Tokyo Olympics: ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ ಪೂಜಾ ರಾಣಿ; ಚೊಚ್ಚಲ ಪದಕ ಗೆಲ್ಲುವ ಕನಸು ನುಚ್ಚುನೂರು

Tokyo Olympics: ಮಹಿಳೆಯರ ಮಿಡಲ್ ವೇಟ್​ನಲ್ಲಿ ಭಾರತದ ಪೂಜಾ ರಾಣಿ ಕ್ವಾರ್ಟರ್ ಫೈನಲ್​ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಬಾಕ್ಸಿಂಗ್​ನಲ್ಲಿ ಎರಡನೇ ಪದಕದ ನಿರೀಕ್ಷೆ ಹುಸಿಯಾಯಿತು.

Tokyo Olympics: ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ ಪೂಜಾ ರಾಣಿ; ಚೊಚ್ಚಲ ಪದಕ ಗೆಲ್ಲುವ ಕನಸು ನುಚ್ಚುನೂರು
ಪೂಜಾ ರಾಣಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 31, 2021 | 6:17 PM

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತದ ಬಾಕ್ಸಿಂಗ್ ವಿಭಾಗದಲ್ಲಿ ಪದಕದ ನಿರೀಕ್ಷೆಗಳು ಹುಸಿಯಾಗಿವೆ. ಮಹಿಳೆಯರ ಮಿಡಲ್ ವೇಟ್​ನಲ್ಲಿ ಭಾರತದ ಪೂಜಾ ರಾಣಿ ಕ್ವಾರ್ಟರ್ ಫೈನಲ್​ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಬಾಕ್ಸಿಂಗ್​ನಲ್ಲಿ ಎರಡನೇ ಪದಕದ ನಿರೀಕ್ಷೆ ಹುಸಿಯಾಯಿತು. 75 ಕೆಜಿ ವಿಭಾಗದಲ್ಲಿ ಚೀನಾದ ಬಾಕ್ಸರ್ ಲಿ ಕಿಯಾನ್ ಅವರನ್ನು ಎದುರಿಸಿದ ಪೂಜಾ ಪ್ರಬಲ ಹೋರಾಟ ನಡೆಸಿದರು. ಆದರೆ ಚೀನಾದ ಬಾಕ್ಸರ್ ಅನುಭವ ಪೂಜಾ ಮೇಲೆ ಒತ್ತಡ ಹೆರಿತು. ಏಕಪಕ್ಷೀಯ ನಿರ್ಧಾರದಲ್ಲಿ ಪೂಜಾ 5-0 ಅಂತರದಿಂದ ಸೋತರು. ಪೂಜಾಗೆ ಪದಕ ಖಚಿತವಾಗಲು ಈ ಪಂದ್ಯವನ್ನು ಗೆಲ್ಲುವುದು ಅಗತ್ಯವಾಗಿತ್ತು.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 30 ವರ್ಷದ ಪೂಜಾ ರಾಣಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚೀನಾ ಲಿ ಕಿಯಾನ್ ವಿರುದ್ಧ ಆಕ್ರಮಣಕಾರಿಯಾಗಿ ಆರಂಭಿಸಿದರು. ಮೊದಲ ಸುತ್ತಿನಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಹೊಡೆಯಲು ಯಶಸ್ವಿಯಾದರು. ಆದರೆ ಎರಡನೇ ಶ್ರೇಯಾಂಕದ ಲಿ ಕಿಯಾನ್ ಅವರ ಹೊಡೆತಗಳಲ್ಲಿ ಹೆಚ್ಚು ನಿಖರತೆ ಇತ್ತು. ಈ ಕಾರಣದಿಂದಾಗಿ ಎಲ್ಲಾ ಐವರು ತೀರ್ಪುಗಾರರು ಲಿ ಕಿಯಾನ್​ಗೆ ಮೊದಲ ಸುತ್ತಿನಲ್ಲಿ 10-10 ಅಂಕಗಳನ್ನು ನೀಡಿದರು, ಆದರೆ ಪೂಜಾ 9-9 ಅಂಕಗಳನ್ನು ಪಡೆದರು.

