Tokyo olympics: ಲವ್ಲಿನಾ ಬದುಕು ಬದಲಿಸಿತು ಹರಿದ ನ್ಯೂಸ್ ಪೇಪರ್; ಕಂಚಿನ ಪದಕ ವಿಜೇತೆ ಬಾಕ್ಸರ್​ ಬಗ್ಗೆ ನಿಮಗೇಷ್ಟು ಗೊತ್ತು?

| Updated By: ಪೃಥ್ವಿಶಂಕರ

Updated on: Aug 04, 2021 | 5:02 PM

Lovlina Borgohain: ಲವ್ಲಿನಾ ವೃತ್ತಪತ್ರಿಕೆಯಲ್ಲಿ ಮೊಹಮ್ಮದ್ ಅಲಿಯ ಬಗ್ಗೆ ಬರೆದಿದ್ದ ಸುದ್ದಿಯನ್ನು ಓದಿದ ನಂತರ ಬಾಕ್ಸಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರಂತೆ.

1 / 5
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಆಟಗಾರ್ತಿಯರು ಮಿಂಚುತ್ತಿದ್ದಾರೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಗೆದ್ದ ನಂತರ ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನಾ ಕೂಡ ಕಂಚಿನ ಪದಕ ಗೆದ್ದಿದ್ದಾರೆ. ಅಸ್ಸಾಂನ ಒಂದು ಸಣ್ಣ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಲವ್ಲಿನಾ ತನ್ನ ಒಲಿಂಪಿಕ್ ರಿಂಗ್‌ಗೆ ಪ್ರಯಾಣದಲ್ಲಿ ಅನೇಕ ಹೋರಾಟಗಳನ್ನು ಎದುರಿಸಿದ್ದಾರೆ.

2 / 5
ಲವ್ಲಿನಾ 2 ಅಕ್ಟೋಬರ್ 1997 ರಂದು ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿ ಟಿಕನ್ ಮತ್ತು ಮಾಮೋನಿ ಬೊರ್ಗೊಹೈನ್ ದಂಪತಿಗೆ ಜನಿಸಿದರು. ಲವ್ಲಿನಾಗೆ ಒಟ್ಟು ಮೂರು ಸಹೋದರಿಯರಿದ್ದಾರೆ. ಅದಕ್ಕಾಗಿಯೇ ಅವರು ನೆರೆಹೊರೆಯವರಿಂದ ಅನೇಕ ನಿಂದನೆಯ ಮಾತುಗಳನ್ನು ಕೇಳಬೇಕಾಯ್ತು. ಆದರೆ ಇದನ್ನೆಲ್ಲ ಕಡೆಗಣಿಸಿ, ಹಿರಿಯ ಅವಳಿ ಸಹೋದರಿಯರಾದ ಲಿಚಾ ಮತ್ತು ಲಿಮಾ ಇಬ್ಬರೂ ಕಿಕ್ ಬಾಕ್ಸಿಂಗ್ ಆರಂಭಿಸಿದರು, ನಂತರ ಲವ್ಲಿನಾ ಕೂಡ ಕಿಕ್ ಬಾಕ್ಸಿಂಗ್​ನಲ್ಲಿ ತೊಡಗಿಸಿಕೊಂಡರು.

3 / 5
ಬಾಲ್ಯದ ಒಂದು ವೃತ್ತಾಂತವನ್ನು ವಿವರಿಸಿದ ಲವ್ಲಿನಾರ ತಾಯಿ ಮಾಮೋನಿ ಬೊರ್ಗೊಹೈನ್, ಒಮ್ಮೆ ಲವ್ಲಿನಾರ ತಂದೆ ಅವರಿಗೆ ಸಿಹಿತಿಂಡಿಗಳನ್ನು ತಂದಿದ್ದರಂತೆ. ಆದರೆ ಲವ್ಲಿನಾ ಸಿಹಿತಿಂಡಿಗಳನ್ನು ಸುತ್ತಿದ ವೃತ್ತಪತ್ರಿಕೆಯನ್ನು ಓದಲು ಪ್ರಾರಂಭಿಸಿದರಂತೆ. ವೃತ್ತಪತ್ರಿಕೆಯಲ್ಲಿ ಲವ್ಲಿನಾ ಮೊಹಮ್ಮದ್ ಅಲಿಯ ಬಗ್ಗೆ ಬರೆದಿದ್ದ ಸುದ್ದಿಯನ್ನು ಓದಿ ನಂತರ ಬಾಕ್ಸಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರಂತೆ.

4 / 5
  ಭಾರತೀಯ ಕ್ರೀಡಾ ಪ್ರಾಧಿಕಾರ ಲವ್ಲಿನಾ ಅವರ ಪ್ರತಿಭೆಯನ್ನು ಪ್ರಾಥಮಿಕ ಶಾಲಾ ಹಂತದಲ್ಲೆ ಗುರುತಿಸಿ ಪ್ರೋತ್ಸಾಹಿಸಲಾರಂಭಿಸಿತು . ಆಕೆಯ ಶ್ರಮದ ಫಲವಾಗಿ ಐದು ವರ್ಷಗಳಲ್ಲಿ ಲೊವ್ಲಿನಾ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆಲ್ಲಲು ಸಾಧ್ಯವಾಯಿತು.

5 / 5
2012 ರಲ್ಲಿ ತನ್ನ ಬಾಕ್ಸಿಂಗ್ ವೃತ್ತಿಜೀವನವನ್ನು ಆರಂಭಿಸಿದ ಲವ್ಲಿನಾ, 2018 ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಈ ಆಯ್ಕೆಯ ಬಗ್ಗೆ ವಿವಾದವಿದ್ದರೂ ಲವ್ಲಿನಾಗೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಲವ್ಲಿನಾ ಇಲ್ಲಿ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ನಂತರ ಅವರು ಒಲಿಂಪಿಕ್ಸ್​ನಲ್ಲಿ ಕನಸನ್ನು ನನಸು ಮಾಡಿಕೊಂಡ