Tokyo Olympics: ಹಾಕಿ ಸ್ಟಿಕ್ ಹಿಡಿದ ನಾರಿಯರ ಗೆಲುವಿನೊಂದಿಗಿದೆ ಕಣ್ಣೀರ ಕಥೆ; ಒಬ್ಬೊಬ್ಬರದು ಒಂದೊಂದು ಕಹಾನಿ

Tokyo Olympics: ತನ್ನ ತಂದೆ- ತಾಯಿ ಬಂದು ಬಳಗದವರ ಕಡೆಯಿಂದ ಯಾವ ಬೆಂಬಲನೂ ಸಿಗದೆ ಮುರಿದ‌ ಸ್ಟಿಕ್​ನಲ್ಲೇ ಆಟ ಆಡಿ ಇಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಮಿಂಚಿದ್ದಾರೆ.

Tokyo Olympics: ಹಾಕಿ ಸ್ಟಿಕ್ ಹಿಡಿದ ನಾರಿಯರ ಗೆಲುವಿನೊಂದಿಗಿದೆ ಕಣ್ಣೀರ ಕಥೆ; ಒಬ್ಬೊಬ್ಬರದು ಒಂದೊಂದು ಕಹಾನಿ
ಮಹಿಳಾ ಹಾಕಿ ತಂಡ
Follow us
ಪೃಥ್ವಿಶಂಕರ
|

Updated on:Aug 05, 2021 | 9:43 PM

ಸತತ 41ವರ್ಷಗಳಿಂದ ಟೀಕೆ, ಅವಮಾನಗಳನ್ನು ಎದುರಿಸುತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ ಅನ್ನು ಪ್ರವೇಶಿಸುವುದು ಕನಸಿನ ಮಾತಾಗಿತ್ತು. ಒಂದರ್ಥದಲ್ಲಿ ಭಾರತದ ದೇಶೀಯ ಕ್ರೀಡೆಯಾದ ಹಾಕಿಯು ಮರೆಯಾಗಿ ಹೋಗಿತ್ತು ಎಂದೇ ಹೇಳಬಹುದು. ಪ್ರತಿ ಬಾರಿ ನಿರಾಸೆಯಿಂದ ತೆರಳುತ್ತಿದ್ದ ತಂಡಕ್ಕೆ ಉತ್ತಮ ತರಬೇತುದಾರರ ಅಗತ್ಯವಿತ್ತು. ಅದರಲ್ಲೂ ಮಹಿಳೆಯರ ಹಾಕಿ‌ ತಂಡದ ಮೇಲೆ ಭರವಸೆಯನ್ನೇ ಬಿಟ್ಟಿದ್ದ ಭಾರತೀಯರಿಗೆ ಮತ್ತೆ ತನ್ನತ್ತ ತಿರುಗುವಂತೆ‌ ಮಾಡಿದೆ. ಪದಕಗಳ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ಅಭಿಮಾನಿಗಳು, ಇದೀಗ ಭಾರತದ ಹಾಕಿ ತಂಡ ಇತಿಹಾಸವನ್ನೇ ಸೃಷ್ಟಿಸಿದೆ. ಈ ಬಾರಿಯ ಕ್ರೀಡಾ ಪಟುಗಳು ಅಚ್ಚರಿ ಮೇಲೆ ಅಚ್ಚರಿ ಮೂಡಿಸಿದ್ದಾರೆ. ಇವರ‌ ಚೊಚ್ಚಲ ಆಟದ ನಡುವೆಯೂ ಹೇಳಲಾರದ ನೋವಿದೆ. ಹಾಕಿ ಸ್ಟಿಕ್ ಹಿಡಿದ ನಾರಿಯರ ಗೆಲುವಿನೊಂದಿಗಿದೆ ಕಣ್ಣೀರ ಕಥೆ. ಈ ಸಾಧಿಕಿಯರ ಹೋರಾಟದ ಬದುಕನ್ನು ಅನಾವರಣ ಮಾಡಿದ್ದಾರೆ ಯುವ ಬರಹಗಾರ್ತಿ ವೈಶಾಲಿ ಶೆಟ್ಟಿ ಪೂವಳ. 

ರಾಂಪಾಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿರುವ 26 ವರ್ಷದ ಆಟಗಾರ್ತಿ ರಾಂಪಾಲ್. ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂಡದ ಹಿನ್ನೀರಿನ ಪಟ್ಟಣದಲ್ಲಿ ಜೀವನ ಸಾಗಿಸುವ‌ ಇವರು ಸಾಧಾರಣ ಹಿನ್ನೆಲೆಯಿಂದ ಬಂದವರು. ತನ್ನ ತಂದೆಯ ಬೆಂಬಲವಿಲ್ಲದ ಕಾರಣ ಅವರು ಕಾರ್ಟ್ ಎಳೆದು ಎಸೆಯುತ್ತಿದ್ದರು. ತಾಯಿ ಮನೆಯ ಕೆಲಸ ಮಾಡುತ್ತಿದ್ದು ಅಪ್ಪಟ ಗೃಹಿಣಿಯಾಗಿದ್ದಾರೆ. ಬಹಳಷ್ಟು ಕಷ್ಟಕರವಾದ ಜೀವನ ಮುನ್ನಡೆಸುತ್ತಿದ್ದ ರಾಂಪರ್ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದರು.

ತನ್ನ ಮುರಿದ‌ ಹಾಕಿ ಸ್ಟಿಕ್​ಗಳಿಂದಲೇ ಹಾಕಿ ಅಭ್ಯಾಸ ಮಾಡುತ್ತಿದ್ದರು. ರಾಂಪಲ್ ಅವರು ಹತ್ತಿರದ ಹಾಕಿ ಅಕಾಡೆಮಿಯಲ್ಲಿ ಆಡುತ್ತಿದ್ದ ಆಟಗಾರ್ತಿಯರಿಂದ ಸ್ಫೂರ್ತಿ ಪಡೆದಿದ್ದ ಇವರು ಹಾಕಿ ಕ್ರೀಡೆಯನ್ನು ಆಡಲು ನಿರ್ಧರಿಸಿದರು. ತನ್ನ ತಂದೆ- ತಾಯಿ ಬಂದು ಬಳಗದವರ ಕಡೆಯಿಂದ ಯಾವ ಬೆಂಬಲನೂ ಸಿಗದೆ ಮುರಿದ‌ ಸ್ಟಿಕ್​ನಲ್ಲೇ ಆಟ ಆಡಿ ಇಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಮಿಂಚಿದ್ದಾರೆ.

