ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಇತ್ತ ಮಹಿಳೆಯರ ಕುಸ್ತಿ 50 ಕೆಜಿ ವಿಭಾಗದಲ್ಲಿ ಭಾರತದ ಸೀಮಾ ಬಿಸ್ಲಾ ಅವರು ಸೋಲು ಕಂಡಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಪಂದ್ಯದಲ್ಲಿ ಟುನೀಷಿಯಾದ ಸರ್ರಾ ಹಮ್ದಿ ವಿರುದ್ಧ 3-1 ಅಂತರದಿಂದ ಸೋತು ಟೋಕಿಯೊ ಒಲಿಂಪಿಕ್ಸ್ನ ಆರಂಭಿಕ ಪಂದ್ಯವನ್ನು ಕಳೆದುಕೊಂಡಿದ್ದಾರೆ.
ಪುರುಷರ 65 ಕೆಜಿ ವಿಭಾಗದ ಫ್ರೀಸ್ಟೈಲ್ನಲ್ಲಿ ಕ್ರಿಗಿಸ್ತಾನದ ಎರ್ನಾಜರ್ ಅಕ್ಮತಾಲೀವ್ ವಿರುದ್ಧ ಭಜರಂಗ್ ಅವರು 3-3 ಅಂತರದ ಸಮಬಲ ಸಾಧಿಸಸಿದರು. ಆದರೆ, ಎರಡನೇ ಅವದಿಯಲ್ಲಿ ಹೆಚ್ಚು ಅಂಕ ಗಳಿಸಿದ ಆಧಾರದ ಮೇಲೆ ಭಜರಂಗ್ಗೆ ಗೆಲುವು ದಕ್ಕಿತು.
#TeamIndia | #Tokyo2020 | #Wrestling
Men’s Freestyle 65kg 1/8 Finals Results#BajrangPunia wins his debut #Olympics bout against Ernazer Akmataliev and moves to 1/4 Finals. #AllTheBest @BajrangPunia? #RukengeNahi #EkIndiaTeamIndia #Cheer4India pic.twitter.com/dBAWT92SHt— Team India (@WeAreTeamIndia) August 6, 2021
Published On - 9:23 am, Fri, 6 August 21