Neeraj Chopra Gold: ಚಿನ್ನ ಗೆದ್ದ ನೀರಜ್​ಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

| Updated By: ಪೃಥ್ವಿಶಂಕರ

Updated on: Aug 07, 2021 | 6:30 PM

Tokyo Olympics 2020: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್​ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Neeraj Chopra Gold: ಚಿನ್ನ ಗೆದ್ದ ನೀರಜ್​ಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ
ಅಲ್ಲದೆ, ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಿಕ್ಕ ಜನರ ಪ್ರೀತಿ ಹಾಗೂ ಸ್ವಾಗತಕ್ಕೆ ಖುಷಿ ವ್ಯಕ್ತಪಡಿಸಿದ ನೀರಜ್, ಪ್ರತಿ ಕ್ರೀಡಾಪಟುವೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಾರೆ. ನಾನು ಚಿನ್ನ ಗೆದ್ದಿದ್ದೇನೆ ಮತ್ತು ಅದನ್ನು ನಂಬಲು ಸಾಧ್ಯವಾಗಲಿಲ್ಲ. ಏಕೆಂದರೆ ಸ್ಪರ್ಧೆಯು ತುಂಬಾ ಕಠಿಣವಾಗಿತ್ತು. ಅನೇಕ ಉತ್ತಮ ಎಸೆತಗಾರರು ಇದ್ದರು. ಆದರೆ ನನ್ನ ಕಠಿಣ ಪರಿಶ್ರಮಕ್ಕೆ ಚಿನ್ನದಂತಹ ಫಲ ಸಿಕ್ಕಿತು ಎಂದರು.
Follow us on

ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನವನ್ನು ಘೋಷಿಸಿತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್​ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಜೆಕ್ ಗಣರಾಜ್ಯ ಜೋಡಿಯಾದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲಲು 23 ವರ್ಷದ ನೀರಾಜ್ 87.58 ಮೀಟರ್ ಎಸೆತವನ್ನು ಎಸೆದು ಇತಿಹಾಸ ಸೃಷ್ಟಿಸಿದರು. ಈ ಪದಕ, ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕ. 2008 ರ ಬೀಜಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದ ನಂತರ ಒಲಿಂಪಿಕ್ ಇತಿಹಾಸದಲ್ಲಿ ದೇಶಕ್ಕೆ ಸಿಕ್ಕ ಎರಡನೇ ವೈಯಕ್ತಿಕ ಚಿನ್ನದ ಪದಕವಾಗಿದೆ.

ನೀರಜ್ ಪ್ರದರ್ಶನ ಹೀಗಿತ್ತು
ನೀರಜ್ ತನ್ನ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದರು. ಎರಡನೇ ಪ್ರಯತ್ನದಲ್ಲಿ, ನೀರಜ್ 87.58ಮೀಟರ್ ಎಸೆದರು. ನೀರಜ್ ಅವರ ಮೂರನೇ ಪ್ರಯತ್ನ ಸರಿಯಾಗಿರಲಿಲ್ಲ. ಅವರು 76.79 ಮೀಟರ್ ಎಸೆತವನ್ನು ಮಾತ್ರ ಸಾಧ್ಯವಾಯಿತು. ನಾಲ್ಕನೇ ಮತ್ತು ಐದನೇ ಪ್ರಯತ್ನದಲ್ಲಿ ನೀರಜ್ ಫೌಲ್ ಆದರು. ಕೊನೆಯ ಪ್ರಯತ್ನದಲ್ಲಿ ನೀರಜ್ 84 ಮೀಟರ್ ಎಸೆದರು. ನೀರಜ್ ಅರ್ಹತೆಯ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರ ಎಸೆದು ಫೈನಲ್ ತಲುಪಿದರು. 12 ಆಟಗಾರರು ಫೈನಲ್ ತಲುಪಿದ್ದರು, ಅದರಲ್ಲಿ ನೀರಜ್ ನಂಬರ್ ಒನ್ ಆಗಿದ್ದರು ಮತ್ತು ಶನಿವಾರ ಅವರು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸುವಲ್ಲಿ ಯಶಸ್ವಿಯಾದರು.

Published On - 6:27 pm, Sat, 7 August 21