ಇವರಲ್ಲಿ ಇಡೀ ದೇಶವನ್ನು ಬಿಂಬಿಸಿ ಮಹಿಳಾ ತಂಡದ ವಿರುದ್ಧ ಆಡಿದ ಆಟಗಾರ್ತಿಯಲ್ಲಿ ರಾಣಿ ರಾಂಪಾಲ್ ಕೂಡ ಒಬ್ಬರು. ತನ್ನ 15 ನೇ ವಯಸ್ಸಿನಲ್ಲಿ 2010 ರ ವಿಶ್ವಕಪ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ್ತಿಯ ಹೆಗ್ಗಳಿಕೆ ಇವರದು. ಇವರು ರಾಣಿ ರಾಂಪಾಲ್, ಸವಿತಾ ಪುನಿಯಾ, ಗುರ್ಜಿತ್ ಕೌರ್, ಲಾಲ್ರೆಮ್ಸಿಯಾಮಿ, ವಂದನಾ ಕಟರಿಯಾ, ಸಲೀಮಾ ಟೆಟೆ, ದೀಪ್ ಗ್ರೇಸ್ ಎಕ್ಕಾ ಮತ್ತು ಸುಶೀಲಾ ಚಾನು ಹೀಗೆ ಹಾಕಿ ಆಟಗಾರ್ತಿಯರನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸೆಮಿಫೈನಲ್‌ಗೆ ಭೇಟಿಯಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಮೂರನೇ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಡೀಪ್ ಗ್ರೇಸ್ ಎಕ್ಕಾ ಮೂಲತಃ ಸುಂದರ್ಗರ್ ಜಿಲ್ಲೆಯ ಲುಲ್ಕಿಧಿ ಹಳ್ಳಿಯವರು. ಡೀಪ್ ಗ್ರೆಸ್ ಕುಟುಂಬ ಗಮನಾರ್ಹ ಸ್ಥಳೀಯ ಆಟಗಾರರು. ಮನೆಕೆಲಸ ಕಲಿಯುವ ಸಮಯದಲ್ಲಿ ಹಾಕಿ ಸ್ಟಿಕ್ ಕೈಗೆತ್ತಿಕೊಂಡಾಗ ಸುತ್ತಮುತ್ತಲಿನ ಜನರು ಟೀಕಿಸಿದರು. ಹಾಕಿ ಸ್ಟಿಕ್ ಹಿಡಿದು ಪುರುಷರ ಕ್ರೀಡೆ ಆಡುತ್ತಾಳೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಅತ್ತಕಡೆ ಗಮನಹರಿಸದ ಡೀಪ್ ಗ್ರೆಸ್ ಕೇವಲ 16 ನೇ ವಯಸ್ಸಿನಲ್ಲಿ ಸೋನೆಪತ್‌ನಲ್ಲಿ ಮೊದಲ ಬಾರಿ ಆಡಿದರು. ಹೀಗೆ ತನ್ನ ಛಲವನ್ನು ಬಿಡದ ಡೀಪ್ ಗ್ರೆಸ್​ಗೆ ಭಾರತ ಜೂನಿಯರ್ ತಂಡವನ್ನು ಪ್ರತಿಸಿಧಿಸಲು ಅವಕಾಶ ಸಿಕ್ಕಿತು. ನಂತರ ಅವರು ಜೂನಿಯರ್ ವಿಶ್ವಕಪ್ ಹಾಗೂ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಸುಶೀಲಾ ಚಾನು ಮಣಿಪುರದ ಇಂಫಾಲ್‌ನವರಾದ ಸುಶೀಲಾ ಚಾನು ತಂಡದ ಅತ್ಯಂತ ಅನುಭವಿ ಆಟಗಾರ್ತಿಯರಲ್ಲಿ ಒಬ್ಬರು. ತನ್ನ 11ನೇ ವಯಸ್ಸಿನಲ್ಲಿ ಕ್ರೀಡೆ ಆಡಲು ಪ್ರೇರೇಪಿಸಿದವರು ಇವರ ಚಿಕ್ಕಪ್ಪ. 2002ರಲ್ಲಿ ಮಣಿಪುರದ ಪೋಸ್ಟೀರಿಯರ್ ಹಾಕಿ ಅಕಾಡೆಮಿಗೆ ಸೇರಿದರು. ಮೃದು ಸ್ವಭಾವದ ವ್ಯಕ್ತಿಯಾದ ಚಾನು 2010 ರಿಂದ ಕೇಂದ್ರ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಕ್ರೀಡೆಯಲ್ಲಿ ಅಪಾರ‌ ಆಸಕ್ತಿಯನ್ನು ಹೊಂದಿದ್ದರು. ಇವರ ಈ ಪರಿಶ್ರಮದ ಫಲವೇ ಟೋಕಿಯೋ ಒಲಿಂಪಿಕ್ಸ್‌. ಈ ಸ್ಥಾನವನ್ನು ಕ್ರೀಡಾ ಕೋಟಾದ ಮೂಲಕ ಪಡೆದರು. ಇದು ತುಂಬಾ ದೂರ ಹೋಗುತ್ತದೆ ಎಂದು ನಾನು ಭಾವಿಸಿರಲಿಲ್ಲ, ಹಾಗಾಗಿ ನಾನು ಬಹುತೇಕ ಬಿಟ್ಟುಬಿಟ್ಟೆ. ಆದರೆ ಹಿರಿಯ ಆಟಗಾರರು ನನ್ನನ್ನು ಮರಳಿ ಪಡೆಯಲು ಒತ್ತಾಯಿಸಿದರು, ಎಂದು ಅವರು ಹಿಂದುಸ್ತಾನ್ ಟೈಮ್ಸ್‌ ಜೊತೆ ಮಾತನಾಡುವಾಗ ಹೇಳಿದರು.

