಿಯೋ ಒಲಂಪಿಕ್ಸ್ ಆರಂಭಕ್ಕ ಕ್ಷಣಗಣನೆ ಶುರುವಾಗಿದೆ. ನಾಳೆ (ಶುಕ್ರವಾರ) ಭಾರತೀಯ ಕಾಲಮಾನದ ಪ್ರಕಾರ ಸಮಯಂಕಾಲ 4.30 ಕ್ಕೆ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡಾಕೂಟ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದ್ದು ಜಪಾನಿನ ರಾಜಧಾನಿಯಲ್ಲಿ ಎಲ್ಲ ಸಿದ್ಧತೆಗಳು ಪೂರ್ತಿಗೊಂಡಿವೆ. ಸಾಮಾನ್ಯವಾಗಿ ಒಲಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಎಲ್ಲ ರಾಷ್ಟ್ರಗಳ ಅಥ್ಲೀಟ್​ಗಳು ತಮ್ಮ ತಮ್ಮ ದೇಶಗಳ ಧ್ವಜಗಳ್ನು ಹಿಡಿದು ಮೇನ್ ಸ್ಟೇಡಿಯಂ ಪ್ರವೇಶಿಸುತ್ತಾರೆ. ಆದರೆ ಟೊಕಿಯೋ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಸ್ಪರ್ಧಿಗಳು ಮೈದಾನದೊಳಕ್ಕೆ ಏಕಕಾಲಕ್ಕೆ ಬಿಡದಿರಲು, ಕ್ರೀಡಾಕೂಟದ ಸಂಘಟನಾ ಸಮಿತಿ ನಿರ್ಧರಿಸಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ದೇಶಗಳ ಪೈಕಿ ಅವರ ಕಂಟಿಂಜೆಂಟ್ ಗಾತ್ರದ ಆಧಾರದ ಮೇಲೆ ಇಂತಿಷ್ಟು ಅಥ್ಲೀಟ್​ಗಳು ಓಪನಿಂಗ್ ಸಮಾರಂಭದಲ್ಲಿ ಭಾಗವಹಿಸಬಹುದೆನ್ನುವ ನಿರ್ದೇಶನವನ್ನು ಆಯಾ ರಾಷ್ಟ್ರಗಳಿಗೆ ಸಂಘಟನಾ ಸಮಿತಿ ನೀಡಿದೆ.

ಭಾರತದ ಪರವಾಗಿ ಭಾಗವಹಿಸಬಹುದಾದ ಅಥ್ಲೀಟ್​ಗಳ ಸಂಖ್ಯೆಯನ್ನು ಭಾರತೀಯ ಒಲಂಪಿಕ್ ಸಮಿತಿ (ಐಓಎ) ಪ್ರಕಟಿಸಿದೆ. ಐಓಎ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ನಾಳಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಬೇರೆ ಬೇರೆ ಕ್ರೀಡೆಗಳ ಭಾರತೀಯ ಪ್ರತಿನಿಧಿಗಳ ಯಾದಿ ಕೆಳಗಿನಂತಿದೆ.

ಭಾಗವಹಿಸುವ ಅಥ್ಲೀಟ್​ಗಳ ಸಂಖ್ಯೆ ಮತ್ತು ಅವರು ಪ್ರತಿನಿಧಿಸುತ್ತಿರುವ ಕ್ರೀಡೆ

1. ಹಾಕಿ-1 2. ಬಾಕ್ಸಿಂಗ್-8 3. ಟೇಬಲ್ ಟೆನ್ನಿಸ್-4 4. ರೋಯಿಂಗ್-2 5. ಜಿಮ್ನಾಸ್ಟಿಕ್ಸ್-2 6. ಸ್ವಿಮ್ಮಿಂಗ್-1 7. ಸೇಲಿಂಗ್-4 8. ಫೆನ್ಸಿಂಗ್-1 9. ಅಧಿಕಾರಿಗಳು-6

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರ ಮೇರಿ ಕೋಮ್ ಮತ್ತು ಮನ್ಪ್ರೀತ್​ ಸಿಂಗ್ ತಿರಂಗವನ್ನು ಹಿಡಿಯಲಿದ್ದ್ದಾರೆ ಮತ್ತು ಅವರಿಬ್ಬರು ಮೈದಾನದಲ್ಲಿ ಪ್ರತ್ಯಕ್ಷರಿರುತ್ತಾರೆ.

ಅಂದಹಾಗೆ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಭಾರತೀಯ ಅಥ್ಲೀಟ್​ಗಳು ಮತ್ತು ಅಧಿಕಾರಗಳ ಸಂಖ್ಯೆ 28 (ಇದು ಬದಲಾಗುವ ಸಾಧ್ಯತೆಯಿದೆ) ಆಗಿದೆ.

ಭಾಗವಹಿಸದ ಭಾರತೀಯ ಅಥ್ಲೀಟ್​ಗಳು:

1. ಆರ್ಚರಿ 2. ಜುಡೋ 3. ಬ್ಯಾಡ್ಮಿಂಟನ್ 4. ವೇಟ್​ಲಿಫ್ಟಿಂಗ್ 5. ಟೆನ್ನಿಸ್ 6. ಹಾಕಿ (ಪುರುಷ ಮತ್ತು ಮಹಳೆಯರು) 7. ಶೂಟಿಂಗ್

ಮೇಲೆ ತಿಳಿಸಿದ ಅಥ್ಲೀಟ್​ಗಳ ಮ್ಯಾಚ್​ಗಳು 24 ನೇ ತಾರೀಖು ನಡೆಯುವುದು ನಿಗದಿಯಾಗಿರುವುದರಿಂದ ಮತ್ತು ಇನ್ನೂ ಕೆಲವರು 24ರಂದು ಅಭ್ಯಾಸದಲ್ಲಿ ತೊಡಗುವುದರಿಂದ ಉದ್ಘಾಟನಾ ಸಮಾರಂಭದಲ್ಲಿ ಬಾಗವಹಿಸಲಾರರು ಎಂದು ಐಓಎ ಹೇಳಿದೆ

ಸ್ಟೇಡಿಯಂನಲ್ಲಿ ಮಾರ್ಚ್ ಪಾಸ್ಟ್ ಜಪಾನಿ ಅಕ್ಷರಾನುಕ್ರಮದ ಪ್ರಕಾರ ನಡೆಯಲಿದ್ದು ಭಾರತದ ಸಂಖ್ಯೆ 21 ಅಗಿದೆ ಎಂದು ಐಓಎ ತಿಳಿಸಿದೆ.

ಇದನ್ನೂ ಓದಿ: Tokyo Olympics: ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ; ಪ್ರತಿ ದೇಶದ 6 ಅಧಿಕಾರಿಗಳಿಗೆ ಮಾತ್ರ ಪ್ರವೇಶ.. 15 ದೇಶಗಳ ನಾಯಕರು ಭಾಗಿ