BBL: ಆಟಗಾರರ ಕೊರತೆ, ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸಿದ ಕೋಚ್; ವಿಡಿಯೋ ನೋಡಿ
BBL 2025: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್ ತಂಡದ ಸಹಾಯಕ ಕೋಚ್ ಡೇನಿಯಲ್ ಕ್ರಿಶ್ಚಿಯನ್, ಆಟಗಾರರ ಕೊರತೆಯಿಂದಾಗಿ ಬ್ಯಾಟಿಂಗ್‌ಗೆ ಇಳಿದು ಅದ್ಭುತ ಇನಿಂಗ್ಸ್ ಆಡಿದರು. ಅವರ 23 ರನ್‌ಗಳ ಅಜೇಯ ಇನಿಂಗ್ಸ್‌ನಿಂದ ಸಿಡ್ನಿ ಥಂಡರ್ಸ್ ಉತ್ತಮ ಮೊತ್ತವನ್ನು ಗಳಿಸಿತಾದರೂ, ಬ್ರಿಸ್ಬೇನ್ ಹೀಟ್‌ಗೆ ಪಂದ್ಯದಲ್ಲಿ ಜಯ ಸಾಧಿಸಲು ಸಾಧ್ಯವಾಯಿತು.
11 ಆಟಗಾರರ ಕೊರತೆಯಿಂದಾಗಿ ತಂಡವೊಂದರ ಕೋಚ್ ಬ್ಯಾಟಿಂಗ್‌ಗೆ ಇಳಿದು ಸ್ಫೋಟಕ ಇನ್ನಿಂಗ್ಸ್ ಆಡಿರುವ ಘಟನೆ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ನಡೆದಿದೆ. ಇಂದು ನಡೆದ ಸಿಡ್ನಿ ಥಂಡರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಸಿಡ್ನಿ ಥಂಡರ್ಸ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವ ಆಟಗಾರರು ಇಂಜುರಿಗೆ ತುತ್ತಾಗಿದ್ದರಿಂದ ತಂಡದ ಸಹಾಯಕ ಕೋಚ್ ಆಗಿರುವ ಡೇನಿಯಲ್ ಕ್ರಿಶ್ಚಿಯನ್ ಬ್ಯಾಟ್ ಹಿಡಿದು ಮೈದಾನದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಆದಾಗ್ಯೂ ಸಿಡ್ನಿ ಥಂಡರ್ಸ್ ತಂಡಕ್ಕೆ ಬ್ರಿಸ್ಬೇನ್ ಹೀಟ್ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಕ್ರಿಶ್ಚಿಯನ್ ಅದ್ಭುತ ಪ್ರದರ್ಶನ
ಬ್ರಿಸ್ಬೇನ್ ಹೀಟ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಸಹಾಯಕ ಕೋಚ್ ಡೇನಿಯಲ್ ಕ್ರಿಶ್ಚಿಯನ್ ಅದ್ಭುತ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ತಂಡ ರನ್ ಗಳಿಸಲು ಹೆಣಗಾಡುತ್ತಿತ್ತು. ಆದರೆ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಡೇನಿಯಲ್ ಕ್ರಿಸ್ಟಿಯನ್ ತಮ್ಮ ತಂಡಕ್ಕೆ ಪ್ರಮುಖ ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. 15 ಎಸೆತಗಳನ್ನು ಎದುರಿಸಿದ ಅವರು 153.33 ಸ್ಟ್ರೈಕ್ ರೇಟ್‌ನಲ್ಲಿ 2 ಸಿಕ್ಸರ್ ಸಹಿತ ಅಜೇಯ 23 ರನ್ ಗಳಿಸಿದರು.
Dan Christian!
The 41-year-old has just smashed this Xavier Bartlett delivery 92 metres! #BBL14 pic.twitter.com/ZgbVIt9yeC
— KFC Big Bash League (@BBL) January 6, 2025
ಅರ್ಧಶತಕ ಸಿಡಿಸಿದ ವಾರ್ನರ್
ಡೇನಿಯಲ್ ಕ್ರಿಸ್ಟಿಯನ್ ಅವರ ಈ ಪ್ರಬಲ ಇನ್ನಿಂಗ್ಸ್‌ನಿಂದಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಡೇನಿಯಲ್ ಕ್ರಿಸ್ಟಿಯನ್ ಹೊರತಾಗಿ ತಂಡದ ನಾಯಕ ಡೇವಿಡ್ ವಾರ್ನರ್ ಕೂಡ ಉತ್ತಮ ಇನಿಂಗ್ಸ್ ಆಡಿದರು. ಡೇವಿಡ್ ವಾರ್ನರ್ 36 ಎಸೆತಗಳಲ್ಲಿ 138.88 ಸ್ಟ್ರೈಕ್ ರೇಟ್‌ನಲ್ಲಿ 7 ಬೌಂಡರಿ ಸಹಿತ 50 ರನ್ ಗಳಿಸಿದರು.
ಬ್ರಿಸ್ಬೇನ್ ಹೀಟ್‌ಗೆ ಜಯ
ಆದರೆ ಈ ಇಬ್ಬರ ಆಟದ ಹೊರತಾಗಿಯೂ ಸಿಡ್ನಿ ಥಂಡರ್ಸ್ ತಂಡಕ್ಕೆ ಪಂದ್ಯದಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಗೆಲುವಿಗೆ 173 ರನ್‌ಗಳ ಗುರಿ ಬೆನ್ನಟ್ಟಿದ ಬ್ರಿಸ್ಬೇನ್ ಹೀಟ್ ತಂಡವು 18.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ತಂಡದ ಪರ ಮ್ಯಾಕ್ಸ್ ಬ್ರ್ಯಾಂಟ್ 73 ರನ್ ಹಾಗೂ ಮ್ಯಾಟ್ ರೆನ್ಶಾ 48 ರನ್‌ಗಳ ಇನ್ನಿಂಗ್ಸ್ ಆಡಿ ಗೆಲುವಿನ ರೂವಾರಿಗಳಾದರು.
2023 ರಲ್ಲಿ ಡೇನಿಯಲ್ ಕ್ರಿಶ್ಚಿಯನ್ ನಿವೃತ್ತಿ
ಡೇನಿಯಲ್ ಕ್ರಿಶ್ಚಿಯನ್ ಅವರು 2023 ರ ಆರಂಭದಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆ ಸಮಯದಲ್ಲಿ ಬಿಗ್ ಬ್ಯಾಷ್ ಲೀಗ್ ಅವರ ಕೊನೆಯ ವೃತ್ತಿಪರ ಕ್ರಿಕೆಟ್ ಪಂದ್ಯಾವಳಿಯಾಗಿತ್ತು. ಡೇನಿಯಲ್ ಕ್ರಿಶ್ಚಿಯನ್ ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ಅವರು ಆಸ್ಟ್ರೇಲಿಯಾ ಪರ 20 ಏಕದಿನ ಮತ್ತು 23 ಟಿ20 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಏಕದಿನದಲ್ಲಿ 273 ರನ್ ಗಳಿಸಿ 20 ವಿಕೆಟ್ ಕಬಳಿಸಿರುವ ಅವರ ಟಿ20ಯಲ್ಲಿ 118 ರನ್ ಮತ್ತು 13 ವಿಕೆಟ್ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