ವಂದನಾ ಕಟಾರಿಯಾ ವಂದನಾ ಕಟಾರಿಯಾವರಿಗೆ ಚಿಕ್ಕ ವಯಸ್ಸಿನಿಂದಲೂ ಅದೇನೋ ಹಾಕಿ ಮೇಲೆ ಒಲವು. ಇವರು ಉತ್ತರಾಖಂಡದ ರೊಶ್ನಾಬಾದ್ ಎಂಬ ಹಳ್ಳಿಯಲ್ಲಿ ಜನಿಸಿದರು. ಪುಟ್ಟ ವಂದನಾ ತನ್ನ ತಂದೆ ನಹರ್ ಸಿಂಗ್ ಕಟಾರಿಯಾದಲ್ಲಿ ಒಬ್ಬ ಕುಸ್ತಿಪಟು. ಇವರು ಗುಪ್ತ ಸ್ಥಳದಲ್ಲಿ ಮರದ ಕೊಂಬೆಗಳೊಂದಿಗೆ ತನ್ನ ಹಾಕಿ ಅಭ್ಯಾಸ ಮಾಡುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಅಲ್ಲಿದ್ದ ಪ್ರತಿಯೊಬ್ಬರೂ ಅವರನ್ನು ಕ್ರೀಡೆಯಿಂದ ಕೈಬಿಡುವಂತೆ‌ ಒತ್ತಾಯಿಸುತ್ತಿದ್ದರು. ಯಾರ ಮಾತನ್ನು ಗಣನೆಗೆ ತೆಗೆದುಕೊಳ್ಳದ ವಂದನಾ ಕ್ರೀಡಾಭ್ಯಾಸ ಮಾಡುತ್ತಿದ್ದರು. ಟೋಕಿಯೋ ‌ಒಲಿಂಪಿಕ್ಸ್​ಗೆ ಆಯ್ಕೆಯಾಗಿ ತರಬೇತಿನಲ್ಲಿದ್ದ ಈಕೆಯ ತಂದೆ ತೀರಿಕೊಂಡರು. ಆದರೆ ಮನೆಗೆ‌ ಹೋಗಲು ಸಾಧ್ಯವಾಗಲಿಲ್ಲ. ಇಂತಹ ದುಃಖಕರವಾದ‌ ಸಂದರ್ಭದಲ್ಲೂ ವಂದನಾ 31 ಜುಲೈ 2021 ರಂದು, ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಗುರ್ಜಿತ್ ಕೌರ್ ಡ್ರ್ಯಾಗ್ ಫ್ಲಿಕರ್ ಗುರ್ಜಿತ್ ಕೌರ್ ಅಮೃತಸರದ ಮಿಯಾಡಿ ಕಲಾನ್​ನಲ್ಲಿ ರೈತರ ಕುಟುಂಬದಲ್ಲಿ ಜನಿಸಿದರು. ಹೆಚ್ಚಿನ ಸಮಯವನ್ನು ತನ್ನ ಸಹೋದರಿ ಜೊತೆ ಹಳ್ಳಿಯಲ್ಲೇ ಕಳೆದರು. ಹಾಕಿಯ ಬಗ್ಗೆ ಏನೂ ತಿಳಿದಿರಲ್ಲಿಲ್ಲ. ಕ್ರೀಡೆಯ ಕಡೆ‌ ಗಮನ ಹರಿಸದ ಗುರ್ಜಿತ್ 70 ಕಿಮೀ ದೂರದ ಬೋರ್ಡಿಂಗ್ ಶಾಲೆಗೆ ಹೋದಾಗ ಅವರಿಗೆ ಹಾಕಿಯ ಪರಿಚಯವಾಯಿತು. ಗುರ್ಜಿತ್‌ಗೆ ಹಾಕಿ ಆಟದ ಬಗ್ಗೆ ಏನೂ ತಿಳಿದಿರಲಿಲ್ಲ. ಆದ್ದರಿಂದ ಅವರು ಇತರ ಹುಡುಗಿಯರ ಆಟವನ್ನು ನೋಡುತ್ತಾ ಇಡೀ ದಿನವನ್ನು ಕಳೆಯುತ್ತಿದ್ದರು. ಕಾಲಕ್ರಮೇಣ ಹಾಕಿ ಆಟವನ್ನು ಗಮನಿಸುತ್ತಿದ್ದ ಇವರಿಗೆ ಹಾಕಿಯಲ್ಲಿ ಆಕರ್ಷಣೆ ಮೂಡಿತು. ಹಾಕಿ ಅಂದರೆ‌ ಏನೆಂದು ತಿಳಿಯದ‌ ಇವರು, ಇಂದು ವಿಶ್ವ ನಂ 4 ರ ವಿರುದ್ಧದ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಪಾಲ್ಗೊಳ್ಳುವ ಮಟ್ಟಕ್ಕೆ ಏರಿದ್ದರು. ವರ್ಷಗಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಪಂದ್ಯದ ನಂತರ ಮಾಧ್ಯಮಕ್ಕೆ ಗುರ್ಜಿತ್ ಹೇಳಿದರು.