ಎರಡನೇ ಸುತ್ತಿನಲ್ಲಿ ಇನ್ನಷ್ಟು ಮಾರಕ ಮೊದಲ ಸುತ್ತಿನಲ್ಲಿ ಕಿಯಾನ್ ನ ಪ್ರಾಬಲ್ಯವು ಎರಡನೇ ಸುತ್ತಿನಲ್ಲಿ ಇನ್ನಷ್ಟು ಮಾರಕ ಆಟವಾಗಿ ಮಾರ್ಪಟ್ಟಿತು. ಕೆಲವು ಸಂದರ್ಭಗಳಲ್ಲಿ, ಅವರು ಏಕಕಾಲದಲ್ಲಿ ಹಲವಾರು ಹೊಡೆತಗಳನ್ನು ಹೊಡೆದರು. ಕಿಯಾನ್‌ರ ಪ್ರಬಲ ಆಲ್‌ರೌಂಡ್ ಆಟ ಮತ್ತು ಪೂಜಾ ರಾಣಿಯ ದುರ್ಬಲ ರಕ್ಷಣೆಯು ಅವರ ಮೇಲೆ ಭಾರವನ್ನು ಹೊರಿಸಿತು. ಎರಡನೇ ಸುತ್ತಿನಲ್ಲೂ, ನಿರ್ಧಾರವು ಕಿಯಾನ್‌ನ ಪರವಾಗಿ 10-9 ಆಗಿತ್ತು. ಕೊನೆಯ ಸುತ್ತಿನಲ್ಲಿ, ಪೂಜಾಗೆ ಪುನರಾಗಮನ ಮಾಡಲು ಅವಕಾಶವಿರಲಿಲ್ಲ ಮತ್ತು ರಿಯೋ ಒಲಿಂಪಿಕ್ಸ್ 2016 ರ ಬೆಳ್ಳಿ ಪದಕ ವಿಜೇತೆ ಲಿ ಕಿಯಾನ್ ಅವರು 5-0 ಅಂತರದಿಂದ ಪೂಜಾ ಅವರನ್ನು ಸೋಲಿಸಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದರು.

ಈಗ ಕೇವಲ 2 ಬಾಕ್ಸರ್‌ಗಳು ಮಾತ್ರ ಉಳಿದಿದ್ದಾರೆ ಭಾರತ ಇಂದು ಬಾಕ್ಸಿಂಗ್‌ನಲ್ಲಿ ತನ್ನ ಎರಡನೇ ನಿರಾಶೆಯನ್ನು ಪಡೆಯಿತು. ಮುಂಜಾನೆ, ಅಮಿತ್ ಪಂಘಲ್, ನಂಬರ್ ಒನ್ ಬಾಕ್ಸರ್ ಮತ್ತು ಪದಕದ ಭಾರತದ ಬಹುದೊಡ್ಡ ಭರವಸೆ, ಕೊನೆಯ 16 ರಲ್ಲಿ ಫ್ಲೈವೇಟ್ (52 ಕೆಜಿ) ನಲ್ಲಿ 1-4 ಸೋಲು ಅನುಭವಿಸಿದರು. ಒಲಿಂಪಿಕ್‌ಗೆ ಪಾದಾರ್ಪಣೆ ಮಾಡುತ್ತಿದ್ದ ಪಂಘಾಲ್, ಆರಂಭಿಕ ಸುತ್ತಿನಲ್ಲಿ ಬೈ ಪಡೆದರು. ಈ ಕಾರಣದಿಂದಾಗಿ ಇದು ಅವರ ಮೊದಲ ಪಂದ್ಯವಾಗಿತ್ತು. ಆದರೆ ಅವರು ಪದಕದ ಸುತ್ತನ್ನು ತಲುಪುವುದನ್ನು ತಪ್ಪಿಸಿಕೊಂಡರು. ಭಾರತದ ಬಾಕ್ಸಿಂಗ್‌ನಲ್ಲಿ, ಲೊವ್ಲಿನಾ ಬೊರ್ಗೊಹೈನ್ ಪದಕದ ಭರವಸೆ ನೀಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮತ್ತೊಂದೆಡೆ, ಆಗಸ್ಟ್ 1 ಭಾನುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಸತೀಶ್ ಕುಮಾರ್ ಅವರಿಂದ ನಿರೀಕ್ಷೆಗಳು ಹೆಚ್ಚಾಗಿವೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