ಟೋಕಿಯೋ ಒಲಿಂಪಿಕ್ಸ್‌ನ (Tokyo Olympics) ಹಾಕಿಯಲ್ಲಿ ಭಾರತ ತಂಡ ಬರೋಬ್ಬರಿ 41 ವರ್ಷಗಳ ಪದಕದ ಬರವನ್ನು ನೀಗಿಸಿದೆ. ಇಂದು ನಡೆದ ಪಂದ್ಯದಲ್ಲಿ ಜರ್ಮನಿ ತಂಡವನ್ನು ಭಾರತ ಪುರುಷರ ಹಾಕಿ ತಂಡ 5-4 ಗೋಲುಗಳ ಅಂತರದಿಂದ ಜಯಿಸಿದ್ದು, ಇದರೊಂದಿಗೆ 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದ್ದಕ್ಕೆ ಇಡೀ ದೇಶವೇ ತಲೆಬಾಗಿದೆ. ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಭಾರತದ ಅಮೋಘ ಜಯಕಂಡು ಹಾಡಿಹೊಗಳಿದ್ದಾರೆ. “ಇದೊಂದು ಐತಿಹಾಸಿಕ ಕ್ಷಣ. ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಈ ದಿನ ಮರೆಯಲು ಸಾಧ್ಯವಿಲ್ಲ. ಕಂಚು ಗೆದ್ದ ನಮ್ಮ ಭಾರತದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಈ ಸಾಧನೆಯೊಂದಿಗೆ ಅವರು ಇಡೀ ರಾಷ್ಟ್ರದ ಜೊತೆ ನಮ್ಮ ಯುವಕರ ಕಲ್ಪನೆಯನ್ನು ಸೆರೆಹಿಡಿದಿದ್ದಾರೆ. ಭಾರತ ನಮ್ಮ ಹಾಕಿ ತಂಡದ ಬಗ್ಗೆ ಹೆಮ್ಮೆ ಪಡುವಂತಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Historic! A day that will be etched in the memory of every Indian.
Congratulations to our Men’s Hockey Team for bringing home the Bronze. With this feat, they have captured the imagination of the entire nation, especially our youth. India is proud of our Hockey team. ?
— Narendra Modi (@narendramodi) August 5, 2021
ಇವರ ಜೊತೆಗೆ ಅನಿಲ್ ಕುಂಬ್ಳೆ, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಕ್ರಿಕೆಟಿಗರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
Inspirational win by #MensHockeyTeam Congratulations ? #MEDAL for India #Bronze #Olympics
— Anil Kumble (@anilkumble1074) August 5, 2021
Forget 1983, 2007 or 2011, this medal in Hockey is bigger than any World Cup! #IndianHockeyMyPride ?? pic.twitter.com/UZjfPwFHJJ
— Gautam Gambhir (@GautamGambhir) August 5, 2021
Wooohooooooo yessss !!!!! ? #Hockey What a match… Indiaaaaa India ?? ????.. Congratulations @TheHockeyIndia . That last penalty corner . @16Sreejesh ????
— Parupalli Kashyap (@parupallik) August 5, 2021
ಒಲಿಂಪಿಕ್ಸ್ ಹಾಕಿಯಲ್ಲಿ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಕಂಚಿನ ಪದಕ ಜಯಿಸುವ ಮೂಲಕ ಭಾರತ ಹಾಕಿಯಲ್ಲಿ ಹೊಸ ಯುಗ ಆರಂಭಸಿದೆ. ಕಂಚಿನ ಪದಕಕ್ಕಾಗಿ ನಡೆದ ಸೆಣೆಸಾಟದಲ್ಲಿ ಜರ್ಮನಿ ತಂಡದ ಸವಾಲನ್ನು ಭಾರತ 5-4 ಅಂತರದಿಂದ ಹಿಮ್ಮೆಟ್ಟಿಸಿತು. ಈ ಮೂಲಕ 1980ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ಪದಕ ಸಾಧನೆ ಮಾಡಿತು. ಈ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ನಾಲ್ಕನೇ ಪದಕವನ್ನು ಬುಟ್ಟಿಗೆ ಹಾಕಿಕೊಂಡಿತು.
Tokyo Olympics: ಕಂಚಿನ ಪದಕ ಗೆದ್ದು ಭಾರತ ಹಾಕಿ ತಂಡದ ಐತಿಹಾಸಿಕ ಸಾಧನೆ: 41 ವರ್ಷದ ಬಳಿಕ ಚೊಚ್ಚಲ ಪದಕ
Tokyo Olympics: ಭಾರತಕ್ಕಿಂದು ಎರಡು ಪದಕದ ನಿರೀಕ್ಷೆ: ಹಾಕಿ ತಂಡದ ಮೇಲೆ ಎಲ್ಲರ ಕಣ್ಣು
(Tokyo Olympics 2020 PM Nrendra Modi congratulates India mens hockey team for winning bronze medal in Olympics)