ಸವಿತಾ ಪುನಿಯಾ ಗುರ್ಜಿತ್ ಕೌರ್ ಅವರ‌ ನಂತರ‌ ಗೋಲ್‌ಕೀಪರ್​ನಲ್ಲಿ ಮಿಂಚಿದವರು ಸವಿತಾ ಪುನಿಯಾ. ಇವರ ಆಟ ಭಾರತವು ಆಸ್ಟ್ರೇಲಿಯಾವನ್ನು 1-0 ಅಂತರದಲ್ಲಿ ಸೋಲಿಸಿ ತಮ್ಮ ಮೊದಲ ಒಲಿಂಪಿಕ್ಸ್ ಸೆಮಿಫೈನಲ್ ತಲುಪಲು ಸಹಾಯ ಮಾಡಿತು. ಚಿಕ್ಕ ಹುಡುಗಿಯಾಗಿದ್ದಾಗ, ಸವಿತಾ ತನ್ನ ಹಳ್ಳಿಯ (ಜೋಧ್ಕನ್) ಸಿರ್ಸಾದಲ್ಲಿರುವ ಮಹಾರಾಜ ಅಗ್ರಸೇನ್ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆಗೆ ತನ್ನ ಹಾಕಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿ ವಾರ 30 ಕಿಮೀ ಆರು ಬಾರಿ ಪ್ರಯಾಣಿಸುತ್ತಿದ್ದರು. ಈ ಶಾಲೆಯು ಆಕೆಯ ಹಳ್ಳಿಯ ಸುತ್ತಲೂ ಹಾಕಿ ತರಬೇತುದಾರರು ಹಾಗೂ ತರಬೇತಿ ಮೂಲಸೌಕರ್ಯಗಳನ್ನು ಹೊಂದಿರುವ ಏಕೈಕ ಸ್ಥಳವಾಗಿತ್ತು. ಅಜ್ಜನ ಪ್ರೋತ್ಸಾಹ ಕ್ರೀಡೆಯನ್ನು ಆಡಲು ಬಲಕೊಟ್ಟಿತು. ಸವಿತಾ ಮೊದಲು, ಆಕೆಯ ಕುಟುಂಬದಲ್ಲಿ ಯಾರೂ ಯಾವುದೇ ಕ್ರೀಡೆಯನ್ನು ವೃತ್ತಿಜೀವನವಾಗಿ ತೆಗೆದುಕೊಳ್ಳಲಿಲ್ಲ.

