AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಒಲಿಂಪಿಕ್ಸ್​ನ ಚೊಚ್ಚಲ ಹಾಕಿ ಪದಕಕ್ಕೆ ಭಾರತೀಯ ಮಹಿಳೆಯರ ಹೋರಾಟ

ಪ್ರಥಮ ಬಾರಿಗೆ ಸೆಮಿಫೈನಲ್‌ ಪ್ರವೇಶ ಪಡೆದುಕೊಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಅರ್ಜೇಂಟಿನಾ ವಿರುದ್ಧ ಸೋಲು ಕಂಡಿತು.

Tokyo Olympics: ಒಲಿಂಪಿಕ್ಸ್​ನ ಚೊಚ್ಚಲ ಹಾಕಿ ಪದಕಕ್ಕೆ ಭಾರತೀಯ ಮಹಿಳೆಯರ ಹೋರಾಟ
ಭಾರತೀಯ ಮಹಿಳಾ ಹಾಕಿ ತಂಡ
TV9 Web
| Updated By: Vinay Bhat|

Updated on: Aug 06, 2021 | 7:05 AM

Share

ಗುರುವಾರವಷ್ಟೆ ಭಾರತ ಪುರುಷರ ಹಾಕಿ ತಂಡ ಪ್ಲೇ ಆಫರ್​​ನಲ್ಲಿ ಜರ್ಮನಿ ವಿರುದ್ಧ ರೋಚಕ ಜಯ ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿ ವಿಶೇಷ ಸಾಧನೆ ಮಾಡಿತು. ಸದ್ಯ ಈಗ ಭಾರತ ಮಹಿಳಾ ಹಾಕಿ ತಂಡದ ಸರದಿ. ಕಂಚಿನ ಪದಕಕ್ಕಾಗಿ ರಾಣಿ ರಾಮ್​ಪಾಲ್ ಪಡೆ ಇಂದು ಗ್ರೇಟ್ ಬ್ರಿಟನ್ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿ ನಿಂತಿದೆ. ಭಾರತ ಮಹಿಳಾ ಹಾಕಿ ತಂಡ ಗೆದ್ದು ಪದಕ ಪಡೆದಿದ್ದೆ ಆದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ವನಿತೆಯರಿಗೆ ಸಿಕ್ಕ ಚೊಚ್ಚಕ ಪದಕ ಇದಾಗಲಿದೆ.

ಪ್ರಥಮ ಬಾರಿಗೆ ಸೆಮಿಫೈನಲ್‌ ಪ್ರವೇಶ ಪಡೆದುಕೊಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಅರ್ಜೇಂಟಿನಾ ವಿರುದ್ಧ ಸೋಲು ಕಂಡಿತು.

ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಯಿತು.

ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತೀಯ ಮಹಿಳಾ ತಂಡಕ್ಕಿತ್ತು. ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಈ ಪದಕ ಮುಡಿಗೇರಿಸಿಕೊಳ್ಳಲು ಭಾರತೀಯ ತಂಡ ಹವಣಿಸುತ್ತಿದೆ. ಮೂರನೇ ಸ್ಥಾನದಕ್ಕಾಗಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಆಡಲಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು ಇದರಲ್ಲಿ ಗೆದ್ದರೆ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕ ಕೊರಳಿಗೇರಿಸಿಕೊಳ್ಳಲಿದೆ.

ಒಲಂಪಿಕ್ಸ್​ನಲ್ಲಿ ಗೋಲ್ಡ್ ಸಿಗದಿದ್ದರೇನಂತೆ, ವಿರಾಟ್ ಕೊಹ್ಲಿ ‘ಗೋಲ್ಡನ್ ಡಕ್’ ಸಂಪಾದಿಸಿದ್ದಾರೆ: ನೆಟ್ಟಿಗರಿಂದ ಟ್ರೋಲ್ ಆದ ಚೀಕು ಭೈಯ್ಯ!

IND vs ENG: ಮೊದಲ ಟೆಸ್ಟ್​ಗೆ ವರುಣನ ಅವಕೃಪೆ; ಕೈಕೊಟ್ಟ ಕೊಹ್ಲಿ, ರಹಾನೆ, ಪೂಜಾರ.. ರಾಹುಲ್ ಏಕಾಂಗಿ ಹೋರಾಟ

(Tokyo Olympics 2021 India India womens hockey play for bronze)

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್