ಲಾಲ್ರೆಮ್ಸಿಯಾಮಿ ಮಿಜೋರಾಂನಲ್ಲಿ ಜನಿಸಿದ ಇವರು, ಎಫ್ಐಎಚ್ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡವರು. ವ್ಯವಸಾಯವೇ ಉಸಿರೆಂದು ಭಾವಿಸುತ್ತಿತ್ತು ಇವರ‌ ಕುಟುಂಬ. ತಂದೆಯ ಇವರ‌ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದ್ದರು. ಇವರ ತಂದೆ ಹಾಕಿ ಕನಸುಗಳನ್ನು ಮುಂದುವರಿಸಲು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಲಾಲ್ರೆಮ್ಸಿಯಾಮಿ ತಂಡವನ್ನು ಸೇರಿಕೊಂಡಾಗ, ಅವರು ಕೇವಲ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಲು ಸಾಧ್ಯವಾಗದೆ ಆರಂಭದಲ್ಲಿ ಸನ್ನೆಗಳಿಂದ ತನ್ನ ಜೊತೆಗಾರರೊಂದಿಗೆ ಸಂವಹನ ನಡೆಸುತ್ತಿದ್ದರು.

ಸಲೀಮಾ ಟೆಟೆ ಸಲಿಮಾ ಟೆಟೆ ರಾಜ್ಯದ ನಕ್ಸಲಿಸಂ ಪೀಡಿತ ಜಿಲ್ಲೆಗಳಲ್ಲಿ ಒಂದಾದ ಜಾರ್ಕಂಡ್‌ನ ಸಿಮ್‌ದೇಗದ ಬಡ್ಕಿಚಾಪರ್ ಹಳ್ಳಿಯವರು. ರೈತನ ಮಗಳಾದ ಇವರು ಹಾಕಿ ಆಟಕ್ಕೆ ಪಾದಾರ್ಪಣೆ ಮಾಡಿದರು. ಹಳ್ಳಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಹಳ್ಳಿಯಲ್ಲಿ ಎಲ್ಲರೂ ಹಾಕಿ ಆಡುತ್ತಿದ್ದರು. ಸಲೀಮಾ ಮರದ ತುಂಡುಗಳನ್ನು ಬಳಸುತ್ತಿದ್ದರು. ಏಕೆಂದರೆ ಕುಟುಂಬಕ್ಕೆ ಸರಿಯಾದ ಹಾಕಿ ಬ್ಲೇಡ್‌ಗಳನ್ನು ಕೊಂಡುಕೊಳ್ಳಲು ಹಣವಿರಲಿಲ್ಲ. ಇವರ ಈ ಛಲವೇ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಪಾತ್ರವಾಗುವಂತೆ ಮಾಡಿದೆ. ಅಲ್ಲದೆ, ಅವರ ಹಳ್ಳಿಯಿಂದ ಒಲಿಂಪಿಕ್ಸ್​ನಲ್ಲಿ ಆಡಿದ ಮೊದಲ ಆಟಗಾರ್ತಿಯಾಗಿ ಮಿಂಚಿದ್ದಾರೆ 19 ವರ್ಷದ ಸಲೀಮಾ.

Published On - 9:31 pm, Thu, 5 August 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